* ಕರ್ನಾಟಕ ಕಾಂಗ್ರೆಸ್ ಬೆಳವಣಿಗೆಗಳ ಹಿನ್ನೆಲೆ* ಸೋನಿಯಾ ಗಾಂಧಿ ಮನೆ ಕದ ತಟ್ಟಿದ ಮಾಜಿ ಸಚಿವ ಕೆ.ಜೆ ಜಾಜ್೯* ದೆಹಲಿಯ ಜನಪತ್ ನಿವಾಸದಲ್ಲಿ ಸೋನಿಯಾಗಾಂಧಿಯವರನ್ನು ಭೇಟಿಯಾದ ಜಾಜ್೯* ಬಿಜೆಪಿ ಆಯ್ತು ಇದೀಗ ಕಾಂಗ್ರೆಸ್ ನಾಯಕರಿಂದ ದೆಹಲಿ ದಂಡಯಾತ್ರೆ

ನವದೆಹಲಿ( ಜು. 13) ರಾಜ್ಯ ಬಿಜೆಪಿ ನಾಯಕರ ದೆಹಲಿ ದಂಡಯಾತ್ರೆ ಒಂದು ಹಂತಕ್ಕೆ ಮುಗಿದ ಲಕ್ಷಣ ಕಾಣುತ್ತಿದ್ದರೆ ಕಾಂಗ್ರೆಸ್ ನಾಯಕರ ದೆಹಲಿ ಪ್ರವಾಸ ಶುರುವಾಗಿದೆ. ಕರ್ನಾಟಕ ಕಾಂಗ್ರೆಸ್ ನ ಬೆಳವಣಿಗೆ ಕಾರಣಕ್ಕೆ ಅಧ್ಯಕ್ಷೆ ಸೋನಿಯಾ ಗಾಂಧಿ ಮನೆ ಕದವನ್ನು ಮಾಜಿ ಸಚಿವ ಕೆ.ಜೆ ಜಾಜ್೯ ತಟ್ಟಿದ್ದಾರೆ.

ದೆಹಲಿಯ ಜನಪತ್ ನಿವಾಸದಲ್ಲಿ ಸೋನಿಯಾಗಾಂಧಿಯವರನ್ನು ಭೇಟಿಯಾದ ಜಾಜ್೯ 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ತಮ್ಮ ಮುಂದಿನ ಚುನಾವಣಾ ಕ್ಷೇತ್ರ ಘೋಷಿಸಿದ ಸಿದ್ದರಾಮಯ್ಯ

ಬಳಿಕ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ‌ ಸಹ ಸೋನಿಯಾ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮುಂದಿನ ಸಿಎಂ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೂ ಕೇಳಿಬಂದಿತ್ತು.

ಕೆಲ ದಿನಗಳ ಹಿಂದೆ ಡಿಕೆಶಿ ದೆಹಲಿ ಪ್ರವಾಸ ಮಾಡಿದ್ದರು. ಸಿದ್ದರಾಮಯ್ಯ ಸಹ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.