Asianet Suvarna News Asianet Suvarna News

ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿ ವಿದ್ಯುತ್ ಕಂಬ ಸ್ಪರ್ಶಿಸಿ ದಾರುಣ ಸಾವು!

ಬೆಳಗ್ಗೆ ಶಾಲೆಗೆ ಹೋಗಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

primary school female student dies due to electric shock at vijjayanagar district rav
Author
First Published Jun 7, 2024, 1:49 PM IST | Last Updated Jun 7, 2024, 1:49 PM IST

ವಿಜಯನಗರ (ಜೂ.7): ಬೆಳಗ್ಗೆ ಶಾಲೆಗೆ ಹೋಗಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕಾತ್ರಿಕಾಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕಿ. ಇಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿ. ಗ್ರಾಮದಲ್ಲಿ ಮಳೆ ಬಂದಿರೋ ಹಿನ್ನೆಲೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿದೆ. ಬಾಲಕಿ ವಿದ್ಯುತ್ ಕಂಬ ಸ್ಪರ್ಶಿಸಿದ್ದರಿಂದ ಶಾಕ್ ಹೊಡೆದಿದೆ. ಕಣ್ಮುಂದೆ ಶಾಲೆಗೆ ಹೋಗಿದ್ದ ಬಾಲಕಿ ಕೆಲವೇ ಸಮಯಕ್ಕೆ ದುರ್ಮರಣಕ್ಕೀಡಾದದ್ದು ಕೇಳಿ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು. ಗ್ರಾಮದಲ್ಲಿ ವಿದ್ಯುತ್ ಕಂಬಗಳ ಬಗ್ಗೆ ನಿರ್ಲಕ್ಷ್ಯ. ಸರಿಯಾದ ಕಂಬಗಳನ್ನ ಹಾಕದೇ ಬೇಕಾಬಿಟ್ಟಿ ಹಾಕಿರುವ ವಿದ್ಯುತ್ ಕಂಬಗಳು. ಬಾಲಕಿಯ ಸಾವಿಗೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು. 

ತಾಯಿಗೆ ಎಳನೀರು ತರಲು ಹೋಗಿದ್ದ ಮಗ ತೆಂಗಿನಮರದಿಂದ ಬಿದ್ದ ಸಾವು!

ಘಟನೆ ಬಳಿಕ ಕಾನಾಹೊಸಳ್ಳಿ ಪಿಎಸ್‌ಐ ಎರಿಯಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಾನಾಹೊಸಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಳ್ಳಾರಿ, ವಿಜಯನಗರದಲ್ಲಿ ಭಾರೀ ಮಳೆ

ಇಂದು ಸಹ ಬಳ್ಳಾರಿ, ವಿಜಯನಗರ ಸುತ್ತಮುತ್ತ ಕಳೆದೊಂದು ತಾಸಿನಿಂದ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಮಳೆಯ ಅರ್ಭಟಕ್ಕೆ ಕೆರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಚರಂಡಿಯಲ್ಲೂ ನೀರು ತುಂಬಿ ರಸ್ತೆಗೆ ಹರಿದಿವೆ. ಬಳ್ಳಾರಿ, ಹೊಸಪೇಟೆ ನಗರ, ಸಿರುಗುಪ್ಪ, ಕಂಪ್ಲಿ, ಕುರುಗೋಡು  ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದಲೇ ಭಾರಿ ಮಳೆಯಾಗ್ತಿದೆ. 

Latest Videos
Follow Us:
Download App:
  • android
  • ios