Asianet Suvarna News Asianet Suvarna News

ಸರಕಾರ ನಯಾಪೈಸೆ ಕೊಟ್ಟಿಲ್ಲ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲ್ಲ: ಕಸಾಪ ಅಧ್ಯಕ್ಷರ ಆಕ್ರೋಶ

ನವೆಂಬರ್ 11,12,13 ಕ್ಕೆ ಹಾವೇರಿಯಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲ್ಲ. ಸರ್ಕಾರ ಒಂದು‌ ಪೈಸೆ ಕೂಡಾ ಬಿಡುಗಡೆ ಮಾಡಿಲ್ಲ ಎಂದು  ಕಸಾಪ ಅದ್ಯಕ್ಷ ಮಹೇಶ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ.

kasapa Mahesh Joshi Angry  against Government over not given found  for haveri  Kannada Sahitya Sammelana gow
Author
First Published Oct 3, 2022, 7:05 PM IST

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್  

ಹಾವೇರಿ ( ಅ.3):  86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ನಡೆಸಲು ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ನಾಡೋಜ ಮಹೇಶ್ ಜೋಷಿ ಕಿಡಿ ಕಾರಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಸಿಎಂ ಬೊಮ್ಮಾಯಿ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊನ್ನೆ ಉಸ್ತುವಾರಿ ಸಚಿವರು ಪೂರ್ವ ಸಿದ್ದತೆ ಆಗಿಲ್ಲ. ಸಮ್ಮೇಳನ ಮುಂದಕ್ಕೆ ಹೋಗಬಹುದು ಎಂದು ಹೇಳಿದ್ರು. ಎರಡು ದಿನ‌ ಆದ ಮೇಲೆ ಮುಖ್ಯಮಂತ್ರಿಗಳು ನಿಗಧಿಯಾದ ದಿನಾಂಕಕ್ಕೇ ಸಮ್ಮೇಳನ ಮಾಡ್ತಿವಿ ಎಂದಿದ್ದಾರೆ. ಇದು ನಮಗೆಲ್ಲ ಬೇಸರ ತಂದಿದೆ. ದಿನಾಂಕ ಘೋಷಣೆ ಮಾಡಿದ‌ ಮೇಲೆ ಲಾಂಚನ ಬಿಡುಗಡೆ ಆಗಬೇಕಿತ್ತು. ಹಲವು ಸಮಿತಿಗಳ ರಚನೆ ಆಗಬೇಕಿತ್ತು. 20 ಸಮಿತಿಗಳನ್ನು ಮಾಡುವಂತೆ ಹೇಳಿದ್ರು ಮಾಡಿಲ್ಲ. ನಮಗೆ ಈಗ ಅನಿಶ್ಚಿತತೆ ಕಾಡುತ್ತಿದೆ ಎಂದರು. ಪ್ರತಿನಿಧಿಗಳ ನೋಂದಣಿಯಾಗಿಲ್ಲ, ಪ್ರತಿನಿಧಿಗಳ ನೋಂದಣಿಗೆ ಒಂದು ತಿಂಗಳು ಬೇಕು. ತುಂಬ ಬೇಸರವಾಗಿದೆ, ದು:ಖವಾಗಿದೆ ಎಂದರು

ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಸ್ವಾಭಿಮಾನ ಬಿಟ್ಟು ಹೋಗಲ್ಲ
ಹಲವು ಸಲ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡುತ್ತಾರೆ ಎಂದು  ಮಹೇಶ್ ಜೋಶಿ ಅಸಮಾಧಾನ ಹೊರ ಹಾಕಿದರು. 

ಸಮ್ಮೇಳನ ನಡೆಯೊತ್ತೊ ಇಲ್ಲವೊ ಎನ್ನುವುದನ್ನ ಮೂಕನಾಗಿ ನೋಡುವ ಸ್ಥಿತಿ ಬಂದಿದೆ. ಈ ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಒಂದು ಪೈಸೆ ಬಂದಿಲ್ಲ.ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಸ್ವಾಭಿಮಾನ ಬಿಟ್ಟು ಹೋಗಲ್ಲ. ನಾಲ್ಕು ಸಲ ಸಬೆ ಕರೆದು ಕ್ಯಾನ್ಸಲ್ ಮಾಡಿದ್ರು. ನವೆಂಬರ್ 11,12,13 ಕ್ಕೆ ಸಮ್ಮೇಳನ ನಡೆಯಲು ಸಾಧ್ಯವಿಲ್ಲ‌. ಮೊದಲು ಇದ್ದ ಉತ್ಸಾಹ ಕಡಿಮೆಯಾಗ್ತಿದೆ. ಪ್ರತಿ ಹೆಜ್ಜೆಗೂ ನಮಗೆ ಸಹಕಾರ ಸಿಗ್ತಿಲ್ಲ ಎಂದು ಕಿಡಿ ಕಾರಿದರು‌.

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕಾ ವಿತರಕರ ಕುರಿತು ಗೋಷ್ಠಿ: ಪತ್ರಿಕಾ ವಿತರಕರ ಸಮಸ್ಯೆ ಬಗ್ಗೆ ಚರ್ಚಿಸಲು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿಯನ್ನು ಆಯೋಜಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಷಿ ಹೇಳಿದ್ದಾರೆ

ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಆಯೋಜಿಸಿದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ನಾನು ದೂರದರ್ಶನದಲ್ಲಿದ್ದಾಗ ಪತ್ರಿಕೆ ವಿತರರಕ ಬಗ್ಗೆ ’ಅಸಾಮಾನ್ಯರು’ ಎಂಬ ಕಾರ್ಯಕ್ರಮ ರೂಪಿಸಿದ್ದೆ. ಅದೇ ರೀತಿ ಮುಂದಿನ ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯೊಂದನ್ನು ಆಯೋಜಿಸಿ ಈ ವರ್ಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಕೆನಡಾ ಸಂಸದ ಚಂದ್ರ ಆರ್ಯಗೆ ಆಹ್ವಾನ: ಡಾ.ಮಹೇಶ್‌ ಜೋಶಿ

ಪತ್ರಿಕೆ ವಿತರಣೆ ಕಠಿಣವಾದ ಕೆಲಸ. ಪತ್ರಿಕೆ ವಿತರಣೆ ಮಾಡುವವರಲ್ಲಿ ಶೇ.4 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಆದರೂ ಎದೆ ಗುಂದದೆ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಜತೆಗೆ, ಎಲ್ಲರೂ ಕಡ್ಡಾಯವಾಗಿ ಕನ್ನಡ ಪತ್ರಿಕೆಯನ್ನು ಕೊಂಡು ಓದಬೇಕು ಎಂದೂ ಮನವಿ ಮಾಡಿದರು.

ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ

ಕನ್ನಡಪ್ರಭ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಕಾರ್ಮಿಕ ಇಲಾಖೆಯ ಇ-ಶ್ರಮ್‌ ಯೋಜನೆಗೆ ಸೇರ್ಪಡೆಯಾಗಲಿರುವ ವಯೋಮಿತಿಯ ನಿರ್ಬಂಧಗಳನ್ನು ತೆಗೆದುಹಾಕಲು ಗಂಭೀರ ಪ್ರಯತ್ನಗಳನ್ನು ನಡೆಸಬೇಕಿದೆ ಎಂದರು.

Follow Us:
Download App:
  • android
  • ios