ಕೂಲಿ ಕೆಲಸ ಹೊರಟಿದ್ದ ವೇಳೆ ಟ್ರಾಲಿ ಸಮೇತ ಟ್ರ್ಯಾಕ್ಟರ್ ನದಿಗೆ ಮುಗುಚಿಬಿದ್ದ ದುರಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ ಇನ್ನೊಂದೆಡೆ ಧರ್ಮಸ್ಥಳಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಗಂಭೀರ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಬೆಳಗಾವಿ (ಜೂ.9) ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ನದಿ ಹಳ್ಳಗಳು ತುಂಬಿಹರಿದು ಅವಾಂತರ ಸೃಷ್ಟಿಸಿದೆ. ಮೂಡಲಗಿ ತಾಲೂಕಿನ ಅವರಾದಿ ನಂದಗಾಂವ್ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ದಾಟುವಾಗ 13 ಜನರಿದ್ದ ಟ್ರ್ಯಾಕ್ಟರ್ ಘಟಪ್ರಭಾ ನದಿಯಲ್ಲಿ ಮುಗುಚಿಬಿದ್ದ ದುರಂತ ಘಟನೆ ನಡೆದಿದೆ.

 ಅವರಾದಿಯಿಂದ ನಂದಗಾಂವ್ ಗೆ ಕೂಲಿ ಕೆಲಸಕ್ಕೆಂದು‌ ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದ ಜನ ರು. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಅಪಾಯದ ನಡುವೆ ಟ್ರಾಕ್ಟರ್‌ ಇಳಿಸಿದ್ದ ಚಾಲಕ. ನದಿಯ ಮಧ್ಯೆಕ್ಕೆ ಹೋಗುತ್ತಿದ್ದಂತೆ ಟ್ರಾಲಿ ಸಮೇತ ನೀರಿಗೆ ಬಿದ್ದ ಟ್ರ್ಯಾಕ್ಟರ್. ಈ ವೇಳೆ ಟ್ರ್ಯಾಕ್ಟರ್‌ನಲ್ಲಿ 13 ಜನರ ಪೈಕಿ 12 ಜನರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಇನ್ನೋರ್ವ ನದಿಗೆ ಬಿದ್ದು ಕಣ್ಮರೆಯಾಗಿದ್ದಾನೆ. ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ. ಸದ್ಯ ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಲಗೋಡ ಪೊಲೀಸರು ಕಣ್ಮರೆಯಾದ ವ್ಯಕ್ತಿಗೆ ಶೋಧಕಾರ್ಯ ಮುಂದುವರಿದಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿ ವಿದ್ಯುತ್ ಕಂಬ ಸ್ಪರ್ಶಿಸಿ ದಾರುಣ ಸಾವು!

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ!

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಕ್ರಾಸ್‌ನಲ್ಲಿ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಜೆಆರ್‌ಬಿ ಹೆಸರಿನ ಖಾಸಗಿ ಬಸ್. ಅತಿವೇಗದಿಂದ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ ಸದ್ಯ ಗಾಯಾಳುಗಳನ್ನ ಆನಂದಪುರ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.