ಬೆಂಗಳೂರು(ಜೂ.28): ಕರ್ನಾಟಕದಲ್ಲಿ ಮತ್ತೊಂದು ಕಾವಿ ಕಾಮಕಾಂಡ ಬಯಲಿಗೆ ಬಂದಿದ್ದು, ಕರಾವಳಿಗರ ಮೊಬೈಲ್’ನಲ್ಲಿ ಸ್ವಾಮಿಜೀಯೋರ್ವರ ಸಲಿಂಗ ಕಾಮದ ವಿಡಿಯೋ ಹರಿದಾಡುತ್ತಿದೆ. ಸ್ವಾಮಿ ಅಯ್ಯಪ್ಪನ ಪರಮ ಭಕ್ತ ಎಂದು ಹೇಳಿಕೊಳ್ಳುವ ಈತ, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲೂ ಭಾಗವಹಿಸಿ ಗಮನ ಸೆಳೆದಿದ್ದ.

ರಾಜ್ಯದ ಪ್ರಭಾವಿ ಸ್ವಾಮಿಜೀಯಾಗಿರುವ ಈತ, ಅನೇಕ ಸಭೆ ಸಮಾರಂಭಗಳಲ್ಲಿ ಸಮಾಜದ ಪ್ರತಿಷ್ಠಿತರೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ತನ್ನನ್ನು ಪರಮ ಹಿಂದೂವಾದಿ ಸ್ವಾಮಿಜೀ ಎಂದು ಕರೆದುಕೊಳ್ಳುವ ಈ ಕಪಟಿ ಮಾಡಿರುವ ದುಷ್ಕೃತ್ಯದಿಂದಾಗಿ ಇಡಿ ಕಾವಿ ಸಮುದಾಯ ತಲೆ ತಗ್ಗಿಸುವಂತಾಗಿದೆ.

"

ಇನ್ನು ಕಾಮಕಾಂಡದ ದೃಶ್ಯಗಳು ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತ ಸ್ವಾಮೀಜಿ, ನ್ಯಾಯಾಲಯಕ್ಕೆ ಹೋಗಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆ ತಂದಿದ್ದಾನೆ. ಅಲ್ಲದೇ ಎಲ್ಲ ಟಿವಿ ಚಾನೆಲ್’ಗಳನ್ನು ಮ್ಯಾನೇಜ್ ಮಾಡಿದ್ದೀನಿ ಧಿಮಾಕಿನ ಮಾತುಗಳನ್ನಾಡಿದ್ದಾನೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...