* ಉತ್ಸವ್ ಕರ್ನಾಟಕ 2022* ಜೂ.4, 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉತ್ಸವ್ ಕರ್ನಾಟಕ 2022* ಪ್ರೇಕ್ಷಕರ ಮನಸೂರೆಗೊಳಿಸಲಿರುವ ಉತ್ಸವ್ ಕರ್ನಾಟಕ 2022
ಬೆಂಗಳೂರು,(ಜೂನ್. 03): ಚಂಡೀಗಢದ ಪ್ರಾಚೀನ್ ಕಲಾ ಕೇಂದ್ರವು ಭಾರತೀಯ ಸಾಂಸ್ಕೃತಿಕ ಬಾಂಧವ್ಯಗಳ ಸಮಿತಿ ಹಾಗೂ ಭಾರತೀಯ ವಿದ್ಯಾಭವನ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ “ಉತ್ಸವ್ ಕರ್ನಾಟಕ 2022” ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.
ಈ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಳ್ಳಲಿದೆ. ಇದನ್ನು ಜೂನ್ 4 ಮತ್ತು 5, 2022ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಈ ಪ್ರದರ್ಶನ ಬೆಂಗಳೂರಿನ ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಖಿಂಚ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಡಿಮೆ ಬಜೆಟ್ ನಲ್ಲಿ ಕೇದಾರನಾಥ-ಬದರೀನಾಥ ಕ್ಷೇತ್ರ ದರ್ಶನ ಮಾಡಿ ಬನ್ನಿ
ಕಾರ್ಯಕ್ರಮ ಈ ಕೆಳಕಂಡಂತೆ ಇರುತ್ತದೆ:
* ಜೂನ್ 4, 2022
1.ಪಂ.ಕುಮಾರ್ ಮರ್ದೂರ್(ಹಾಡುಗಾರಿಕೆ), ಶ್ರೀ ಜಗದೀಶ್ ಕುರ್ತಕೋಟಿ(ತಬಲಾ) ಮತ್ತು ಶ್ರೀ ಸತೀಶ್ ಕೋಟಿ(ಹಾರ್ಮೋನಿಯಂ)
2.ಪಂ.ರಘುನಾಥ್ ನಾಕೋಡ್ ಮತ್ತು ರವಿಕಿರಣ್ ನಾಕೋಡ್(ತಬಲಾ ಸೋಲೋ), ಶ್ರೀ ಸತೀಶ್ ಕೊಳ್ಳಿ(ಹಾಮೋನಿಯಂ)
3. ಬೆಂಗಳೂರಿನ ಹಿರಿಯ ಮತ್ತು ಹಳೆಯ ಸೆಂಟ್ರಾ ಹೋಲ್ಡರ್ಗಳಿಗೆ ಸನ್ಮಾನ
* ಭಾನುವಾರ, ಜೂನ್ 5, 2022
1. ವಿದುಷಿ ರೇಣುಕಾ ನಾಕೋಡ್(ಹಾಡುಗಾರಿಕೆ), ಪಂ.ರಘುನಾಥ್ ನಾಕೋಡ್(ತಬಲಾ) ಮತ್ತು ಶ್ರೀ.ಮಧುಸೂದನ್ ಭಟ್(ಹಾರ್ಮೋನಿಯಂ)
2. ವಿದ್ವಾನ್ ಮೈಸೂರು ಎಂ.ನಾಗರಾಜ್ ಮತ್ತು ವಿದ್ವಾನ್ ಮೈಸೂರು ಎಂ. ಮಂಜುನಾಥ್(ವಯೊಲಿನ್ ಜೋಡಿ) ವಿದ್ವಾನ್ ಅರ್ಜುನ್ ಕುಮಾರ್(ಮೃದಂಗ) ಮತ್ತು ವಿದ್ವಾನ್ ಜಿ.ಗುರುಪ್ರಸನ್ನ(ಖಂಜೀರಾ).
3. ಶುಭಂ, ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಒಡಿಸ್ಸಿ ಮತ್ತು ಕಥಕ್ ಪ್ರದರ್ಶನ ನೀಡಿದ್ದಾರೆ.
ಈ ಬಗ್ಗೆ ಚಂಡೀಗಢದ ಪ್ರಾಚೀನ್ ಕಲಾ ಕೇಂದ್ರದ ಕಾರ್ಯದರ್ಶಿ ಪ್ರತಿಕ್ರಿಯಿಸಿದ್ದು, “ಬೆಂಗಳೂರಿನಲ್ಲಿ ಈ ಉತ್ಸವವನ್ನು ಬಹಳ ಕಾಲದಿಂದ ನಡೆಸುತ್ತಿದ್ದೇವೆ ಮತ್ತು ನಾವು ಪ್ರೇಕ್ಷಕರಿಂದ ಸದಾ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಈ ಬಾರಿ ಬಹಳಷ್ಟು ಕಲಾವಿದರು ಕರ್ನಾಟಕಕ್ಕೆ ಸೇರಿದ್ದಾರೆ. ಆದ್ದರಿಂದ ಇದು ಸಂಗೀತ, ವಾದ್ಯಗಳು ಮತ್ತು ಶಾಸ್ತ್ರೀಯ ನೃತ್ಯದ ಸಂಯೋಜನೆಯಾಗಲಿದೆ” ಎಂದರು.
ಕಾರ್ಯಕ್ರಮ ದಿನಾಂಕ ಜೂನ್ 4 ಮತ್ತು 5, 2022
ಸಮಯ: ಸಂಜೆ 5.30ರ ನಂತರ
ಸ್ಥಳ: ಖಿಂಚ ಆಡಿಟೋರಿಯಂ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
