Asianet Suvarna News Asianet Suvarna News

ಕೆಇಎ ಪರೀಕ್ಷೆ ಅಕ್ರಮ: ಪೊಲೀಸ್ ಠಾಣೆಯಲ್ಲಿ ಆರ್‌ಡಿ ಪಾಟೀಲ್‌ ಸ್ಥಿತಿ ಕಂಡು ಪತ್ನಿ ಕಣ್ಣೀರು!

ಕೆಇಎ ನೇಮಕಾತಿ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನನ್ನ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ ಹನ್ನೆರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತಂದಿರುವ ಪೊಲೀಸರು. 

KEA Exam Scam accused RD Patils wife was in tears after met him at kalaburagi jail rav
Author
First Published Nov 11, 2023, 4:14 PM IST

ಕಲಬುರಗಿ (ನ.11): ಕೆಇಎ ನೇಮಕಾತಿ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನನ್ನ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ ಹನ್ನೆರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತಂದಿರುವ ಪೊಲೀಸರು. 

ಇಂದು ಆರೋಪಿ ಆರ್‌ಡಿ ಪಾಟೀಲ್‌ನನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ಸಹಿ ಪಡೆದುಕೊಳ್ಳಲು ಕುಟುಂಬಸ್ಥರನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಹೀಗಾಗಿ ಆರ್ ಡಿ ಪಾಟೀಲ್‌ ಭೇಟಿಗೆ ತೆರಳಿದ್ದ ಪತ್ನಿ. ಪೊಲೀಸ್ ಠಾಣೆಗೆ ಹೋಗಿದ್ದಾಗ ಆರ್‌ಡಿ ಪಾಟೀಲ್‌ ಸ್ಥಿತಿ ಕಂಡು ಕಣ್ಣೀರು ಹಾಕಿದ ಪತ್ನಿ. ಕೋಟ್ಯಧಿಪತಿಯಾಗಿ ಮರೆದಿದ್ದ ಆರ್‌ಡಿ ಪಾಟೀಲ್ ಇದೀಗ ನೆಲದ ಮೇಲೆ ಕೂತಿದ್ದನ್ನು ಕಂಡು ಪತ್ನಿ ಭಾವುಕರಾದ ಆರ್‌ಡಿ ಪಾಟೀಲನ ಪತ್ನಿ. ದುಃಖ ತಡೆಯಲಾಗದೆ  ಪೊಲೀಸ್ ಠಾಣೆಯಿಂದ ಹೊರಬಂದು ಕಣ್ಣೀರು ಹಾಕುತ್ತಾ ದುಪ್ಪಟ್ಟದಿಂದ ಒರೆಸಿಕೊಳ್ಳುತ್ತಳೇ ಕಾರು ಹತ್ತಿದ ಪತ್ನಿ. 

ಕೆಇಎ ಪರೀಕ್ಷೆ ಹಗರಣ, ಕಿಂಗ್ ಪಿನ್ ಆರ್‌ ಡಿ ಪಾಟೀಲ್‌ ಮಹಾರಾಷ್ಟ್ರದಲ್ಲಿ ಬಂಧನ

Follow Us:
Download App:
  • android
  • ios