ಬೆಂಗಳೂರು (ನ. 07): ಕೆಎಎಸ್ ಅಧಿಕಾರಿ ಸುಧಾ ಎಂಬುವವರ ಮನೆಯ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂತೆ ಕಂತೆ ನೋಟು, ರಾಶಿ ರಾಶಿ ಚಿನ್ನಾಭರಣಗಳು ಪತ್ತೆಯಾಗಿವೆ. ಇದು ಕೆಎಎಸ್ ಅಧಿಕಾರಿಯ ಮನೆಯಾ ಅಥವಾ ಚಿನ್ನಾಭರಣಗಳ ಮಳಿಗೆಯಾ ಎಂಬ ಅನುಮಾನ ಬರುವಂತಿದೆ.

ಇವರ ಅಕ್ರಮ ಆಸ್ತಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಒಂದೂವರೆ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬ್ರಹ್ಮಾವರದ ವಡ್ಡರ್ಸೆಯಲ್ಲಿ 82 ಲಕ್ಷದ ಮೌಲ್ಯದ ಸೈಟ್ ಪತ್ತೆಯಾಗಿದೆ. 

ಮೈಸೂರಿನ ಬೇಮೆಲ್ ಲೇಔಟ್‌ನಲ್ಲಿರುವ ಸಂಬಂಧಿ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದ್ದು ದಾಖಲೆಗಳನ್ನು, ಲ್ಯಾಪ್‌ಟ್ಯಾಪ್ ವಶಪಡಿಸಿಕೊಳ್ಳಲಾಗಿದೆ. 

ಸುಧಾ ತಹಶೀಲ್ದಾರ್ ಆಗಿದ್ದಾಗ ಯಾವುದೇ ಕೆಲಸ ಆಗಬೇಕು ಅಂದ್ರೆ ಸಿಕ್ಕಾಪಟ್ಟೆ ಲಂಚ ಪಡೆಯುತ್ತಿದ್ದರು. ಭ್ರಷ್ಟಾಚಾರದ ಹಣವನ್ನು ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಬಚ್ಚಿಡುತ್ತಿದ್ದರು.