ವಿಧಾನಸೌಧ ಬಜೆಟ್‌ ಅಧಿವೇಶನದಲ್ಲಿ ಕುಳಿತ ಅನಾಮಿಕ ವ್ಯಕ್ತಿ: 15 ನಿಮಿಷವಾದರೂ ಗೊತ್ತಾಗಿಲ್ಲ

ವಿಧಾನಸಭಾ ಬಜೆಟ್‌ ಮಂಡನೆಯ ಅಧಿವೇಶನದ ವೇಳೆ ಸದನದೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಶಾಸಕರ ಆಸನದಲ್ಲಿ ಕುಳಿತು ಸದನದ ಕಲಾಪವನ್ನು ವೀಕ್ಷಣೆ ಮಾಡಿದ್ದಾನೆ.

Karnataka Unknown person enter budget session of Vidhana Soudha observed proceedings sat

ಬೆಂಗಳೂರು (ಜು.07): ರಾಜ್ಯ ವಿಧಾನಸಭಾ ಬಜೆಟ್‌ ಮಂಡನೆಯ ಅಧಿವೇಶನದ ವೇಳೆ ಸದನದೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಶಾಸಕರ ಆಸನದಲ್ಲಿ ಕುಳಿತು ಸದನದ ಕಲಾಪವನ್ನು ವೀಕ್ಷಣೆ ಮಾಡಿದ್ದಾನೆ. ಆದರೆ, ಇದಕ್ಕೆ ಕಾರಣ ಸದನದ ಭದ್ರತಾ ಲೋಪವೆಂದು ಹೇಳಲಾಗುತ್ತಿದೆ. 

ವಿಧಾನಸೌಧದಲ್ಲಿ ಭಾರಿ ಬಿಗಿ ಭಧ್ರತೆ ಇರುತ್ತದೆ. ಯಾವುದೇ ಖಾಸಗಿ ವ್ಯಕ್ತಿಯೂ ಅಲ್ಲಿಗೆ ಹೋಗಲು ಅನುಮತಿ ಇರುವುದಿಲ್ಲ. ಆದರೆ, ಇಲ್ಲೊಬ್ಬ ಖಾಸಗಿ ವ್ಯಕ್ತಿ ತಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡು ವಿಧಾನಸಭಾ ಬಜೆಟ್‌ ಅಧಿವೇಶನದಲ್ಲಿ ಶಾಸಕರಂತೆ ಕುಳಿತು 15 ನಿಮಿಷಗಳ ಕಾಲ ಕಲಾಪವನ್ನು ವೀಕ್ಷಣೆ ಮಾಡಿ ಬಂದಿದೆ. ಇನ್ನು ದೇವದುರ್ಗ ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತು ಕಲಾಪ ವೀಕ್ಷಣೆ ಮಾಡಿದ್ದಾನೆ. ನಂತರ, ಮಹಿಳಾ ಶಾಸಕಿಯ ಆನಸದಲ್ಲಿ ಕುಳಿತುಕೊಂಡಿದ್ದನು.

Karnataka Budget 2023: ಸ್ವಿಗ್ಗಿ, ಜೊಮೊಟೊ ಡೆಲಿವರಿ ಬಾಯ್‌ಗಳಿಗೆ ಭರ್ಜರಿ ಕೊಡುಗೆ: 4 ಲಕ್ಷ ರೂ. ವಿಮೆ ಸೌಲಭ್ಯ

ಸ್ಪೀಕರ್‌ ಗಮನಕ್ಕೆ ತಂದ ಶಾಸಕ ಕಂದಕೂರು:  ವಿಧಾನಸಭಾ ಬಜೆಟ್‌ ಅಧಿವೇಶನದ ವೇಳೆ ಅಪರಿಚಿತ ವ್ಯಕ್ತಿ ಬಂದು ಕುಳಿತಿದ್ದಾನೆ. ಈ ಬಗ್ಗೆ ಶಾಸಕ ಶರಣಗೌಡ ಕಂದಕೂರು ಅವರು ಸ್ಪೀಕರ್ ಯು.ಟಿ. ಖಾದರ್‌ ಗಮನಕ್ಕೆ ತಂದಿದ್ದಾರೆ. ಜನರಿಂದ ಆಯ್ಕೆ ಆಗದ ಯಾವುದೇ ವ್ಯಕ್ತಿ ಬಂದು ಅಧಿವೇಶನ ನಡೆಯುವ ವೇಳೆ ಶಾಸಕರ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ತಾನು ಶಾಸಕ ಅಲ್ಲದಿದ್ದರೂ ಅನಾಮಿಕ ವ್ಯಕ್ತಿ ಕಲಾಪಕ್ಕೆ ಬಂದು ಕುಳಿತು ಕಲಾಪವನ್ನು ವೀಕ್ಷಣೆ ಮಾಡಿ ಹೋಗಿದ್ದಾನೆ. ಒಟ್ಟು 15 ನಿಮಿಷಗಳ ಕಾಲ ಕಲಾಪದಲ್ಲಿ ಕುಳಿತು ಹೋಗಿದ್ದಾನೆ.

ಶಾಸಕಿ ಕರೆಮ್ಮ ಆಸನದಲ್ಲಿ ಕುಳಿತ ವ್ಯಕ್ತಿ: ಇನ್ನು ವಿಧಾನಸೌಧದಲ್ಲಿ ಸದನದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತಿದ್ದನು. ಬಜೆಟ್‌ ಮಂಡನೆಯ ಆರಂಭದಲ್ಲಿಯೇ ಈ ಘಟನೆ ನಡೆದಿದೆ. ಆದರೆ, ಈ ಬಗ್ಗೆ ಸ್ಪೀಕರ್‌ ಯಾವುದೇ ಗೊಂದಲ ಸೃಷ್ಟಿ ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿಚಾರವನ್ನು ದೊಡ್ಡದಾಗಿ ಮಾಡಿಲ್ಲ ಎಮದು ತಿಳಿದುಬಂದಿದೆ. ಇನ್ನು ಅನಾಮಿಕ ವ್ಯಕ್ತಿಯು ತಾನು ಮೊಳಕಾಲ್ಮೂರು ಶಾಸಕ ಎಂದೇಳಿ ಕುಳಿತು ಕಲಾಪ ವೀಕ್ಷಣೆ ಮಾಡಿದ್ದಾನೆ. ಇದಾದ ನಂತರ ಪ್ರಶ್ನೆ ಮಾಡಿದಾಗ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮೊಳಕಾಲ್ಮೂರಿನ ತಿಪ್ಪೇರುದ್ರ ವಶಕ್ಕೆ: ವಿಧಾನಸಭಾ ಅಧಿವೇಶನದ ಬಜೆಟ್ ‌ಮಂಡನೆ ವೇಳೆ ಅಪರಿಚಿತ ವ್ಯಕ್ತಿ ವಿಧಾನಸಭೆ ಎಂಟ್ರಿಕೊಟ್ಟವನನ್ನು ತಿಪ್ಪೇರುದ್ರ ಎಂದು ಗುರುತಿಸಲಾಗಿದೆ. ವಿಧಾನ ಸಭೆಗೆ ಎಂಟ್ರಿ ಆದ ವ್ಯಕ್ತಿಯನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖುದ್ದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರಿಂದ ವಿಚಾರಣೆ ಮಾಡಲಾಗುತ್ತಿದೆ. ಈತನನ್ನು ಮೊಳಕಾಲ್ಮೂರು ಮೂಲದ‌ ತಿಪ್ಪೆರುದ್ರ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. 

Karnataka Budget 2023: ರೈತ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು: ಕಾರಣ ಹೀಗಿದೆ

ಹೊಸ ಶಾಸಕರೆಂದು ಒಳಗೆ ಬಿಟ್ಟರಾ ಸಿಬ್ಬಂದಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 65 ಶಾಸಕರು ಹೊಸಬರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸರು ಕೂಡ ಶಾಸಕರ ಮುಖ ಪರಿಚಯ ಇಲ್ಲದ ಕಾರಣ ಒಳಗೆ ಬಿಟ್ಟಿರಬಹುದು ಎಂದು ತಿಳಿದುಬಂದಿದೆ. ಈ ಹಿಂದೆ ಹೊಸದಾಗಿ ಆಯ್ಬಾಕೆಯಾಗಿದ್ದ ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರನ್ನು ವಿಧಾನಸಭಾ ಅಧಿವೇಶನದ ಒಳಗೆ ಬಿಡದೇ ಪೊಲೀಸರು ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆಯೂ ನಡೆದಿತ್ತು. ಈಗ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಅನಾಮಿಕ ವ್ಯಕ್ತಿ ಒಳಗೆ ಕುಳಿತುಕೊಂಡಿದ್ದಾನೆ. 

Latest Videos
Follow Us:
Download App:
  • android
  • ios