Asianet Suvarna News Asianet Suvarna News

ಸೋನಿಯಾ, ರಾಹುಲ್, ಸುರ್ಜೇವಾಲಾ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯನ ದಾರಿ ತಪ್ಪಿಸಿದ್ದಾರೆ!

ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಸೋನಿಯಾ, ರಾಹುಲ್‌ಗಾಂಧಿ ಒತ್ತಡ ಹೇರಿ ಡಿ.ಕೆ. ಶಿವಕುಮಾರ್‌ ಮೇಲಿನ ಸಿಬಿಐ ಕೇಸ್‌ ವಾಪಸ್‌ ಪಡೆಯಲು ಸೂಚಿಸಿದ್ದಾರೆ. 

Sonia gandhi Rahul gandhi and Surjewala there all misled to lawyer CM Siddaramaiah sat
Author
First Published Nov 25, 2023, 5:35 PM IST

ಚಿತ್ರದುರ್ಗ  (ನ.25): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಕುರಿತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದ ಪ್ರಕರಣವನ್ನು ವಾಪಸ್‌ ಪಡೆಯಲು ರಾಜ್ಯ ಸರ್ಕಾರದ ಸಚಿವ ಸಂಪುಟ ತೀರ್ಮಾನ ಮಾಡಿದೆ. ಆದರೆ, ನ್ಯಾಯಕ್ಕಾಗಿ ವಕೀಲರಾಗಿ ಸೇವೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿರುವುದಿಲ್ಲ. ಆದರೆ, ಸೋನಿಯಾ, ರಾಹುಲ್‌ ಗಾಂಧಿ ಹಾಗೂ ಸುರ್ಜೆವಾಲಾ ಒತ್ತಡದಿಂದಾಗಿ ಡಿಕೆಶಿ ಮೇಲಿನ ಸಿಬಿಐ ಕೇಸ್‌ ವಾಪಸ್ ಪಡೆಯಲು ಒಪ್ಪಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಹೇಳಿದ್ದಾರೆ.

ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆಯಿಂದ ಡಿ.ಕೆ.ಶಿವಕುಮಾರ್ ಕೇಸ್ ವಾಪಸ್ ಗೆ ಸಂಪುಟ ತೀರ್ಮಾನ ಮಾಡಿದೆ. ರಾಜ್ಯ ಸಚಿವ ಸಂಪುಟದ ಈ ತೀರ್ಮಾನ ಅಕ್ರಮ ಹಾಗೂ ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಆದರೆ, ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ, ರಾಹುಲ್‌, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ. ಇದು ಸಿದ್ಧರಾಮಯ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದರು.

ಬೆಂಗಳೂರು ಕಂಬಳ ಆಯೋಜಕರಿಗೆ ಬಿಗ್ ಶಾಕ್‌ ಕೊಟ್ಟ ಬಿಬಿಎಂಪಿ

ರಾಜ್ಯ ಸಚಿವ ಸಂಪುಟದಲ್ಲಿ ಸಭೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಕ್ಷಣೆಗಾಗಿಯೇ ನಡೆಸಲಾಗಿದೆ. ಎಲ್ಲವನ್ನೂ ರಹಸ್ಯವಾಗಿ ಸಿದ್ಧಪಡಿಸಿಕೊಂಡು ಏಕಾಏಕಿ ಘೋಷಣೆ ಮಾಡಿದ್ದಾರೆ. ನ್ಯಾಯಾಂಗಕ್ಕೆ ಮಣ್ಣೆರಚುವ ಕೆಲಸ ಸಿದ್ಧರಾಮಯ್ಯ ಸರ್ಕಾರ ಮಾಡಿದೆ. ಸಿಬಿಐ ಶೇ.70ರಷ್ಟು ತನಿಖೆ‌ ಮುಗಿಸಿದ ವೇಳೆ ವಾಪಸ್ ಗೆ ನಿರ್ಧಾರ ಮಾಡಲಾಗಿದ್ದು, ಡಿಕೆಶಿ ಸದಸ್ಯರಾಗಿರುವ ಸಂಪುಟದಲ್ಲಿ ಅವರ ಪರ ತೀರ್ಮಾನ ಮಾಡಲಾಗಿದೆ. ಜೊತೆಗೆ, ಡಿಕೆಶಿ ಸಂಪುಟ ಸಭೆಯಲ್ಲಿ ಇರಲಿಲ್ಲ ಎಂಬುದು ಲೆಕ್ಕ ಅಲ್ಲ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಕೋರ್ಟ್ ಛೀಮಾರಿ ಹಾಕಿದ್ದಿದೆ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ  ಡಿ.ಕೆ.ಶಿವಕುಮಾರ್ ವಿರುದ್ಧ  ಅಕ್ರಮವಾಗಿ ಸಿಬಿಐಗೆ ಕೇಸ್ ನೀಡಲಾಗಿದೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಇಷ್ಟು ವರ್ಷದ ಬಳಿಕ ಸ್ಪೀಕರ್ ಒಪ್ಪಿಗೆ ಪಡೆದಿಲ್ಲ ಎಂಬುದು? ಕಾಂಗ್ರೆಸ್ ಅವರಿಗೆ ಸಾಮಾನ್ಯ ಜ್ಞಾನ ಇರಲಿಲ್ಲವೇ? ಸಿಎಂ ಮೌಖಿಕ ಆದೇಶವಿದ್ದರೂ ಸಹ ಊರ್ಜಿತ ಆಗುತ್ತದೆ. ಸರ್ಕಾರ, ಸಚಿವ ಸಂಪುಟ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಅವರ ಸ್ಥಿತಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೂ ಬರಲಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಆದರೆ, ತಿಮ್ಮಾಪುರ ಮೊದಲು ಬೆಳಗಾವಿ ಕಡೆ ನೋಡಲಿ. ದುಬೈಗೆ ಹೋಗಿ ಅವರನ್ನು ಕರೆದುಕೊಂಡು ಬರಲಿ. ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತಾಡಲಿ. ಮಂಡ್ಯ, ದಾವಣಗೆರೆಯಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ದಾರೆ. ಅವರ ಕಾಂಗ್ರೆಸ್ ಪಕ್ಷದಲ್ಲೇ ನೂರು ತೂತುಗಳಿವೆ. ಅಳೆದು ತೂಗಿ ನಮ್ಮ ಹೈಕಮಾಂಡ್ ವಿಜಯೇಂದ್ರ ಆಯ್ಕೆ ಮಾಡಿದೆ. ನಾವು ಒಟ್ಟಾಗಿ ಹೋಗುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ನೀಡಿ ಪಾಪರ್ ಆಗಿದೆ. ಪಾಪರ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್‌ ತಿಳಿಸಿದರು. 

ದಾಂಪತ್ಯ ಸರಿ ಹೋಗ್ತಿಲ್ಲಾಂತ ಎರಡನೇ ಹೆಂಡ್ತಿಯನ್ನು ಕೊಲೆಗೈದ ಮೂರನೇ ಗಂಡ

ಸಿದ್ಧಗಂಗಾ ಶ್ರೀಗಳ ಬಳಿ ಮಾಜಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆಂದು ಕೇಳಿಬಂದಿದೆ. ನಾನು ಸಹ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ದಿಸಿದ್ದೆನು. ವಿ‌.ಸೋಮಣ್ಣ ಜತೆಗೆ ನಮ್ಮ ಮುಖಂಡರು ಮಾತಾಡುತ್ತಿದ್ದಾರೆ. ನಾವು ಮಾತಾಡಿ ಎಲ್ಲವನ್ನೂ ಸರಿ ಮಾಡುತ್ತೇವೆ. ಈಗ ಸಿ.ಟಿ.ರವಿ, ರಮೇಶ ಜಾರಕಿಹೊಳಿ ಅಸಮಾಧಾನ ಸರಿಪಡಿಸಲಾಗಿದೆ. ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ. ವಿ.ಸೋಮಣ್ಣ, ಯತ್ನಾಳ್ ಕುರಿತುಬಾಕಿ ಶೇ 2ರಷ್ಟು ಅಸಮಾಧಾನವಿದ್ದು, ಅದನ್ನು ಸರಿಪಡಿಸಲಾಗುತ್ತದೆ. ಇನ್ನು ರಾಜ್ಯದಲ್ಲಿ 135 ಸ್ಥಾನ ಗೆದ್ದರೂ ಸಿದ್ಧರಾಮಯ್ಯ  4 ದಿನ ದೆಹಲಿಯಲ್ಲಿದ್ದರು. ಸಿಎಂ ಮಾಡದಿದ್ದರೆ ಹೊರ ಹೋಗುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಶ್ನೆಗಳು ಸಹಜ ಎಂದರು.

Follow Us:
Download App:
  • android
  • ios