ಬೆಂಗಳೂರು ಸೈಟ್ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಪೊದೆ ಬೆಳೆಸಿಕೊಂಡರೆ ಸೈಟ್ ಮಾಲೀಕರಿಗೆ ಬಿಬಿಎಂಪಿ ದಂಡ ವಿಧಿಸಲು ಮುಂದಾಗಿದೆ.
ಬೆಂಗಳೂರು (ನ.05): ಸಿಲಿಕಾನ್ ಸಿಟಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿದ್ದು, ಅದರಲ್ಲಿ ಪೊದೆ ಬೆಳೆಯಲು ಬಿಟ್ಟಲ್ಲಿ ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವ ಮಾಲೀಕರು ಅದರಲ್ಲಿ ತಕ್ಷಣವೇ ಮನೆ ನಿರ್ಮಾಣ ಮಾಡಬೇಕು. ಇಲ್ಲವೇ ಖಾಲಿ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹೂವಿನ ಗಿಡಗಳನ್ನು ಬೆಳೆಸಬಹುದು. ಒಂದು ವೇಳೆ ಖಾಲಿ ನಿವೇಶನದಲ್ಲಿ ಕಸ ಹಾಕುವುದು, ಕಟ್ಟಡ ತ್ಯಾಜ್ಯ ಸುರಿಯುವುದು ಅಥವಾ ಪೊದೆಗಳನ್ನು ಬೆಳೆಸಿದಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಬಿಬಿಎಂಪಿ ವತಿಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ!
ಹೌದು, ನಿಮ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಟ್ ಇದೀಯಾ..? ಅದನ್ನು ನೀವು ವರ್ಷಗಟ್ಟಲೆ ಯಿಂದ ಖಾಲಿ ಬಿಟ್ಟಿದ್ದೀರಾ..? ಹಾಗಾದರೆ ನಿಮಗೆ ಬಿಬಿಎಂಪಿ ಬಿಗ್ ಶಾಕ್ ನೀಡ್ತಿದೆ. ಖಾಲಿ ಸೈಟ್ ಮಾಲೀಕರಿಗೆ ಚಿರತೆ ಸಂಕಷ್ಟ ತಂದಿಟ್ಟಿದೆ. ನಿವೇಶನ ಖರೀದಿಸಿ ಖಾಲಿ ಬಿಟ್ಟವರಿಗೆ ಬಿಬಿಎಂಪಿ ದಂಡವನ್ನು ವಿಧಿಸಲು ಮುಂದಾಗಿದೆ. ಹೀಗಾಗಿ, ಖಾಲಿ ಸೈಟ್ ಇದ್ದ ಮಾಲೀಕರೇ ಎಚ್ಚರವಹಿಸಬೇಕು. ನಿಮ್ಮ ಖಾಲಿ ಸೈಟ್ ನಲ್ಲಿ ಪೊದೆ ಬೆಳೆಯಲು ಬಿಟ್ರೆ ಇನ್ಮುಂದೆ ದಂಡ ವಿಧಿಸಲಾಗುತ್ತದೆ.
ಬೆಂಗಳೂರು ಸೈಟ್ ಮಾಲೀಕರಿಗೆ ಚಿರತೆ ತಂದ ಸಂಕಷ್ಟ: ಬೆಂಗಳೂರಿನ ಇತ್ತೀಚಿನ ದಿನಗಳಲ್ಲಿ ಕಾಡನ್ನು ಬಿಟ್ಟು ಬೆಂಗಳೂರಿನಂತರ ಜನನಿಬಿಡ ಪ್ರದೇಶಗಳಿಗೆ ನುಗ್ಗುತ್ತಿರುವ ಚಿರತೆಗಳು, ರಾತ್ರಿ ವೇಳೆ ನಾಯಿ ಹಾಗೂ ಇತರೆ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಖಾಲಿ ನಿವೇಶನಗಳಿರುವ ಪೊದೆಗಳಲ್ಲಿ ಬೀಡು ಬಿಡುತ್ತಿವೆ. ಚಿರತೆಗಳ ಹಾವಳಿಯಿಂದ ಖಾಲಿ ನಿವೇಶದನ ಮಾಲೀಕರಿಗೆ ಹೊಸ ತಲೆನೋವು ಬಂದಿದೆ. ಇನ್ಮೇಲೆ ಸೈಟ್ ನಿರ್ವಹಣೆ ಮಾಡದೆ ಹಾಗೆ ಬಿಟ್ಟರೆ ದಂಡ ಹಾಕಲು ಚಿಂತನೆ ಮಾಡಿದೆ. ಚಿರತೆ ಕಾಟದಿಂದ ಬಿಬಿಎಂಪಿ ಹೊಸ ರೂಲ್ಸ್ ತರಲು ನಿರ್ಧಾರ ಮಾಡಿದೆ.
ಶಿವಮೊಗ್ಗದ ಡೈನಾಮಿಕ್ ಲೇಡಿ ಕೆಎಎಸ್ ಆಫೀಸರ್ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!
ಖಾಲಿ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳಲು ಬಿಬಿಎಂಪಿ ಶೀಘ್ರ ಆದೇಶ: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನವನ್ನು ಹೊಂದಿದ ಮಾಲೀಕರು ತಮ್ಮ ಸೈಟ್ ಗಳನ್ನು ಸ್ಚಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಲು ಮುಂದಾಗಿದೆ. ಆದರೆ, ಖಾಲಿ ಸೈಟ್‌ಗಳನ್ನು ಮಾಲೀಕರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕಸ ಅಥವಾ ಕಟ್ಟಡ ತ್ಯಾಜ್ಯವನ್ನು ಹಾಕಿದರೆ ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ, ಬಿಬಿಎಂಪಿ ವತಿಯಿಂದಲೇ ಅದನ್ನು ತೆರವು ಮಾಡಿ ತೆರವು ಮಾಡಿದ ಶುಲ್ಕವನ್ನೂ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ.