ಹಂಪಿ(ನ.17): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದ ಬೆನ್ನಲ್ಲೇ ಇದೀಗ ಕರ್ನಾಟಕದ ಬಳ್ಳಾರಿ ಜಿfಲಲಡಯಲ್ಲಿ ವಿಶ್ವದ ಅತೀ ಎತ್ತರದ ಹನುಮಂತನ ಪ್ರತಿಮೆ ನಿರ್ಮಾಣವಾಗಲಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿಯವರು,  ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದ ಬಳಿಕ ಈ ಘೋಷಣೆ ಮಾಡಿದ್ದಾರೆ.

ಬಳ್ಳಾ​ರಿಯಲ್ಲೊಂದು ಗಣೇಶ ಹಬ್ಬದ ಅಪರೂಪದ ಘಟನೆ

 ಕರ್ನಾಟಕದ ಬಳ್ಳಾರಿಯ ಜಿಲ್ಲೆಯ ಹಂಪಿಯ ಹೊರವಲಯದ ಪಂಪಾಪುರದಲ್ಲಿ 215 ಮೀಟರ್ ಎತ್ತರದ ಹನುಮನ ವಿಗ್ರಹ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕೆ ಅಂದಾಜು 1,200 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಹಂಪಿಯ ಪಂಪಾಪುರ ರಾಮಾಯಣದಲ್ಲಿರುವ ಕಿಷ್ಕಿಂದೆ ಸ್ಥಳ ಎಂದು ನಂಬಲಾಗಿದೆ. ಹೀಗಿರುವಾಗ ಹನುಮಂತ ಇದೇ ಕಿಷ್ಕಿಂದೆಯಲ್ಲಿ ಜನಿಸಿದ್ದು ಎಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಹನುಮಂತನ ವಿಗ್ರಹ ಸ್ಥಾಪನೆಗೆ ಹಣ ಸಂಗ್ರಹಿಸಲು ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಸ್ಥೆಯು ರಾಷ್ಟ್ರವ್ಯಾಪಿ ರಥಯಾತ್ರೆ ನಡೆಸಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 6 ವರ್ಷದಲ್ಲಿ ಹಂಪಿಯ ಹಂಪಾಪುರದಲ್ಲಿ ವಿಶ್ವದ ಅತಿ ಎತ್ತರದ ಆಂಜನೇಯನ ಮೂರ್ತಿ ನಿರ್ಮಾಣವಾಗಲಿದೆ ಎನ್ನಲಾಗಿದೆ.