ಮುಂಗಾರು ಕೈಕೊಡುವ ಮುನ್ಸೂಚನೆಯೇ ಇಲ್ಲ: ಹವಾಮಾನ ಇಲಾಖೆ ಘೋಷಣೆ
ಕರ್ನಾಟಕದಲ್ಲಿ ಈ ಬಾರಿಯೂ ವಾಡಿಕೆಯಷ್ಟು ಮುಂಗಾರು ಮಳೆಯಾಗಲಿದೆ. ಮಳೆ ಕಡಿಮೆಯಾಗುವ ಯಾವುದೇ ಮುನ್ಸೂಚನೆಯಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು (ಜೂ.20): ರಾಜ್ಯಕ್ಕೆ ಮಾನ್ಸೂನ್ ಮಾರುತಗಳು ಬಂದಿದ್ದು, ಮುಂಗಾರು ಮಳೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಂದಿನ 5 ದಿನಗಳು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಬಾರಿಯೂ ವಾಡಿಕೆಯಷ್ಟು ಮುಂಗಾರು ಮಳೆಯಾಗಲಿದೆ. ಮಳೆ ಕಡಿಮೆಯಾಗುವ ಯಾವುದೇ ಮುನ್ಸೂಚನೆಯಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಹವಾಮಾನ ಇಲಾಖೆ ನಿರ್ದೇಶಕ ಎ. ಪ್ರಸಾದ್ ಅವರು, ರಾಜ್ಯದಲ್ಲಿ ಇನ್ನು 5 ದಿನ ಮಳೆ ಮುನ್ಸೂಚನೆಯಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಬೀಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧೆಡೆ ಮಳೆಯಾಗಲಿದೆ. ಬೆಂಗಳೂರಲ್ಲಿ ಸಾಧಾರಣ ಮಳೆಯಾಗಲಿದ್ದು, ಐದು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಇರುತ್ತದೆ. ಜೊತೆಗೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆಯ ಆರ್ಭಟ: ಸಾರ್ವಜನಿಕರ ಪರದಾಟ
ಐದು ಜಿಲ್ಲೆಗಳಲ್ಲಿ ಯಲ್ಲೂ ಅಲರ್ಟ್: ರಾಜ್ಯದ ದಕ್ಷಿಣ ಒಳನಾಡಿದನ ಐದು ಜಿಲ್ಲೆಗಳಾದ ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯಗಳಲ್ಲಿ ಯಲ್ಲೋ (ಹಳದಿ) ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಾರೀ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಈ ಬಾರಿಯೂ ವಾಡಿಕೆಯಂತೆ ಮುಂಗಾರು ಮಳೆಯಾಗಲಿದೆ. ಮುಂಗಾರು ಕೈಕೊಡುವ, ಕಡಿಮೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಜೂನ್ 21ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆಯಲಿದೆ ಎಂದು ಮಾಹಿತಿಯನ್ನು ನೀಡಿದರು.
ಸಿಡಿಲು ಬಡಿದು ಮಂಡ್ಯದ ರೈತ ಸಾವು: ಇಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದ್ದು, ಮಂಡ್ಯದಲ್ಲಿ ಸಿಡಿಲಿಗೆ ಓರ್ವ ರೈತ ಬಲಿಯಾಗಿದ್ದಾನೆ. ಮೃತ ರೈತನನ್ನು ಬೀರುವಳ್ಳಿ ಗ್ರಾಮದ ಮಂಜುನಾಥ್ (47) ಎಂದು ಗುರುತಿಸಲಾಗಿದೆ. ಮಂಡ್ಯ ಜಿ. ಕೆ.ಆರ್.ಪೇಟೆ ತಾ. ಬೀರುವಳ್ಳಿ ಗ್ರಾಮ. ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಬೀರುವಳ್ಳಿ ಗ್ರಾಮದ ರೈತ ಮಂಜುನಾಥನಿಗೆ ಸಿಡಿಲು ಬಡಿದು ಅಸ್ವಸ್ಥನಾಗಿ ಬಿದ್ದಿದ್ದನು. ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ಕರೆತರುವ ಮುನ್ನವೆ ಸಾವನಪ್ಪಿದ್ದಾನೆ. ಸಾವನಪ್ಪಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಇವರ ಸಮೀಪದಲ್ಲಿಯೇ ಕೆಲಸ ಮಾಡುತ್ತಿದ್ದ ಮತ್ತೊಬ್ಬ ರೈತ ರಾಜು ಎಂಬ ಸಿಡಿಲು ಸ್ಪರ್ಶವಾದರೂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜುಗೆ ಸ್ಥಳೀಯ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಡಿಲು ಬಡಿದು ಸಾವನ್ನಪ್ಪಿದ ಮಂಜುನಾಥ್ ಗೆ ಪರಿಹಾರ ನೀಡುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.
ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ
ಹಾಸನದಲ್ಲಿ ಮೆಡಿಕಲ್ ಶಾಪ್‌ಗೆ ನುಗ್ಗಿದ ನೀರು: ಹಾಸನದಲ್ಲಿ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ತಗ್ಗು ಪ್ರದೇಶಗಳಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿದೆ. ಮೆಡಿಕಲ್ ಶಾಪ್, ಕಂಪ್ಯೂಟರ್ ಅಂಗಡಿ, ಸೈಬರ್ ಸೆಂಟರ್, ದಿನಸಿ ಅಂಗಡಿ ಸೇರಿ ವಿವಿಧ ಮಳಿಗೆಗಳಿಗೆ ಮಳೆಯ ನೀರು ನುಗ್ಗಿರುವ ಘಟನೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಯೂ ವಾಹನ ಸವಾರರು ಲೈಟ್ ಹಾಕಿಕೊಂಡು ಸಂಚಾರ ಮಾಡುತ್ತಿದ್ದರು. ಬೈಕ್ ಸವಾರರು ಮಳೆಯಲ್ಲಿ ಚಾಲನೆ ಮಾಡದಷ್ಟು ರಭಸವಾಗಿ ಮಳೆ ಸುರಿಯುತ್ತಿತ್ತು.