Asianet Suvarna News Asianet Suvarna News

ನಂದಿನಿ ಹಾಲಿನ ದರ 5 ರೂ. ಹೆಚ್ಚಳ: ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧಾರ

ಕರ್ನಾಟಕ ಹಾಲು ಒಕ್ಕೂಟಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಭೀಮಾನಾಯ್ಕ ಅವರು, ನಂದಿನಿ ಹಾಲಿನ ದರವನ್ನು 5 ರೂ. ಹೆಚ್ಚಳ ಮಾಡುವ ನಿರ್ಧಾರ ತಿಳಿಸಿದ್ದಾರೆ.

KMF new President Bhimanaik decided to Nandini milk price increase five rupees sat
Author
First Published Jun 21, 2023, 2:35 PM IST

ಬೆಂಗಳೂರು (ಜೂ.21): ರಾಜ್ಯದ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ರೈತರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ನೂತನ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಎಂಎಫ್‌ ಅಧ್ಯಕ್ಷರಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಿರಿಯರ ಶ್ರಮದಿಂದ ಈ ಮಟ್ಟಕ್ಕೆ ಬಂದು ನಿಂತಿದೆ. ಸರ್ಕಾರದ ಮಾರ್ಗದರ್ಶನದ ಜತೆಗೆ ರೈತರು, ಗ್ರಾಹಕರ ಸಹಕಾರ ಕೋರುತ್ತೇನೆ. ನಂದಿನಿ ಹಾಲು ರಾಷ್ಟ್ರಮಟ್ಟದ ಬ್ರಾಂಡ್ ಆಗಿದೆ.  ಖಾಸಗಿಯವರಿಗೆ ಸ್ಪರ್ಧೆ ನೀಡುವ ಕೆಲಸವನ್ನ ಕೆಎಂಎಫ್ ಮಾಡಲಿದೆ. ಚರ್ಮಗಂಟು ರೋಗದಿಂದ ಹಾಲು ಕಡಿಮೆಯಾಗಿತ್ತು. ಹೀಗಾಗಿ ತುಪ್ಪದ ಕೊರತೆ ಉಂಟಾಗಿತ್ತು ಎಂದು ಮಾಹಿತಿ ನೀಡಿದರು.

ಕೆಎಂಎಫ್‌ ಅಧ್ಯಕ್ಷರಾಗಿ ಶಾಸಕ ಭೀಮಾನಾಯ್ಕ್‌ ಅವಿರೋಧ ಆಯ್ಕೆ

ರೈತರಿಗೆ 2 ರೂ. ಪ್ರೋತ್ಸಾಹಧನ ಹೆಚ್ಚಳ:  ಹಾಲಿನ ದರ ಹೆಚ್ಚಳ ವಿಚಾರವಾಗಿ ಮುಖ್ಯಮಂತ್ರಿನ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಕರ್ನಾಟಕ ಹಾಲು ಒಕ್ಕೂಟದಿಂದ ಬೆಲೆ ಏರಿಕೆ ಮಾಡುವಂತೆ ಮನವಿ ಬಂದಿದೆ. ರೈತರಿಗೆ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರೋತ್ಸಾಹಧನ ಮೊತ್ತವನ್ನು ಇನ್ನೂ 2 ರೂ.  ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಆದ್ದರಿಂದ ಗ್ರಾಹಕರಿಕೆ ಮಾರಾಟ ಮಾಡುವ ನಂದಿನಿ ಹಾಲಿನ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಹಾಲಿನ ದರ ಹೆಚ್ಚಳದ ಮುನ್ಸೂಚನೆ ನೀಡಿದ ಸಚಿವ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸುವ ಸಭೆಯಲ್ಲಿ ರೈತರ ಹಿತ ಕಾಯುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು. ಜೊತೆಗೆ, ಆ ಸಭೆಯಲ್ಲಿ ಹಾಲು ಹಾಕುವಂತಹ ರೈತರಿಗೆ ಹೆಚ್ಚಿನ ಲಾಭ ಸಿಗಲು ತೀರ್ಮಾನ ಕೈಗೊಳ್ಳಲಾಗುವುದು. ರೈತರಿಂದ ಹಾಲು ಖರೀದಿ ದರ ಹೆಚ್ಚಳ ಮಾಡಬೇಕಾಗಿದೆ. ಗ್ರಾಹಕರಿಗೂ ನೀಡುವ ಹಾಲಿನ ದರದಲ್ಲೂ ಹೆಚ್ಚಳ ಮಾಡಬೇಕಾಗಿದೆ. ಈ ಮೂಲಕ ಹಾಲಿನ ದರ ಹೆಚ್ಚಳದ ಬಗ್ಗೆ ಸಹಕಾರ ಸಚಿವ ರಾಜಣ್ಣ ಮುನ್ಸೂಚನೆ ನೀಡಿದರು. 

ಸರ್ಕಾರಿ ಶಾಲಾ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಕಾಂಗ್ರೆಸ್‌ : ವಾರಕ್ಕೊಂದೇ ಮೊಟ್ಟೆ

ಅಮುಲ್‌ ಜೊತೆ ವಿಲೀನ ಎಂದವರು ಹುಚ್ಚರು:  ರಾಜ್ಯದ ಕೆಎಂಎಫ್‌ನ ನಂದಿನಿ ಹಾಲನ್ನು ಅಮೂಲ್ ಜೊತೆ ಮಾಡಲಾಗುತ್ತದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜಣ್ಣ, ಯಾರು ಅದನ್ನ ಹೇಳಿದವರು ಹಾಗೆ ಹೇಳಿದವರು, ಅವರು ಹುಚ್ಚರಾ? ವಿಲೀನಾ ಅಂದವರು ಹುಚ್ಚರು, ಯಾವ ವಿಲೀನದ ಪ್ರಶ್ನೆಯೇ ಇಲ್ಲ. ನಾವು ನಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಹೋದ್ರೆ ನಮಗೆ ಒಳೆಯ ಮಾರ್ಕೆಟ್ ಇರುತ್ತದೆ. ಯಾರು ಇನ್ಮುಂದೆ ವಿಲೀನದ ಬಗ್ಗೆ ಮಾತನಾಡೋದಕ್ಕೆ ಹೋಗಬೇಡಿ ಎಂದರು.

Follow Us:
Download App:
  • android
  • ios