ಸಂಡೂರಿನಲ್ಲೇ ಮನೆ ಮಾಡಿದ ಜನಾರ್ದನ ರೆಡ್ಡಿ; ಕೈಗೆ ಮಾಸ್ಟರ್ ಸ್ಟ್ರೋಕ್ ಕೊಡ್ತಾರಾ ಧಣಿ?

ಸಂಡೂರು ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದನ್ನೇ ಅವಕಾಶ ಮಾಡಿಕೊಂಡ ಜನಾರ್ದನ ರೆಡ್ಡಿ ಅಸಮಾಧಾನಿತ ಕೈ ನಾಯಕರನ್ನು ಸೆಳೆಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.

Karnataka sandur by election 2024 BJP MLA Janardana Reddy attempt at Operation Kamala rav

ಬಳ್ಳಾರಿ (ಅ.27); 13 ವರ್ಷಗಳ ವನವಾಸ ಅನುಭವಿಸಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಳಿಕ ಕೇಳಿಬಂದ ಮಾತು, ಮತ್ತೆ ಬಳ್ಳಾರಿಯಲ್ಲಿ ರಾಜಕೀಯ ಚದುರಂಗದಾಟ ಶುರುವಾಗಲಿದೆ ಎಂಬ ಮಾತು. ಅದಕ್ಕೆ ಇಂಬುಕೊಡುವಂಥೆ ಶಾಸಕ ಜನಾರ್ದನ ರೆಡ್ಡಿ ಸೈಲೆಂಟಾಗಿ ಆಟ ಶುರು ಮಾಡಿದ್ದಾರೆ. ಅಂದು  ಶಾಸಕರನ್ನು ಕರೆದುಕೊಂಡು ಬಂದು ಆಪರೇಷನ್ ಮಾಡಿದ್ದ ಜನಾರ್ದನ ರೆಡ್ಡಿ ಇದೀಗ ಮತ್ತೆ ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿದ್ದೆಗೆಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೂ, ಸಂಡೂರು ಉಪಚುನಾವಣೆ ಬರುವುದಕ್ಕೂ ಸರಿಹೋಗಿದೆ. ಸಂಡೂರು ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದನ್ನೇ ಅವಕಾಶ ಮಾಡಿಕೊಂಡ ಜನಾರ್ದನ ರೆಡ್ಡಿ ಅಸಮಾಧಾನಿತ ಕೈ ನಾಯಕರನ್ನು ಸೆಳೆಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.
 

ಕೈಗೆ ಮಾಸ್ಟರ್ ಸ್ಟ್ರೋಕ್ ಕೊಡ್ತಾರಾ ಜನಾರ್ದನ ರೆಡ್ಡಿ?

ಸಂಡೂರು ಉಪಚುನಾವಣೆ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದೆ. ಈ ಹಿನ್ನೆಲೆ ಸಂಡೂರಿನಲ್ಲಿ ಮನೆ ಮಾಡಿಕೊಂಡು ಕುಳಿತಿರುವ ಜನಾರ್ದನ ರೆಡ್ಡಿ. ಸದ್ದಿಲ್ಲದೆ ಸ್ಥಳೀಯ ಅತೃಪ್ತ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಹಲವು ನಾಯಕರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಸಂಸದ ತುಕಾರಾಂ ಪತ್ನಿಗೆ ಟಿಕೆಟ್ ಸಿಕ್ಕಿದ್ದಕ್ಕೆ  ಕೆಲವರಲ್ಲಿ ಒಳಗೊಳಗೆ ಅಸಮಾಧಾನವೆದ್ದಿದೆ. ಹೀಗಾಗಿ ಇದರ ಲಾಭ ಪಡೆಯಲು ಜನಾರ್ದನ ರೆಡ್ಡಿ ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಡಿಕೆ ಬ್ರದರ್ಸ್ ಸಿಪಿವೈ ರಾಜಕೀಯ ದ್ವೇಷ ಇತ್ತಲ್ಲ? ರಾಜಕಾರಣದಲ್ಲಿ ನೋ ಪರ್ಮನೆಂಟ್ ಎನಿಮಿ ಎಂದ ಪರಮೇಶ್ವರ್

ಇಲ್ಲಿವರೆಗೆ ಬಿಜೆಪಿ ಗೆಲುವು ಸಾಧಿಸಿಲ್ಲ:

ಸಂಡೂರು ಕಾಂಗ್ರೆಸ್‌ ನ ಭದ್ರಕೋಟೆಯಾಗಿದ್ದು. ಇಲ್ಲಿವರೆಗೆ ಸಂಡೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಜನಾರ್ದನ ರೆಡ್ಡಿ. ಹೇಗಾದ್ರೂ ಯಾವ ಮಾರ್ಗದಲ್ಲಾದ್ರೂ ಸರಿ ಈ ಬಾರಿ ಕಮಲ ಅರಳಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ರೆಡ್ಡಿ. ಹೀಗಾಗಿ ಸಂಡೂರಿನಲ್ಲಿ ಮೊಕ್ಕಂ ಹೂಡಿ ಪಕ್ಷದ ಗೆಲುವಿಗೆ ಏನೆಲ್ಲ ಮಾಡಬೇಕೋ ಅದೆಲ್ಲ ತಂತ್ರವನ್ನು ನಡೆಸುತ್ತಿದ್ದಾರೆ. ಒಂದು ವೇಳೆ ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆದಿದ್ದೇ ಆದರೆ ಅದು ಕಾಂಗ್ರೆಸ್ ಗೆ ಭಾರೀ ಹೊಡೆತ ಬೀಳಲಿದೆ.

ಕಾಂಗ್ರೆಸ್‌ನ ಆತಂಕ ಏನು?

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಅಖಾಡಕ್ಕೆ ಸಜ್ಜಾಗಿರುವ ಕಾಂಗ್ರೆಸ್ಸಿಗೆ ಒಳಪೆಟ್ಟಿನ ಆತಂಕ ಎದುರಾಗಿದೆ.
ಇಡೀ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿರುವ ಸಚಿವ ಸಂತೋಷ್‌ ಲಾಡ್ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತುಕಾರಾಂ ಅವರ ಜೋಡೆತ್ತಿನ ಹೋರಾಟ ಗೆಲುವಿನ ಹಾದಿ ಸುಗಮಗೊಳಿಸುತ್ತಿದೆ ಎಂಬ ವಿಶ್ವಾಸದ ನಡುವೆ ಕುಟುಂಬ ರಾಜಕಾರಣದಿಂದ  ಸಮಸ್ಯೆ ತಂದೊಡ್ಡುವ ಸಾಧ್ಯತೆಯೂ ಇದೆ.

ಸಂಡೂರು ಉಪ ಚುನಾವಣೆ ಟಿಕೆಟ್‌ ಹಾಲಿ ಸಂಸದ ತುಕಾರಾಂ ಅವರ ಪತ್ನಿಗೆ ನೀಡಲಾಗಿದೆ. ಇದು ಕೈ ಪಕ್ಷದ ನಿಷ್ಠರಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿದೆ. ಸಂತೋಷ್‌ ಲಾಡ್ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಜಿಪಂ ಮಾಜಿ ಸದಸ್ಯ ತುಮಟಿ ಲಕ್ಷ್ಮಣ ಹಲವು ದಶಕಗಳಿಂದ ಕಾಂಗ್ರೆಸ್‌ನಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಕೊಡದೇ ಸಂಸದರ ಪತ್ನಿಗೆ ಟಿಕೆಟ್ ನೀಡಿರುವುದು ತುಮಟಿ ಲಕ್ಷ್ಮಣಗೆ ತೀವ್ರ ಅಸಮಾಧಾನ ಇದ್ದೇ ಇದೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತುಕಾರಾಂ ಅವರನ್ನು ಮತ್ತೆ ಸಂಸದರನ್ನಾಗಿ ಮಾಡಲಾಗಿದೆ. ಅದೇ ಕುಟುಂಬಕ್ಕೆ ಶಾಸಕರಾಗಿ ಆಯ್ಕೆಯಾಗುವ ಅವಕಾಶ ನೀಡಿದರೆ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದವರ ಪಾಡೇನು? ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದು ಈ ಬಾರಿ ಚುನಾವಣೆ ಗೆಲುವು ಸುಲಭವಿದೆ. ಇಂತಹ ಸಂದರ್ಭದಲ್ಲಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಳ್ಳುವ ಕಾಳಜಿಯನ್ನು ಸಚಿವ ಸಂತೋಷ್ ಲಾಡ್ ಸೇರಿದಂತೆ ಪಕ್ಷದ ರಾಜ್ಯ ನಾಯಕರು ತೋರಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.

ಸಿಪಿವೈ ರೀತಿ ಸೆಳೆಯಲು ಕಾಂಗ್ರೆಸ್ ಕರೆದರೂ ದಿವಾಕರ್ ಕಿವಿಗೊಡಲಿಲ್ಲ; ಜನಾರ್ದನ ರೆಡ್ಡಿ

ಗೆಲುವಿನ ಲೆಕ್ಕಾಚಾರ:

ಒಂದೆಡೆ ಕುಟುಂಬ ರಾಜಕಾರಣ ಆರೋಪದ ಒಳಪೆಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರುವ ಗುಮಾನಿ ನಡುವೆ, ಜಾತಿ ಲೆಕ್ಕಾಚಾರದ ಮತಗಳು ಕೈ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ. ದಲಿತ, ಮುಸ್ಲಿಂ, ಕುರುಬ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್‌ ಮತ ಬುಟ್ಟಿಗೆ ಬೀಳುವುದು ಖಚಿತವಾಗಿದೆ.  ಇನ್ನೊಂದು ವಿಚಾರವೆಂದರೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮಹಿಳೆಯಾಗಿದ್ದು ಮಹಿಳೆಯರ ಮತಗಳನ್ನು ಸೆಳೆಯಬಹುದು. ಜೊತೆಗೆ ಐದು ಗ್ಯಾರಂಟಿ ಯೋಜನೆಗಳು ಮಹಿಳಾ ಮತಗಳನ್ನು ಒಗ್ಗೂಡಿಸುತ್ತವೆ. ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನದಿಂದ ಸಂಡೂರಿನ ಬಿಜೆಪಿಯ ಪ್ರಭಾವಿ ಮುಖಂಡ ಕಾರ್ತಿಕ್ ಘೋರ್ಪಡೆ ಅಸಮಾಧಾನಗೊಂಡಿರುವುದು ಬಿಜೆಪಿಯೊಂದಿಗೆ ಸೇರ್ಪಡೆಯಾದಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಬಹುದು.

Latest Videos
Follow Us:
Download App:
  • android
  • ios