ಏಕಾಏಕಿ ವಿದ್ಯುತ್‌ ದರ ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿಯು (ಕೆಸಿಸಿಐ) ಜೂ.22ರಂದು ರಾಜ್ಯ ಬಂದ್‌ಗೆ ಕರೆ ನೀಡಿದೆ.

ಬೆಂಗಳೂರು (ಜೂ.19) ಏಕಾಏಕಿ ವಿದ್ಯುತ್‌ ದರ ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿಯು (ಕೆಸಿಸಿಐ) ಜೂ.22ರಂದು ರಾಜ್ಯ ಬಂದ್‌ಗೆ ಕರೆ ನೀಡಿದೆ.

ವಿದ್ಯುತ್‌ ದರ ಹೆಚ್ಚಳ ವಾಪಸ್‌ ಪಡೆಯಬೇಕು ಎಂದು ಸರ್ಕಾರಕ್ಕೆ ಪ್ರಥಮ ಬಾರಿಗೆ ಈ ಹಿಂದೆ ಮನವಿ ಮಾಡಿದ್ದ ಸಂಘ, ದರ ಇಳಿಸದಿದ್ದರೆ ಬಂದ್‌ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೂ ಯಾವುದೇ ಪ್ರಯೋಜವಾಗದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವಹಿವಾಟುಗಳನ್ನು ನಿಲ್ಲಿಸಿ ಬಂದ್‌ ನಡೆಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಸಿಐ ಕಾರ್ಯದರ್ಶಿ ಪ್ರವೀಣ್‌ ಎಸ್‌. ಅಗಡಿ, ವಿದ್ಯುತ್‌ ದರ ಹೆಚ್ಚಳದಿಂದ ಸಂಕಷ್ಟಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದರ ಹೆಚ್ಚಳವು ಕೈಗಾರಿಕೆಗಳು, ವ್ಯಾಪಾರಸ್ಥರು ಸೇರಿದಂತೆ ಸಾಮಾನ್ಯ ಜನರಿಗೂ ಹೊರೆಯಾಗಿದೆ. ಆದ್ದರಿಂದ ಸಂಘದ 23 ಜಿಲ್ಲೆಗಳ ಘಟಕಗಳೂ ಬಂದ್‌ಗೆ ಬೆಂಬಲ ಸೂಚಿಸಿವೆ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್‌ ದರ ಏರಿಕೆ ವಾಪಸ್‌ ಸಾಧ್ಯವಿಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ

ಗದಗ, ವಿಜಯಪುರ, ಮೈಸೂರು, ಬೀದರ್‌. ಶಿವಮೊಗ್ಗ, ಕೋಲಾರ, ಧಾರವಾಡ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಹಾಸನ, ವಿಜಯನಗರ, ಕಾರವಾರ, ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಘಗಳು ಸೇರಿದಂತೆ ಹಲವು ಜಿಲ್ಲೆಗಳ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದರು.

ಉದ್ಯಮಿಗಳ ಕರೆಸಿ ಮಾತನಾಡುತ್ತೇನೆ

ನಮ್ಮ ಅಧಿಕಾರಿಗಳು ಎಫ್‌ಕೆಸಿಸಿಐ ಪ್ರತಿನಿಧಿಗಳನ್ನು ಕರೆಸಿ ವಾಸ್ತವಾಂಶ ವಿವರಿಸಿದ್ದಾರೆ. ನಾನೂ ಅವರನ್ನು ಕರೆಸಿ ಮಾತನಾಡುತ್ತೇನೆ. ಎರಡು ತಿಂಗಳ ಬಿಲ್‌ ಒಂದೇ ಬಾರಿ ಬಂದಿರುವುದಕ್ಕೆ ಅವರಿಗೆ ಶುಲ್ಕ ಭಾರವಾಗಿ ಕಾಣುತ್ತಿದೆ. ಮುಂದಿನ ತಿಂಗಳಿಂದ ಒಂದೇ ತಿಂಗಳ ಬಿಲ್‌ ಬರುವುದರಿಂದ ಕಡಿಮೆಯಾಗಲಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ

ದರ ಏರಿಕೆ ಹಿಂದಕ್ಕೆ ಪಡೆಯಲು ಅಸಾಧ್ಯ

ಕೆಇಆರ್‌ಸಿ ಕೇಂದ್ರ ಕಾಯ್ದೆಯಡಿ ವಿದ್ಯುತ್‌ ದರ ಏರಿಕೆ ಮಾಡಿದೆ. ಅದನ್ನು ನಾವು ಕಡಿಮೆ ಮಾಡಲು ಸಾಧ್ಯವಿಲ್ಲ. ಕೆಇಆರ್‌ಸಿಯವರು ಒಂದು ಬಾರಿ ಏರಿಕೆ ಮಾಡಿದರೆ ಅದನ್ನು ನಾವು ಹಿಂಪಡೆಯಲು ಆಗಲ್ಲ. ಹೀಗಾಗಿ, ಈಗಾಗಲೇ ಏರಿಕೆ ಆಗಿರುವ ಬೆಲೆಯನ್ನು ವಾಪಸ್‌ ಪಡೆಯಲು ಸಾಧ್ಯವೇ ಇಲ್ಲ.

- ಕೆ.ಜೆ.ಜಾಜ್‌ರ್‍ ಇಂಧನ ಸಚಿವ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಬೆಳವಣಿಗೆ, ಸೋನಿಯಾ ಭೇಟಿ ಮಾಡಿದ ಜಾರ್ಜ್!