Asianet Suvarna News Asianet Suvarna News

ಬುಧವಾರ ಕರ್ನಾಟಕದಲ್ಲಿ ಕೊರೋನಾ ಮಹಾಸ್ಪೋಟ: ಬೆಂಗ್ಳೂರು ಜನರಿಗೆ ಶಾಕ್

ಕರ್ನಾಟಕದಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಇಂದು (ಬುಧವಾರ) ಕರ್ನಾಟಕದಲ್ಲಿ ಬರೋಬ್ಬರಿ 1272 ಪ್ರಕರಣಗಳು ವರದಿಯಾಗಿದೆ.  ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಕೇಸ್ ಪತ್ತೆಯಾಗಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

Karnataka reports 7 deaths 1272 fresh COVID19 cases On July 1st
Author
Bengaluru, First Published Jul 1, 2020, 8:51 PM IST | Last Updated Jul 1, 2020, 8:57 PM IST

ಬೆಂಗಳೂರು, (ಜುಲೈ.01): ಕರ್ನಾಟಕದಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಇಂದು (ಬುಧವಾರ) ಬರೋಬ್ಬರಿ 1272 ಜನರಿಗೆ ಮಾಹಾಮಾಡಿ ಅಟ್ಯಾಕ್ ಆಗಿದೆ.

ಬೆಂಗಳೂರಿನಲ್ಲಿ 735 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 1272 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16514ಕ್ಕೆ ಏರಿಕೆಯಾಗಿದೆ.

ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಸಿಎಂ ಸಭೆಯ ಮುಖ್ಯಾಂಶಗಳು

ಇದರ ಜೊತೆಗೆ ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ 7 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 253ಕ್ಕೇರಿಕೆಯಾಗಿದೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಬುಧವಾರ 145 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 8063ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 8194 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 292 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಿಪೋರ್ಟ್ ತಿಳಿಸಿದೆ.

ಕೊರೋನಾ ವೈರಸ್ ಟೆಸ್ಟ್‌ನಲ್ಲಿ ಕರ್ನಾಟಕ ಹಿಂದೆ..!

ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ, ಹಾಸನ ತಲಾ 28, ಉತ್ತರಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ16, ಚಿಕ್ಕಬಳ್ಳಾಪುರ15, ಕಲಬುರಗಿ, ರಾಮನಗರ ತಲಾ 14, ಕೊಪ್ಪಳ 13, ರಾಯಚೂರು, ಚಿತ್ರದುರ್ಗ ತಲಾ 12, ಯಾದಗಿರಿ, ಬೀದರ್‌, ಬೆಳಗಾವಿಯಲ್ಲಿ ತಲಾ 8, ಕೊಡಗು 7, ಮಂಡ್ಯ, ಕೋಲಾರದಲ್ಲಿ ತಲಾ 5, ಶಿವಮೊಗ್ಗ 3, ಗದಗ 2, ಚಿಕ್ಕಮಗಳೂರಿನಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.

Latest Videos
Follow Us:
Download App:
  • android
  • ios