ಕಲಬುರಗಿ: ಎತ್ತಿನಬಂಡಿಯಲ್ಲಿ ಮನೆಗೆ ಬರುವಾಗ ಸಿಡಿಲು ಬಡಿದು ಬಾಲಕ ದುರ್ಮರಣ!

ಕೃಷಿ ಕೆಲಸ ಮಾಡಿ ಜಮೀನಿನಿಂದ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಸ್ ಬರುವಾಗ ಸಿಡಿಲು ಬಡಿದು ಹತ್ತು ವರ್ಷದ ಬಾಲಕ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ನಡೆದಿದೆ.

Karnataka Rain update 10 years old boy dies by lightning at kalaburagi rav

ಕಲಬುರಗಿ (ಏ.20): ಕೃಷಿ ಕೆಲಸ ಮಾಡಿ ಜಮೀನಿನಿಂದ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಸ್ ಬರುವಾಗ ಸಿಡಿಲು ಬಡಿದು ಹತ್ತು ವರ್ಷದ ಬಾಲಕ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ನಡೆದಿದೆ.

ಮಹೇಶ್(10) ಮೃತ ಬಾಲಕ. ಪೋಷಕರೊಂದಿಗೆ ಜಮೀನಿಗೆ ತೆರಳಿದ್ದ ಬಾಲಕ. ವಾಪಸ್ ಬರುವಾಗ ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆ. ಈ ವೇಳೆ ಬಂಡಿಯಲ್ಲಿ ಕುಳಿತಿದ್ದ ಬಾಲಕನಿಗೆ ಬಡಿದ ಸಿಡಿಲು. ಸಿಡಿಲಿನ ಹೊಡೆತಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. 

 

ರಾಯಚೂರಲ್ಲಿ ಸುರಿದ ಅಕಾಲಿಕ ಮಳೆ; ಸಿಡಿಲು ಬಡಿದು ಯುವಕ ಸಾವು

ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಬಿರುಗಾಳಿ ಗುಡುಗು ಸಹಿತ ಸುರಿದ ಅಕಾಲಿಕ ಮಳೆಯ ಅರ್ಭಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಹಲವೆಡೆ ಮನೆಯ ಶೆಡ್‌ಗಳು ಕಿತ್ತುಹೋಗಿವೆ. ರೈತರ ಬೆಳೆಗಳು ನೆಲಕಚ್ಚಿವೆ. ಆಳಂದ ತಾಲೂಕಿನ ಖಜೂರಿ ಬಳಿ ಬಿರುಗಾಳಿ ಅರ್ಭಟಕ್ಕೆ ಲಾರಿಯೇ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವೇ ಗಂಟೆ ಸುರಿದ ಭಾರೀ ಮಳೆಗೆ ಹಲವು ಬೈಕ್‌ಗಳು ಕೊಚ್ಚಿಹೋಗಿವೆ. ಇಷ್ಟು ದಿನಗಳ ಕಾಲ ಬೆಂಕಿ ಬಿಸಲಿಗೆ ಬೆಂದುಹೋಗಿದ್ದ ಜನರು ಇದೀಗ ಅಕಾಲಿಕ ಮಳೆಗೆ ಕಂಗಲಾಗಿದ್ದಾರೆ.

ಕರ್ನಾಟಕದ 15 ಜಿಲ್ಲೆಯಲ್ಲಿ ಬೇಸಿಗೆ ಮಳೆ: ಐವರು ಬಲಿ

Latest Videos
Follow Us:
Download App:
  • android
  • ios