ರಾಜ್ಯ ಸರ್ಕಾರದಿಂದ 2ನೇ ಮತ್ತು 4ನೇ ಶನಿವಾರಗಳು, ಭಾನುವಾರಗಳನ್ನು ಹೊರತುಪಡಿಸಿ 2024ನೇ ಸಾಲಿನಲ್ಲಿ ಒಟ್ಟು 21  ಸಾರ್ವಜನಿಕರ ರಜಾ ದಿನಗಳ ಸಾರ್ವತ್ರಿಕ ರಜಾ ದಿನಗಳೆಂದು  ಘೋಷಿಸಲಾಗಿದೆ. 

ಬೆಂಗಳೂರು (ನ.25): ರಾಜ್ಯ ಸರ್ಕಾರದಿಂದ 2024ರ ಸಾರ್ವಜನಿಕ ರಜಾದಿನಗಳನ್ನು ಘೋಷಣೆ ಮಾಡಿದ್ದು, ಪಟ್ಟಿಯನ್ನು ಸಿದ್ಧಗೊಳಿಸಿದೆ. ಒಟ್ಟು 21 ರಜಾ ದಿನಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ 6 ಶುಕ್ರವಾರದ ದಿನಗಳು ರಜೆಯ ದಿನಗಳಾಗಿವೆ. ವರ್ಷದ ಆರಂಭದಲ್ಲಿಯೇ ವಾರಾಂತ್ಯದ ಮೂರು ದಿನಗಳ ರಜೆಗಳನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆ ರೂಪಿಸಬಹುದು.

ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ರಜಾ ದಿನಗಳಾಗಿವೆ. 

ದಿನಾಂಕ               ವಾರಗಳು           ಸಾರ್ವತ್ರಿಕ ರಜಾ ದಿನಗಳು

15.01.2024           ಸೋಮವಾರ        ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

26.01.2024            ಶುಕ್ರವಾರ             ಗಣರಾಜ್ಯೋತ್ಸವ

05.03.2024            ಶುಕ್ರವಾರ             ಮಹಾ ಶಿವರಾತ್ರಿ

29.03.2024           ಶುಕ್ರವಾರ              ಗುಡ್‌ ಫ್ರೈಡೇ 

09.04.2024           ಮಂಗಳವಾರ       ಯುಗಾದಿ ಹಬ್ಬ

11.04.2024          ಗುರುವಾರ              ಖುತುಬ್-ಎ-ರಂಜಾನ್

01.05.2024          ಬುಧವಾರ             ಕಾರ್ಮಿಕ ದಿನಾಚರಣೆ

10.05.2024           ಶುಕ್ರವಾರ             ಬಸವ ಜಯಂತಿ/ಅಕ್ಷಯ ತೃತೀಯ

17.06.2024          ಸೋಮವಾರ          ಬಕ್ರೀದ್

17.07.2024           ಬುಧವಾರ              ಮೊಹರಂ ಕಡೇ ದಿನ

15.08.2024           ಗುರುವಾರ              ಸ್ವಾತಂತ್ರ್ಯ ದಿನಾಚರಣೆ

07.09.2024           ಶನಿವಾರ                ವರಸಿದ್ಧಿ ವಿನಾಯಕ ವ್ರತ

16.09.2024           ಸೋಮವಾರ          ಈದ್‌ ಮಿಲಾದ್

02.10.2024           ಬುಧವಾರ              ಗಾಂಧಿ ಜಯಂತಿ/ ಮಹಾಲಯ ಅಮವಾಸ್ಯೆ

11.10.2024            ಶುಕ್ರವಾರ               ಮಹಾನವಮಿ/ ಆಯುಧ ಪೂಜೆ

17.10.2024             ಗುರುವಾರ              ಮಹರ್ಷಿ ವಾಲ್ಮೀಕಿ ಜಯಂತಿ

31.10.2024             ಗುರುವಾರ              ನರಕ ಚತುರ್ದಶಿ

01.11.2024             ಶುಕ್ರವಾರ               ಕನ್ನಡ ರಾಜ್ಯೋತ್ಸವ

02.11.2024             ಶನಿವಾರ                ಬಲಿಪಾಡ್ಯಮಿ, ದೀಪಾವಳಿ

18.11.2024            ಸೋಮವಾರ           ಕನಕದಾಸ ಜಯಂತಿ

25.12.2024             ಬುಧವಾರ               ಕ್ರಿಸ್‌ಮಸ್‌

ಸೂಚನೆ:

1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಸೋನಿಯಾ, ರಾಹುಲ್, ಸುರ್ಜೇವಾಲಾ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯನ ದಾರಿ ತಪ್ಪಿಸಿದ್ದಾರೆ!

2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.

3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.