ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆ ಗಿಫ್ಟ್!

ವಲಸೆ ಕಾರ್ಮಿಕರು ಸೇರಿದಂತೆ ಪ್ರಯಾಣಿಕರಿಗೆ ರೈಲು ಸೇವೆ ಆರಂಭಿಸಲಾಗಿದೆ. ಈ ಮೂಲಕ ಈಗಾಗಲೇ ಹಲವರು ತಮ್ಮ ತಮ್ಮ ಊರು ಸೇರಿಕೊಂಡಿದ್ದಾರೆ. ಇದೀಗ ಶ್ರಮಿಕ ರೈಲು ಪ್ರಯಾಣ ಮಾಡತ್ತಿರುವ ಮಕ್ಕಳಿಗೆ ಸೌತ್ ವೆಸ್ಟರ್ನ್ ರೈಲ್ವೇ ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುತ್ತಿದೆ. ಈ ಮೂಲಕ 2 ಮಹತ್ ಕಾರ್ಯವನ್ನು ಮಾಡಿದೆ.

Kids travelling in Shramik Special trains were gifted Channapatna toys

ಮೈಸೂರು(ಮೇ.19): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬೇರೆ ಬೆರೆ ನಗರ ಪಟ್ಟಗಳಲ್ಲಿ, ಇತರ ರಾಜ್ಯಗಳಲ್ಲಿ ಸಿಲುಕಿಕೊಂಡವರನ್ನು ಮತ್ತೆ ತಮ್ಮ ತಮ್ಮ ಊರುಗಳಿಗೆ ಸೇರಿಸಲು ಕೇಂದ್ರ ಸರ್ಕಾರ ಶ್ರಮಿಕ ರೈಲು ಸೇವೆ ಆರಂಭಿಸಿದೆ. ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡಿದೆ. ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.

ಕಸಮುಕ್ತ ನಗರ: ಮತ್ತೆ ಟಾಪಾಗಿಬಂದ ಮೈಸೂರು! ಕರ್ನಾಟಕದ ಹಿರಿಮೆ

ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡುವ ಮೂಲಕ ಮಕ್ಕಳ ಮುಖದಲ್ಲಿ ನಗು ನೋಡುತ್ತಿದ್ದೇವೆ. ಮಕ್ಕಳ ಸಂತೋಷದಲ್ಲಿ ನಾವು ಪಾಲುದಾರರುತ್ತಿರುವುದೇ ನಮಗೆ ಸಂತಸ ತಂದಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಹೇಳಿದೆ. ಇಷ್ಟೇ ಅಲ್ಲ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿಬೇಕು ಈ ಮೂಲಕ ಸ್ವಾಲಂಬಿ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದ್ದರು.

ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಚನ್ನಪಟ್ಟಣದಲ್ಲಿ ತಯಾರಾಗುವ ಜನಪ್ರಿಯ ಗೊಂಬೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಪ್ರಧಾನಿ ಮಾತಿಗೆ ಸ್ಪಂದಿಸಿದೆ. ಪ್ರದಾನಿ ಮೋದಿ ಮಾತಿನಂತೆ ಸ್ಥಳೀಯ ಕಲಾಕಾರರನ್ನು ಪ್ರೋತ್ಸಾಹಿಸುವ ಅವಕಾಶವೂ ಸಿಕ್ಕಿದೆ ಎಂದು ಎರಡನೇ ಟ್ವೀಟ್ ಮಾಡಿದೆ.

 

ಚನ್ನಪಟ್ಟಣದ ಬೊಂಬೆಗಳಿಗೆ 200 ವರ್ಷದ ಇತಿಹಾಸವಿದೆ. ಮರದಿಂದ ಈ ಬೊಂಬೆಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳಲ್ಲೂ ಚನ್ನಪಟ್ಟಣದ ಗೊಂಬೆಗಳು ಹೆಚ್ಚು ಪ್ರಸಿದ್ದಿ ಪಡೆದಿದೆ. 
 

Latest Videos
Follow Us:
Download App:
  • android
  • ios