ಒಂದೇ ಮನೆಯಲ್ಲಿ 500 ಕ್ಕಿಂತಲೂ ಹೆಚ್ಚು ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.  ಅಪರೂಪದ ಘಟನೆಗೆ ಈ ಕುಟುಂಬಸ್ಥರು ಸಾಕ್ಷಿಯಾಗುತ್ತಾರೆ.

ಬಳ್ಳಾರಿ (ಆ.24): ಈ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆಯೇ ನೂರಾರು ಬಗೆಯ ಗಣಪ ಮೂರ್ತಿಗಳು ದರ್ಶನ ನೀಡುತ್ತವೆ. ಹಾಗಂತ ಈ ಗಣೇಶನ ದರ್ಶನ ಬರೀ ‘ಗಣೇಶ ಹಬ್ಬ’ ದ ದಿನಕ್ಕಷ್ಟೇ ಸೀಮಿತವಲ್ಲ. ಈ ಮನೆಯೊಳಗೆ ಕಾಲಿಟ್ಟರೆ ಪ್ರತಿದಿನವೂ ಇಲ್ಲಿ ದರ್ಶನ ಪಡೆಯಬಹುದು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ರೇಡಿಯೋ ಪಾರ್ಕ್ ಪ್ರದೇಶದ ನಿವಾಸಿ ಅಶೋಕ ಬಚಾವತ್‌ ಎಂಬಾತ ಕಳೆದ ಎರಡು ದಶಕಗಳಿಂದ ಗಣಪನ ಮೂರ್ತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ.

ಸಿಕ್ಕಾಪಟ್ಟೆ ಮೋದಕ ತಿಂದು ಬೈಸ್ಕೊಳ್ತಿದ್ರಂತೆ ಈ ಬಾಲಿವುಡ್ ನಟ..!

 ಇವರ ಮನೆಯಲ್ಲಿ ಬರೋಬ್ಬರಿ 575ಕ್ಕೂ ಹೆಚ್ಚು ವಿವಿಧ ಬಗೆಯ ಗಣೇಶ ಮೂರ್ತಿಗಳು ಕಾಣ ಸಿಗುತ್ತವೆ. ವ್ಯಾಪಾರಿಯಾಗಿರುವ ಅಶೋಕ ಬಚಾವತ್‌ ಅವರಿಗೆ ಗಣಪನ ಮೇಲೆ ಅತೀವ ಭಕ್ತಿ. ಎಲ್ಲಿಯೇ ಗಣಪನ ಮೂರ್ತಿ ಕಂಡರೂ ಖರೀದಿಸಿ ಮನೆಗೆ ತರುತ್ತಾರೆ.