Asianet Suvarna News Asianet Suvarna News

IndiaSkills 2021: 29 ಪದಕಗಳೊಂದಿಗೆ 2ನೇ ಸ್ಥಾನ ಪಡೆದ ಕರ್ನಾಟಕ!

  • 29 ಪದಕಗಳನ್ನು ಗೆದ್ದ ಕರ್ನಾಟಕ: 15 ಸ್ವರ್ಣ, 14ರಜತ 
  • 51 ಕೌಶಲ್ಯಗಳಲ್ಲಿ ಐದು ರಾಜ್ಯಗಳಿಂದ 400ಕ್ಕಿಂತ ಹೆಚ್ಚಿನ ಯುವಕರು ಸ್ಪರ್ಧೆ
  • ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣಗ ಭಾಗಿ
Karnataka secures 2nd position in IndiaSkills 2021 Regional competition  South ckm
Author
Bengaluru, First Published Dec 5, 2021, 9:34 PM IST

ವಿಶಾಖಪಟ್ಟ(ಡಿ.05) :  ಅದ್ಭುತ ಕೌಶಲ್ಯ, ಪ್ರತಿಭೆ ಮತ್ತು ಏಕಾಗ್ರತೆಯ ಪ್ರದರ್ಶನದಿಂದ ಕರ್ನಾಟಕ(Karnataka), 15 ಸ್ವರ್ಣ ಮತ್ತು 14 ಬೆಳ್ಳಿ ಪದಕ ಗೆದ್ದು ಇಂಡಿಯಾಸ್ಕಿಲ್ಸ್ 2021 (IndiaSkills) ಪ್ರಾದೇಶಿಕ ಸ್ಪರ್ಧೆಗಳು ದಕ್ಷಿಣ ವಲಯದಲ್ಲಿ 2ನೆ ಸ್ಥಾನ ಪಡೆದುಕೊಂಡಿದೆ.  ಇಂಡಿಯಾಸ್ಕಿಲ್ಸ್ 2021 ಸ್ಪರ್ಧೆಗಳ ದಕ್ಷಿಣದ ಚಾಪ್ಟರ್ ನಲ್ಲಿ 124 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಲಾಯಿತು. ಆಂಧ್ರಪ್ರದೇಶದ(Andhra Pradesh) ವಿಶಾಖಪಟ್ಟಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಗೌರವಿಸಲಾಯಿತು. ಒಟ್ಟೂ ವಿಜೇತರ ಪೈಕಿ, 62 ಮಂದಿಗೆ ಸ್ವರ್ಣ ಪದಕಗಳು ಮತ್ತು ರೂ. 21,000 ನಗದು ಬಹುಮಾನವನ್ನೂ, 62 ಮಂದಿಗೆ ರಜತ ಪದಕ ಹಾಗೂ ರೂ.11,000 ನಗದು ಬಹುಮಾನವನ್ನೂ ನೀಡಲಾಯಿತು. 

ಐದು ರಾಜ್ಯಗಳಿಂದ-ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲಂಗಾಣಗಳಿಂದ 400ಕ್ಕಿಂತ ಹೆಚ್ಚಿನ 19ರಿಂದ 24ವರ್ಷ ವಯೋಮಿತಿಯಲ್ಲಿದ್ದ ಸ್ಪರ್ಧಿಗಳು  ಸ್ಪರ್ಧೆಯಲ್ಲಿ ಭಾಗವಹಿಸಿ, ಬ್ರಿಕ್ ಲೇಯಿಂಗ್, ಆಟೋಬಾಡಿ ರಿಪೇರ್, ವೆಲ್ಡಿಂಗ್, ಸೌಂದರ್ಯ ಚಿಕಿತ್ಸೆ, ಹೋಟೆಲ್ ರಿಸೆಪ್ಶನ್, ಮೊಬೈಲ್ ರೊಬೋಟಿಕ್ಸ್, ಆರೋಗ್ಯ ಮತ್ತು ಸಮೂಹ ಆರೈಕೆ, ಭೂಚಿತ್ರ ಉದ್ಯಾನ, ಮರಗೆಲಸ, ಪೈಂಟಿಂಗ್, ಮತ್ತು ಡೆಕೊರೇಟಿಂಗ್,ವೆಬ್ ತಂತ್ರಜ್ಞಾನಗಳು, ಮುಂತಾದ 51 ಕೌಶಲ್ಯಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು  ಒಗ್ಗೂಡಿದ್ದರು. ಸಲಿದ್ದು ಇವರುಗಳು 50ಕ್ಕಿಂತ ಹೆಚ್ಚಿನ ಕೌಶಲ್ಯಗಳಲ್ಲಿ ಸ್ಪರ್ಧಿಸಲಿದ್ದಾರೆ. ಕೇರಳ ಅತ್ಯಧಿಕ ಪದಕಗಳನ್ನು (32) ಗೆದ್ದಿತು. ಇದರ ನಂತರ ಕರ್ನಾಟಕ(29), ತಮಿಳುನಾಡು(21), ಆಂಧ್ರಪ್ರದೇಶ(18), ಮತ್ತು ತೆಲಂಗಾಣ(2) ಪದಕಗಳನ್ನು ಗೆದ್ದವು. ಕೌಶಲ್ಯ ಸ್ಪರ್ಧೆಗಳನ್ನು, ವಿಶಾಖಪಟ್ಟಣದ ವಿವಿಧ  ಪ್ರದೇಶಗಳಲ್ಲಿ ಸ್ಥಾಪಿನೆಯಾಗಿರುವ 11 ಭಾಗೀದಾರ ಸಂಸ್ಥೆಗಳಲ್ಲಿ(ಪಿಐಗಳು) ನೆರವೇರಿಸಲಾಗಿತ್ತು 

 ಕೋಟಿ ಆರ್ಥಿಕ ಅವಕಾಶಗಳ ಸೃಷ್ಟಿಗೆ ಮಿಷನ್‌ ಯುವ ಸಮೃದ್ಧಿ : ಡಿಸಿಎಂ ಘೋಷಣೆ

ಟ್ರ್ಯಾಕ್ 2 ದಿಂದ(ಸ್ಪರ್ಧೆ ನಡೆದಿಲ್ಲದ ರಾಜ್ಯಗಳಲ್ಲಿ) ಮತ್ತು ಟ್ರ್ಯಾಕ್ 3ದಿಂದ(ಕೈಗಾರಿಕೆಗಳು ಮತ್ತು ಕಾಪೆರ್ರೇಟ್‍ಗಳು ನಿಯೋಜಿಸಿದ) ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇತರ ರಾಜ್ಯಗಳ ಅಭ್ಯರ್ಥಿಗಳೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ವರ್ಗಕ್ಕೆ 22  ಪದಕಗಳನ್ನು ನೀಡಲಾಯಿತು.

ಸ್ಪರ್ಧೆಯ ಪ್ರಾರಂಭೋತ್ಸವ ಹಾಗೂ ಸಮಾರೋಪ ಸಮಾರಂಭಗಳು,  ಆಂಧ್ರಯೂನಿವರ್ಸಿಟಿ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಸಲಾಗಿತ್ತು. ಎಲ್ಲಾ ನಾಲ್ಕು ಪ್ರಾದೇಶಿಕ(ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ) ಸ್ಪರ್ಧೆಗಳ ವಿಜೇತರು, 2022ರ ಜನವರಿಯಲ್ಲಿ ನೆರವೇರಲಿರುವ ಇಂಡಿಯಾಸ್ಕಿಲ್ಸ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಪ್ರತಿಯೊಂದು ಕೌಶಲ್ಯದಲ್ಲಿನ ಇಂಡಿಯಾಸ್ಕಿಲ್ಸ್ ರಾಷ್ಟ್ರೀಯ ಸ್ಪರ್ಧೆಗಳ ಸ್ವರ್ಣ ಮತ್ತು ರಜತ ಪದಕ ವಿಜೇತರು, ಚೀನಾದ ಶಾಂಘಾಯ್‍ನಲ್ಲಿ(ಅಕ್ಟೋಬರ್ 2022) ನಡೆಯಲಿರುವ ವರ್ಲ್ಡ್‍ಸ್ಕಿಲ್ಸ್ ಸ್ಪರ್ಧೆಯಲ್ಲಿ ದೇಶವನ್ನು  ಪ್ರತಿನಿಧಿಸುತ್ತಾರೆ. 

ಡಿಜಿ ಸಕ್ಷಮ್; ಉದ್ಯೋಗಾವಕಾಶ ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ!

ಕಳೆದ ಎರಡು ದಿನಗಳಿಂದ ಇಂಡಿಯಾಸ್ಕಿಲ್ಸ್ ಪ್ರಾದೇಶಿಕ ಸ್ಪರ್ಧೆಗಳು, ದಕ್ಷಿಣ 2021ದಲ್ಲಿ ಭಾಗವಹಿಸಿದ್ದ ನಮ್ಮ ಅತ್ಯಂತ ಪ್ರತಿಭಾವಂತ ಯುವನಜತೆಯನ್ನು ನೋಡಿದಾಗ, ಅವರ ಸಾಮರ್ಥ್ಯಗಳು ನಿಜವಾಗಿಯೂ ಅವರ  ಭವಿಷ್ಯತ್ತನ್ನು ವರ್ಣಿಸುತ್ತಿವೆ ಎನಿಸಿತು. ಎನ್‍ಎಸ್‍ಡಿಸಿ ಪರವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಆಂಧ್ರಪ್ರದೇಶ ಸರ್ಕಾರ, ಎಪಿಎಸ್‍ಎಸ್‍ಡಿಸಿ, ಎಲ್ಲಾ ರಾಜ್ಯ  ಸರ್ಕಾರಗಳು, ಕೈಗಾರಿಕಾ ಭಾಗೀದಾರರು, ಕ್ಷೇತ್ರ ಕೌಶಲ್ಯ ಕೌನ್ಸಿಲ್‍ಗಳು,  ಮತ್ತು ನಮ್ಮ ಭಾಗೀದಾರರಿಗೆ, ಅವರ ಸಹಯೋಗಕ್ಕಾಗಿ ಮತ್ತು ಕೌಶಲ್ಯಗಳ ಬಗ್ಗೆ ಉತ್ಕಂಟತೆ ಬೆಳೆಸಿಕೊಳ್ಳಲು ಯುವಜನತೆಗೆ ಪ್ರೇರಣೆ ನೀಡಿದ್ದಕ್ಕಾಗಿ  ನನ್ನ ಕೃತಜ್ಞತೆಗಳನ್ನು ಅರ್ಪಿಸಬಯಸುತ್ತೇನೆ. ಈ ಸ್ಪರ್ಧೆಯ ಮೂಲಕ ತಮ್ಮ ಅತ್ಯುತ್ಕೃಷ್ಟತೆಯನ್ನು ಪ್ರದರ್ಶಿಸಿದ ಎಲ್ಲಾ ವಿಜೇತರಿಗೆ ಹಾಗೂ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು. ಇಂಡಿಯಾಸ್ಕಿಲ್ಸ್ ಮತ್ತು  ವರ್ಲ್ಡ್‍ಸ್ಕಿಲ್ಸ್ ಜಗತ್ತಿನೆಲ್ಲೆಡೆ ನಮ್ಮ ಕುಶಲ ಯುವಜನತೆಗೆ ಮಾನ್ಯತೆ ತಂದುಕೊಡುತ್ತದೆ ಎಂಬ ನಂಬಿಕೆ ನನಗಿದೆ ಎಂದು ವರ್ಲ್ಡ್‍ಸ್ಕಿಲ್ಸ್ ಇಂಡಿಯಾದ ಹಿರಿಯ ಮುಖ್ಯಸ್ಥ ಕರ್ನಲ್ ಅರುಣ್ ಚಂದೇಲ್ ಹೇಳಿದರು.

2021ರ ಆಗಸ್ಟ್-ಸೆಪ್ಟೆಂಬರ್‍ನಲ್ಲಿಜಿಲ್ಲೆ/ಕ್ಲಸ್ಟರ್ ಮತ್ತುರಾಜ್ಯ ಮಟ್ಟಗಳಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಗಳ ಮೂಲಕ ಪ್ರಾದೇಶಿಕ ಸ್ಪರ್ಧೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.ಇದರಲ್ಲಿ 250,000ಕ್ಕಿಂತ ಹೆಚ್ಚಿನ ನೋಂದಣಿಗಳು ದಾಖಲಾಗಿದ್ದವು. ಈ ವರ್ಷ ಇಂಡಿಯಾಸ್ಕಿಲ್ಸ್ ಪ್ರಾದೇಶಿಕ  ಸ್ಪರ್ಧೆಗಳು, ನಾಲ್ಕು ಪ್ರದೇಶಗಳಾದ್ಯಂತ ಇರುವ 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 1,500 ಅಭ್ಯರ್ಥಿಗಳನ್ನು ತಂದಿತ್ತು. ಪಟ್ನ, ಗಾಂಧಿನಗರ ಹಾಗೂ ಚಂಡೀಗಢ, ಯಶಸ್ವಿಯಾಗಿ ಪೂರ್ವ, ಪಶ್ಚಿಮ ಹಾಗೂ ಉತ್ತರದ ಚಾಪ್ಟರ್‍ಗಳನ್ನು ಪೂರ್ಣಗೊಳಿಸಿದ್ದರೆ, ವಿಶಾಖಪಟ್ಟಣವು, ಇಂಡಿಯಾಸ್ಕಿಲ್ಸ್ ಪ್ರಾದೇಶಿಕ ಸ್ಪರ್ಧೆಗಳು-ದಕ್ಷಿಣವನ್ನು ನಡೆಸಿಕೊಟ್ಟಿತು.

ಈ ಸ್ಪರ್ಧೆಗಳ ಸಮಯದಲ್ಲಿ, ಅಭ್ಯರ್ಥಿಗಳಿಗೆ ಪ್ರಾಜೆಕ್ಟ್-ಆಧಾರಿತ ತರಬೇತಿ, ಕೈಗಾರಿಕೆ ಮತ್ತು ಕಾಪೆರ್Çರೇಟ್ ತರಬೇತಿ, ಕೈಗಾರಿಕೆಗಳಿಗೆ ತೆರೆದುಕೊಳ್ಳುವ ಭೇಟಿಗಳು, ಮಾನಸಿಕ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಮುಂತಾದ ಬೂಟ್ ಕ್ಯಾಂಪ್‍ಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಹು-ಮಟ್ಟದ  ಉದ್ದಿಮೆ ತರಬೇತಿಯನ್ನು ಒದಗಿಸಲಾಗುತ್ತದೆ. ತನ್ನ ಕ್ಷೇತ್ರಕೌಶಲ್ಯ ಪರಿಷತ್ತುಗಳು(ಎಸ್‍ಎಸ್‍ಸಿ) ಮತ್ತು ಭಾಗೀದಾರ ಸಂಸ್ಥೆಗಳ ಮೂಲಕ ಎನ್‍ಎಸ್‍ಡಿಸಿ, ಸ್ಪರ್ಧೆಗಳಿಗೆ ಮತ್ತು ಭವಿಷ್ಯತ್ತಿನ ಪ್ರಯತ್ನಗಳಿಗೂ ತರಬೇತಿ ಒದಗಿಸಲಿದೆ. 

ಎನ್‍ಎಸ್‍ಡಿಸಿ, ವರ್ಲ್ಡ್‍ಸ್ಕಿಲ್ಸ್ ಸ್ಪರ್ಧೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಮುನ್ನಡೆಸುತ್ತಾ ಬಂದಿದೆ. ಕೌಶಲ್ಯ ಅತ್ಯುತ್ಕೃಷ್ಟತೆ ಸ್ವರ್ಣ ಮಾನದಂಡವಾಗಿರುವ ವರ್ಲ್ಡ್‍ಸ್ಕಿಲ್ಸ್, ಎರಡು ವರ್ಷಗಳಿಗೊಮ್ಮೆ ನಡೆಯುವ ಸ್ಪರ್ಧೆಯಾಗಿದ್ದು, ಇದರಲ್ಲಿ 80ಕ್ಕಿಂತ  ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುತ್ತಾರೆ. ಜಗತ್ತಿನಾದ್ಯಂತದಿಂದ ಬರುವ ಕುಶಲ ಹಾಗೂ ಪ್ರತಿಭಾವಂತಯುವಜನತೆ ಅನೇಕ ಕೌಶಲ್ಯಗಳಲ್ಲಿ ಜಾಗತಿಕ ವೇದಿಕೆಯ ಮೇಲೆ ಸ್ಪರ್ಧಿಸುತ್ತಾರೆ. 2019ರಲ್ಲಿ  ರಷ್ಯಾದಕಝಾನ್‍ನಲ್ಲಿ ನಡೆದ ವರ್ಲ್ಡ್‍ಸ್ಕಿಲ್ಸ್‍ನ ಹಿಂದಿನ ಆವೃತ್ತಿಯಲ್ಲಿ 63 ಭಾಗವಹಿಸಿದ ದೇಶಗಳ ಪೈಕಿ ಭಾರತ 13ನೆ ಸ್ಥಾನ ಪಡೆದುಕೊಂಡಿತ್ತು. 1,350 ಸ್ಪರ್ಧಿಗಳು 56ಕ್ಕಿಂತ ಹೆಚ್ಚಿನ ಕೌಶಲ್ಯಗಳಲ್ಲಿ ಭಾಗವಹಿಸಿ, ಭಾರತದ ತಂಡವು 15 ಅತ್ಯುತ್ಕೃಷ್ಟತಾ ಪದಕಗಳ ಜೊತೆಗೆ, ಒಂದು ಸ್ವರ್ಣ, ಒಂದು ರಜತ, ಹಾಗೂ  ಎರಡು ಕಂಚಿನ ಪದಗಳನ್ನು  ಗೆಲ್ಲುವ ಮೂಲಕ ತನ್ನ ಅತ್ಯುತ್ತಮ ಕಾರ್ಯಪ್ರದರ್ಶನ ನೀಡಿತ್ತು.
 

Follow Us:
Download App:
  • android
  • ios