Asianet Suvarna News Asianet Suvarna News

ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ, ಯುಕೆಯಲ್ಲಿ 2 ಲಕ್ಷ ಕೋವಿಡ್ ಕೇಸ್ ದಾಖಲು!

  • ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಳ
  • ಕರ್ನಾಟಕದಲ್ಲಿ ಓಮಿಕ್ರಾನ್ ಗಣನೀಯ ಏರಿಕೆ
  • ಕೋವಿಡ್ ಸ್ಫೋಟದಿಂದ ಯುಕೆಯಲ್ಲಿ ನಿರ್ಬಂಧ ಜಾರಿ
Karnataka Reports 99.20 percent Omicron cases from May 2022 to June says Health Minister K Sudhakar ckm
Author
Bengaluru, First Published Jun 22, 2022, 4:51 PM IST

ಬೆಂಗಳೂರು(ಜೂ.22): ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ ಎದುರಾಗಿದೆ. ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಓಮಿಕ್ರಾನ್ ಬಿಎ.2 ಹಾಗೂ ಬಿಎ.5 ಉಪತಳಿಗಳ ಸಂಖ್ಯೆ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಸದ್ಯ ಕೋವಿಡ್ ಪ್ರಕರಣಗಳ ಕುರಿತು ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. 2022ರ ಮೇ ತಿಂಗಳಿನಿಂದ ಜೂನ್ ತಿಂಗಳ ವರೆಗೆ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 90.20 ರಷ್ಟು ಓಮಿಕ್ರಾನ್ ಪ್ರಕರಣಗಳಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಸೋನಿಯಾ ಗಾಂಧಿ ಇಡಿಗೆ ಪತ್ರ, ವಿಚಾರಣೆ ಮುಂದೂಡಲು ಮನವಿ!

ಮಾರ್ಚ್ 2021ರಿಂದ ಡಿಸೆಂಬರ್ 2021ರ ವರೆಗೆ ಕರ್ನಾಟಕದಲ್ಲಿ ಶೇಕಡಾ  90.7ರಷ್ಟು ಡೆಲ್ಟಾ ಪ್ರಕರಣಗಳು ಪತ್ತೆಯಾಗಿತ್ತು. ಇನ್ನು 2022ರ ಜನವರಿಯಿಂದ ಎಪ್ರಿಲ್ 2022ರ ವರೆಗೆ ಓಮಿಕ್ರಾನ್ ಉಪತಳಿಗಳ ಸಂಖ್ಯೆ ಶೇಕಡಾ 87.80 ಆಗಿತ್ತು. ಇದೀಗ ಶೇಕಡಾ 90.20 ರಷ್ಟು ಪ್ರಕರಣಗಳು ಓಮಿಕ್ರಾನ್ ಆಗಿವೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ

 

 

ಯುಕೆಯಲ್ಲಿ ಕೋವಿಡ್ ಸ್ಫೋಟ
ಯುಕೆನಲ್ಲಿ ಕೊರೋನಾ ಮತ್ತೆ ಸ್ಫೋಟಗೊಂಡಿದೆ. ಯುಕೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಶೇಕಡಾ 75 ರಷ್ಟು ಹೆಚ್ಚಾಗಿದೆ. ಇದೀಗ 2 ಲಕ್ಷ ಹೊಸ ಕೇಸ್‌ಗಳು ಯುಕೆಯಲ್ಲಿ ಪತ್ತೆಯಾಗಿದೆ. ಇದರ ಜೊತೆಗೆ  ಓಮಿಕ್ರಾನ್ ಉಪತಳಿ ಪ್ರಕರಣವೂ ಗಣನೀಯವಾಗಿ ಏರಿಕೆಯಾಗಿದೆ.

ಗಣನೀಯವಾಗಿ ಏರಿಕೆಯಾಗುತ್ತಿದ್ದ ಕೋವಿಡ್ ಪ್ರಕರಣ ಸಂಖ್ಯೆ ಮಂಗಳವಾರ ಇಳಿಕೆಯಾಗಿತ್ತು. ಇದು ಕೊಂಚ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಕರ್ನಾಟಕದಲ್ಲಿ ಮತ್ತೆ ಓಮಿಕ್ರಾನ್ ಸದ್ದು ಮಾಡುತ್ತಿರುವುದು ಆತಂಕ ತಂದಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 9923 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಸೋಮವಾರ 12,781 ದೈನಂದಿನ ಪ್ರಕರಣಗಳು ವರದಿಯಾಗಿದ್ದವು. ಇದೇ ವೇಳೆಯಲ್ಲಿ 17 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 79,313ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 2.55ಕ್ಕೆ ಇಳಿಕೆಯಾಗಿದೆ, ವಾರದ ಪಾಸಿಟಿವಿಟಿ ದರವು ಶೇ. 2.67ಕ್ಕೆ ಇಳಿದಿದೆ.ಕೋವಿಡ್‌ ಚೇತರಿಕೆ ದರವು ಶೇ.98.61ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 196.32 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್, ರಾಜ್ಯಪಾಲ ಕೋಶಿಯಾರಿಗೆ ಕೋವಿಡ್ ಪಾಸಿಟಿವ್!

ಬೆಂಗಳೂರಿನಲ್ಲಿ ಮಂಗಳವಾರ 698 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಪಾಸಿಟಿವಿಟಿ ದರ ಶೇ.4ಕ್ಕೆ ಏರಿದೆ. 602 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ.ನಗರದಲ್ಲಿ ಸದ್ಯ4,819 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಮಂದಿ ಐಸಿಯು ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

14,482 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,920 ಮಂದಿ ಮೊದಲ ಡೋಸ್‌, 6707 ಮಂದಿ ಎರಡನೇ ಡೋಸ್‌ ಮತ್ತು 5855 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 16222 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 12859 ಆರ್‌ಟಿಪಿಸಿಆರ್‌ ಹಾಗೂ 3363 ಮಂದಿ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ಮಹದೇವಪುರ 4 ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿದ್ದು, ಇಲ್ಲಿ ಒಟ್ಟು 28 ಪ್ರದೇಶಗಳು ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿವೆ. ಉಳಿದಂತೆ ಆರ್‌ಆರ್‌ ನಗರದಲ್ಲಿ 3, ಯಲಹಂಕ ವಲಯದಲ್ಲಿ 1 ಸೇರಿದಂತೆ ಒಟ್ಟು 32 ಕಂಟೈನ್ಮೆಂಟ್‌ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕೊರೋನಾ ಪಾಸಿಟಿವ್..?

 

Follow Us:
Download App:
  • android
  • ios