ರಾಜ್ಯದಲ್ಲಿ ಬರದ ಭೀಕರತೆಯಿಂದ 3 ತಿಂಗಳಲ್ಲಿ 250 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆಮ ಸಿಎಂ ಸಿದ್ದರಾಮಯ್ಯ ತಮಟೆಗೆ ಹೆಜ್ಜೆ ಹಾಕುತ್ತಿದ್ದಾರೆ. 

ಕೋಲಾರ (ನ.05): ರಾಜ್ಯದಲ್ಲಿ ನವಂಬರ್‌ನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ. ಇನ್ನು ಮುಂದಿನ‌ ದಿನಗಳ ಬಗ್ಗೆ ಭಯ ಕಾಡುತ್ತಿದೆ. ಈಗ ರೈತರ ನೆರವಿಗೆ ಬರಬೇಕಾದ್ದು ಸರ್ಕಾರದ ಕರ್ತವ್ಯ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ರೂ. ಖರ್ಚು ಮಾಡಿದ್ದಾರೆ. 2013 ರಿಂದ 2018ರವರಗೆ 4,256 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ. ಈಗ ಮೂರು ತಿಂಗಳ ಅವಧಿಯಲ್ಲಿ 250 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಹಿತಿ ನೀಡಿದರು.

ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ತಾಳ ತಪ್ಪಿದೆ. ನಾವು ಇವರ ಸರ್ಕಾರ 5 ವರ್ಷ ಇರುತ್ತದೆ ಎಂದುಕೊಂಡಿದ್ದೇವು. ಆದರೆ, ಸರ್ಕಾರ ತಾಳ ತಪ್ಪಿರೋದು ಸ್ಪಷ್ಟವಾಗುತ್ತಿದೆ. ನಮ್ಮ‌ಸರ್ಕಾರ ಇದ್ದಾಗ 7 ಗಂಟೆ ತ್ರೀ ಫೇಸ್‌ ವಿದ್ಯತ್ ನೀಡಿದ್ದೆವು. ಆದರೆ, ಇವರಿಗೆ ಆ ಯೋಗ್ಯತೆ ಇಲ್ಲ. ಕನಿಷ್ಠ 5 ಗಂಟೆಯೂ ವಿದ್ಯುತ್ ನೀಡುತ್ತಿಲ್ಲ. ಕರೆಂಟ್ ಇಲ್ಲದೇ, ಈಗಾಗಲೇ ಶೇ.50ರಷ್ಟು ಬೆಳೆದು ನಿಂತಿರುವ ಬೆಳೆ ಹಾಳಾಗುತ್ತಿದೆ. ನವಂಬರ್ ನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ.ಇನ್ನು ಮುಂದಿನ‌ದಿನಗಳ ಬಗ್ಗೆ ಭಯ ಕಾಡುತ್ತಿದೆ ಎಂದರು.

ಬೆಂಗಳೂರು ಸೈಟ್‌ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!

ಬರದ ಭೀಕರತೆಯ ಭಯ ಕಾಡುತ್ತೊರುವ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ ಆ ಮುನ್ಸೂಚನೆ ಸರ್ಕಾರದಿಂದ ಕಾಣುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿ ಮುಖ್ಯಮಂತ್ರಿ ಸಂತಸದ ಹೆಜ್ಜೆ ಹಾಕುತ್ತಾರೆ. ಎರಡನೇ ಭಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ಟಮಟೆಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ ಎಂದು ಕಿಡಿಕಾರಿದರು.

ಸಚಿವ ಶಿವಾನಂದ ಪಾಟೀಲ್ ಹೇಳುತ್ತಾರೆ. ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಪಮಾನ‌ ಮಾತಾಡಿದ್ದರು. ನಂತರ ಹೈದರಾಬಾದ್‌ನಲ್ಲಿ ನಮ್ಮ ದೇಶದ ನೋಟು ಎಸೆದದ್ದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಾರೆ. ನಮ್ಮ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಬೆಳೆ‌ಯನ್ನೇ ಬೆಳೆಯಬೇಡಿ‌ ಎನ್ನುವ ಸಲಹೆ ನೀಡುತ್ತಾರೆ. ಕಳೆದ ಕಾಂಗ್ರೆಸ್‌ ಸರ್ಕಾರದ 2013 ರಿಂದ 2018ರ ಅವಧಿಯಲ್ಲಿ 4,256 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ. ಈಗ 3 ತಿಂಗಳ ಅವಧಿಯಲ್ಲಿ 250 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪರಿಹಾರ ನೀಡಲು ಮನವಿ‌ ಮಾಡಿದ್ದಾರೆ. ನಾವು ಬರಪ್ರವಾಸ ಹೊರಟಿದ್ದು ನೋಡಿ ಅಲ್ಲೊಂದು ಇಲ್ಲೊಂದು ಪ್ರವಾಸ ಮಾಡುತ್ತಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆ ಎನ್ನುವಂತೆ ಮುಖ್ಯಮಂತ್ರಿಯಂತೆಯೇ ಎಲ್ಲ ಸಚಿವರೂ ಕೂಡ ಆಗಿದ್ದಾರೆ. ಮೊದಲೆ ಬರದ ಸಮಸ್ಯೆ ಯಿಂದ ಬಳಲುತ್ತಿರುವ ರೈತರಿಗೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಪಂಪ್ ಸೆಟ್ ಹಾಕಿಕೊಳ್ಳಲು ಲಂಚ‌ ಕೊಡುವುದನ್ನು ಬಿಟ್ಟು 2 ‌ಲಕ್ಷ ರೂ. ಸರ್ಕಾರಕ್ಕೆ ಕಟ್ಟಬೇಕು ಎನ್ನುವ ಕಾನೂನು ತಂದಿದ್ದಾರೆ. ಇದು ಗಾಯದ‌ಮೇಲೆ ಬರೆ ಎಳದಂತಾಗಿದೆ. ರೈತರಿಗೆ ವಿಶ್ವಾಸ ತುಂಬುವ ಕೆಲಸ‌ ಮಾಡುವ ದೃಷ್ಟಿಯಿಂದ ನಾವು ಪ್ರವಾಸ ಮಾಡುತಿದ್ದೇವೆ ಎಂದರು.

ದಂಡುಪಾಳ್ಯ ಗ್ಯಾಂಗ್‌ ಮಾದರಿಯಲ್ಲಿ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ!

ಮುಖ್ಯಮಂತ್ರಿ ಗಳಿಗೆ ಬ್ರೇಕ್ ಫಾಸ್ಟ್ ನಲ್ಲಿ ಇಂಟ್ರೆಸ್ಟ್‌ ಇದೆ. ಇವರಿಗೆ ಡಿನ್ನರ್ ಮತ್ತು ಬ್ರೇಕ್ ಫಾಸ್ಟ್ ಮೀಟಿಂಗ್‌ಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕೇಂದ್ರಕ್ಕೆ ಪರಿಹಾರ ಕೇಳಿರುವುದೇನೋ ಸರಿ, ಆದರೆ ಸಂಕಷ್ಟದಲ್ಲಿರುವ ರೈತರಿಗೆ ನೀವೆಷ್ಟು ಹಣವನ್ನು ಬಿಡುಗಡೆಗೊಳಿಸಿದ್ದೀರಿ? ಖಜಾನೆ ಕೀಲಿಯನ್ನು ಸುರ್ಜೆವಾಲ ಮತ್ತು ವೇಣುಗೋಪಾಲ್ ಗೆ ಕೊಟ್ಟಿದ್ದೀರಿ. ನಾವ್ಯಾರು ನಿಮ್ಮ ಕುರ್ಚಿ ಮೇಲೆ ಕಣ್ಣು ಇಟ್ಟಿಲ್ಲ. 2028ರಲ್ಲಿ ನಿಮ್ಮನ್ನು‌ಸೋಲಿಸಿ ಅಧಿಕಾರ ಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.