ಅನ್ನದಾತನ ಪಾಲಿಗೆ ಮುಳುವಾಯ್ತು ವರ್ಷದ ಮೊದಲ ಮಳೆ!

ಕಳೆದ ವರ್ಷ ಬರದ ಬೇಗೆಗೆ ಬಸವಳಿದ ರೈತರಿಗೆ ಈ ಬಾರಿ ವರುಣದೇವ ಖುಷಿ ನೀಡಿದ್ದಾನೆ. ನಿನ್ನೆ ಇಂದಲೇ ವರ್ಷದ ಮೊದಲ ಮಳೆ ಆಗಮವಾಗಿದೆ. ಇನ್ನೇನು ಮಳೆ ಬಂತು ಅಂತ ಖುಷಿಯಲ್ಲಿದ್ದ ಅನ್ನದಾತನಿಗೆ ಬರ ಸಿಡಿಲು ಬಡಿದಂತಾಗಿದೆ.ವರುಣಾರ್ಭಟಕ್ಕೆ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Karnataka Rains banana plantation destroyed by heavy rain at chamarajanagar rav

ವರದಿ - ಪುಟ್ಟರಾಜು. ಆರ್. ಸಿ. 

ಚಾಮರಾಜನಗರ (ಮೇ.12) - ಕಳೆದ ವರ್ಷ ಬರದ ಬೇಗೆಗೆ ಬಸವಳಿದ ರೈತರಿಗೆ ಈ ಬಾರಿ ವರುಣದೇವ ಖುಷಿ ನೀಡಿದ್ದಾನೆ. ನಿನ್ನೆ ಇಂದಲೇ ವರ್ಷದ ಮೊದಲ ಮಳೆ ಆಗಮವಾಗಿದೆ. ಇನ್ನೇನು ಮಳೆ ಬಂತು ಅಂತ ಖುಷಿಯಲ್ಲಿದ್ದ ಅನ್ನದಾತನಿಗೆ ಬರ ಸಿಡಿಲು ಬಡಿದಂತಾಗಿದೆ.ವರುಣಾರ್ಭಟಕ್ಕೆ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಕಣ್ಣಾಡಿಸಿದ ಕಡೆಯೆಲ್ಲಾ ಮುರಿದು ಬಿದ್ದಿರುವ ಬಾಳೆ ಬೆಳೆ.. ಅತ್ತಿಂದಿತ್ತ ಓಡಾಡುತ್ತಾರೊ ರೈತ.. ಕಣ್ಣಲ್ಲಿ ನೀರು ಹಾಕುತ್ತಾ ಅದ್ಯಾರನ್ನೊ ಶಪಿಸುತ್ತಿರುವ ಅನ್ನದಾತ.. ಇನ್ನೇನು ಎರೆಡೆ ಎರೆಡು ತಿಂಗಳು ಕಳೆದಿದ್ರೆ ಹಾಕಿದ ಬಂಡವಾಳ ಕೈಗೆ ಬರೋದ್ರಲ್ಲಿತ್ತು.. ಆದ್ರೆ ವರುಣನ ರುದ್ರನರ್ತನ ಬಿರುಗಾಳಿಯ ರಣಾರ್ಭಟಕ್ಕೆ 7 ಎಕರೆ ಜಮೀನಿನಲ್ಲಿ ಹಾಕಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೌದು ನಿನ್ನೆ ಸುರ3ದ ಬಿರುಗಾಳಿ ಸಹಿತ ಭಾರಿ ಮಳೆಗೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಉತ್ತವಳ್ಳಿ ಗ್ರಾಮದ ಸುತ್ತಾ ಮುತ್ತಾ ನೂರಾರು ಎಃರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಈಗ ದರೆ ಶಾಹಿಯಾಗಿದ್ದು ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಕಾಫಿನಾಡ ಮಳೆಗೆ ಮೂರನೇ ಬಲಿ; ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಮುರಿದುಬಿದ್ದ ಮರ

ಇನ್ನು ಕಳೆದ ವರ್ಷ ಮಳೆ ಇಲ್ಲದೆ ಬರದ ಚಾಯೆ.. ಈ ಬಾರಿ ಉತ್ತಮ ಮಳೆಯಾಗುವ ಸೂಚನೆ ಸಿಕ್ಕ ರೈತನ ಮಗದಲ್ಲಿ ಮಂದಹಾಸ ಮೂಡಿತ್ತು. ಆದ್ರೆ ನಿನ್ನೆ ಸುರಿದ ವರ್ಷದ ಮೊದಲ ಮಳೆ ಈಗ ಅನ್ನದಾತನ ಪಾಲಿಗೆ ಕಂಠಕವಾಗಿ ಬದಲಾಗಿದೆ. ಬ್ಯಾಂಕ್ ನಲ್ಲಿ ಸಾಲ ಸೂಲ ಮಾಡಿ ಜಮೀನಿನ ಮೇಲೆ ಹಾಕಲಾಗಿತ್ತು ಇನ್ನೆನು ಎರೆಡೆ ಎರೆಡು ತಿಂಗಳು ಕಳೆದಿದ್ರೆ ಫಲ ಕೈ ಸೇರುತ್ತಿತ್ತು ಆದ್ರೆ ನಿನ್ನೆ ಸುರಿದ ಮಳೆ ಗಾಳಿಗೆ ಈಗ ರೈತನ ಬದುಕೆ ಈಗ ಬೀದಿಗೆ ಬಿದ್ದಂತಾಗಿದೆ. ನಿನ್ನೆ ಈ ಅವಘಡ ನಡೆದಿದ್ರು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು 24 ಗಂಟೆ ಕಳೆದ್ರು ಯಾರೊಬ್ಬ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡದೆ ಆಲಸ್ಯ ತೋರಿದ್ದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: 18 ಜಿಲ್ಲೆಗಳಿಗಿಂದು ಯಲ್ಲೋ ಅಲರ್ಟ್

ಅದೇನೆ  ಹೇಳಿ  ಕಳೆದ  ವರ್ಷ  ಮಳೆಯಿಲ್ಲದೆ  ಬಸವಳಿದ ರೈತನಿಗೆ ಈ ಭಾರಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ, ಆದ್ರೆ ನಿನ್ನೆ ಬಿರುಗಾಳಿ ಸಹಿತ ಕುರಿದ ಭಾರಿ ಮಳೆ ಈಗ ಅನ್ನದಾತನ ಅನ್ನವನ್ನೆ ಕಿತ್ತುಕೊಂಡಂತಾಗಿದೆ. ಈಗಲಾದ್ರು ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡಿ ಅನ್ನದಾತನ ಕೈ ಬಲ ಪಡಿಸಬೇಕಿದೆ..

Latest Videos
Follow Us:
Download App:
  • android
  • ios