Asianet Suvarna News Asianet Suvarna News

ಕನ್ನಡಪ್ರಭದ ಜೋಗಿ ಸೇರಿ ಮೂವರಿಗೆ ಬರಹಗಾರರ ಸಂಘದ ಪ್ರಶಸ್ತಿ

*  ಡಿಸೆಂಬರ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ 
*  ಪ್ರತಿ ಪ್ರಶಸ್ತಿಯು 10ನ ಸಾವಿರ ರು.ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ
*  ಗಿರೀಶ್‌ ರಾವ್‌ ಹತ್ವಾರ್ ಅವರಿಗೆ 'ಸಾಹಿತ್ಯ ರತ್ನ' ಪ್ರಶಸ್ತಿ 

Karnataka Writers Association Award Three Including Kannada Prabha Jogi  grg
Author
Bengaluru, First Published Oct 28, 2021, 8:24 AM IST
  • Facebook
  • Twitter
  • Whatsapp

ಬೆಂಗಳೂರು(ಅ.28): ಕರ್ನಾಟಕ ಕನ್ನಡ  ಬರಹಗಾರರ (Karnataka Writers Association) ಮತ್ತು ಪ್ರಕಾಶಕರ ಸಂಘ ನೀಡುವ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ 'ಕನ್ನಡಪ್ರಭ' (Kananda Prabha) ಪುರವಣಿ ಸಂಪಾದಕ ಹಾಗೂ ಸಾಹಿತಿ ಗಿರೀಶ್‌ ರಾವ್‌ ಹತ್ವಾರ್(Girish Rao Hatwar)(ಜೋಗಿ), ಲೇಖಕಿ ಮಂಜುಳಾ ಹಿರೇಮಠ್‌(Manjula Hiremath) ಮತ್ತು ಪತ್ರಕರ್ತ ಲೇಖಕ ಜಿ.ಎನ್‌. ಮೋಹನ್‌(GN Mohan) ಅವರು ಆಯ್ಕೆಯಾಗಿದ್ದಾರೆ.

ಜೋಗಿ(Jogi) ಅವರ '108 ನಾಲ್ಕು ದಶಕದ ಕಥೆಗಳು' ಕೃತಿಗೆ ಸಂಘದ 'ಸಾಹಿತ್ಯ ರತ್ನ', ಮಂಜುಳಾ ಹಿರೇಮಠ್‌ ಅವರ 'ಗಾಯಗೊಂಡವರಿಗೆ' ಕೃತಿಗೆ 'ಚಿಗುರು' ಪ್ರಶಸ್ತಿ, ಮತ್ತು ಜಿ.ಎನ್‌. ಮೋಹನ್‌ ಅವರ 'ಬಹುರೂಪಿ'  ಪ್ರಕಾಶನಕ್ಕೆ 'ಪುಸ್ತಕ ರತ್ನ' ಪ್ರಶಸ್ತಿ (Award)  ಸಂದಿದೆ. 

ಜೋಗಿ ವಿರಚಿತ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ

ಹತ್ತು ಜನ ತಜ್ಞ ತೀರ್ಪುಗಾರರಿಂದ ಬಂದ ಪ್ರಥಮ, ದ್ವಿತೀಯ ಪ್ರಾಶಸ್ತ್ಯದ ಗುಪ್ತ ಮತಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ನಡೆಸಲಾಗಿದೆ. ಡಿಸೆಂಬರ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತಿ ಪ್ರಶಸ್ತಿಯು 10ನ ಸಾವಿರ ರು.ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Follow Us:
Download App:
  • android
  • ios