- ಬ್ಲೂಟೂತ್‌ ಮೂಲಕ ಪರೀಕ್ಷಾರ್ಥಿಗಳಿಗೆ ನೆರವು- ಅಕ್ರಮ ಪರೀಕ್ಷಾ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಸೆರೆ- ಮೊಬೈಲ್‌ ಲೊಕೇಶನ್‌ ಪತ್ತೆ ಹಚ್ಚಿ ಸಿಐಡಿ ಪೊಲೀಸರ ಬೇಟೆ 

ಕಲಬುರಗಿ(ಏ.24): ಪಿಎಸ್‌ಐ ನೇಮ​ಕಾತಿ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಶನಿವಾರ ಸಿಐಡಿ ಪೊಲೀ​ಸರು ಮಹ​ತ್ವದ ಪ್ರಗ​ತಿ ಸಾಧಿ​ಸಿ​ದ್ದಾ​ರೆ. ಬ್ಲೂಟೂತ್‌ ಮೂಲಕ ಪರೀಕ್ಷಾರ್ಥಿಗಳಿಗೆ ನೆರವಾದ ಹಗರಣದ ‘ಕಿಂಗ್‌ಪಿನ್‌’ ಎಂದೇ ಹೇಳಲಾಗಿರುವ ಅಫಜಲ್ಪುರದ ರುದ್ರಗೌಡ ಪಾಟೀಲ್‌(ಆ​ರ್‌.​ಡಿ.​ಪಾ​ಟೀ​ಲ​)ನನ್ನು ಬಂಧಿ​ಸುವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

ಈಗಾಗಲೇ ಬಂಧನಕ್ಕೊಳಗಾಗಿ ಸಿಐಡಿ ವಶದಲ್ಲಿರುವ ಅಫಜಲ್ಪುರ ಕಾಂಗ್ರೆಸ್‌ ಮುಖಂಡ ಮಹಾಂತೇಶ್‌ ಪಾಟೀಲ್‌ನ ಕಿರಿಯ ಸಹೋದರ ಈ ರುದ್ರಗೌಡ ಪಾಟೀಲ್‌. ಈತನನ್ನು ಹುಡುಕಿಕೊಂಡು ಸಿಐಡಿ ಶುಕ್ರವಾರ ಅಫಜಲ್ಪುರಕ್ಕೆ ಹೋಗಿದ್ದಾಗ ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದ. ಮಹಾಂತೇಶ್‌ನÜನ್ನು ವಶಕ್ಕೆ ಪಡೆದ ವಿಷಯ ಅರಿತು ವ್ಯಗ್ರಗೊಂಡಿದ್ದ ರುದ್ರಗೌಡ, ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಸೇರಿ ತಂಡದಲ್ಲಿದ್ದ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಆವಾಜ್‌ ಕೂಡ ಹಾಕಿದ್ದ.

ಪಿಎಸ್‌ಐ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಮೊಬೈಲ್‌ ಲೊಕೇ​ಷನ್‌ ಪತ್ತೆ ಹಚ್ಚಿ ಸೆರೆ: ರುದ್ರ​ಗೌ​ಡನ ಆವಾ​ಜ್‌​ನಿಂದ ಸಿಟ್ಟಿ​ಗೆ​ದ್ದಿದ್ದ ಸಿಐಡಿ ತಂಡ ಮೊಬೈಲ್‌ ಲೊಕೇ​ಷನ್‌ ಪತ್ತೆ ಹಚ್ಚಿ ಬಂಧ​ನಕ್ಕೆ ಬಲೆ ಬೀಸಿತ್ತು. ಶನಿ​ವಾರ ಮಹಾಂಂತೇಶ್‌ ಹಾಗೂ ರುದ್ರಗೌಡ ಸಹೋದರರ ನೇತೃತ್ವದಲ್ಲಿ ಅಫಜಲ್ಪುರ ಪಟ್ಟಣದಲ್ಲಿ 101 ಜೋಡಿ ಸಾಮೂಹಿಕ ವಿವಾಹ ಸಮಾ​ರಂಭ ಆಯೋ​ಜಿ​ಸ​ಲಾ​ಗಿತ್ತು. ಈ ಸಮಾರಂಭದಲ್ಲಿ ರುದ್ರಗೌಡ ಪಾಲ್ಗೊಳ್ಳಲು ಪಾಲ್ಗೊ​ಳ್ಳ​ಬ​ಹು​ದೆಂದು ಸಿಐಡಿ ಇಲ್ಲೂ ನಿಗಾ ಇಟ್ಟಿತ್ತು. ಅಫಜಲ್ಪುರ ಪೊಲೀಸರೂ ಸಮಾರಂಭದಲ್ಲಿ ಗಸ್ತಿ​ನಲ್ಲಿ ಭಾಗಿ​ಯಾ​ಗಿ​ದ್ದರು. ಈ ಮಧ್ಯೆ, ಮೊಬೈಲ್‌ ಲೊಕೇ​ಶನ್‌ ಆಧಾ​ರದ ಮೇರೆಗೆ ರುದ್ರ​ಗೌಡ ಮಹಾರಾಷ್ಟ್ರದ ಸೊಲ್ಲಾಪುರ ಆಸುಪಾಸಲ್ಲಿ​ರುವುದನ್ನು ಖಚಿತಪಡಿಸಿಕೊಂಡು ಶನಿವಾರ ಖೆಡ್ಡಾಗೆ ಬೀಳಿ​ಸು​ವಲ್ಲಿ ಯಶಸ್ವಿಯಾಯಿತು.

ಅಫಜಲ್ಪುರ ತಾಲೂಕಿನ ಸೊನ್ನ ಮೂಲದ, ಗೌರ ಬಿ. ಗ್ರಾಪಂ ಮಾಜಿ ಅಧ್ಯ​ಕ್ಷನೂ ಆದ ರುದ್ರಗೌಡ ಪಾಟೀಲ್‌ (ಗೌರ ಬಿ ಗ್ರಾಪಂ ಮಾಜಿ ಅಧ್ಯಕ್ಷ) ಬಂಧನದೊಂದಿಗೆ ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿ​ದೆ.

ಬ್ಲೂಟೂತ್‌ ಅಕ್ರ​ಮದ ರೂವಾ​ರಿ: ಪಿಎ​ಸ್‌ಐ ನೇಮ​ಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಮೂಲಕ ನಡೆದ ಅಕ್ರ​ಮದ ಪ್ರಮುಖ ರೂವಾ​ರಿಯೇ ಈ ರುದ್ರ​ಗೌಡ ಪಾಟೀಲ್‌ ಎನ್ನ​ಲಾ​ಗಿದೆ. ಒಟ್ಟಾರೆ ಇಡೀ ಅಕ್ರ​ಮ​ದಲ್ಲಿ ರುದ್ರ​ಗೌ​ಡ​ನದ್ದೇ ಪ್ರಮುಖ ಪಾತ್ರ. ಈತನ ಸೋದರ ಮಹಾಂತೇಶ್‌ ಪಾಟೀಲ್‌ ಇದಕ್ಕೆ ಸಹ​ಕಾರ ನೀಡು​ತ್ತಿದ್ದ. ಹಣ ಕೊಟ್ಟು ಸುಲ​ಭ​ವಾಗಿ ಪಾಸ್‌ ಆಗಲು ಬಯ​ಸುವ ಅಭ್ಯ​ರ್ಥಿ​ಗ​ಳನ್ನು ಹುಡು​ಕಿ​ಕೊಂಡು ಬಂದು ಸೋದ​ರ​ನಿಗೆ ಪರಿ​ಚ​ಯಿ​ಸು​ವ ಕೆಲಸ ಮಾಡು​ತ್ತಿ​ದ್ದ. ಆ ಬಳಿಕ ರುದ್ರ​ಗೌಡ ನೇತೃ​ತ್ವ​ದಲ್ಲಿ ಪರೀಕ್ಷಾ ಅಕ್ರ​ಮಕ್ಕೆ ತಾಂತ್ರಿಕ ನೆರವು ನೀಡ​ಲಾ​ಗು​ತ್ತಿತ್ತು ಎಂದು ಹೇಳ​ಲಾ​ಗು​ತ್ತಿ​ದೆ.

ಅಫಜಲ್ಪುರ ಕಾಂಗ್ರೆಸ್ ಶಾಸಕರ ಗನ್ ಮ್ಯಾನ್ ಅರೆಸ್ಟ್!

ಮಹಾಂತೇಶ್‌ 1 ವಾರ ಸಿಐಡಿ ಕಸ್ಟಡಿಗೆ
ಪಿಎಸ್‌ಐ ನೇಮ​ಕಾತಿ ಪರೀಕ್ಷಾ ಅಕ್ರಮದ ಆರೋಪದಡಿ ಬಂಧಿತ ಅಫಜಲ್ಪುರ ಕಾಂಗ್ರೆಸ್‌ ಮುಖಂಡ ಮಹಾಂತೇಶ್‌ ಪಾಟೀಲ್‌ನನ್ನು ನ್ಯಾಯಾಲಯ ಶನಿ​ವಾ​ರ 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿ​ಸಿ​ದೆ. ಇಲ್ಲಿನ 5ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ತಮಗೆ ಎದೆನೋವೆಂದು ಮಹಾಂತೇಶ್‌ ನ್ಯಾಯಾಲಯದ ಗಮನಕ್ಕೆ ತಂದಿದ್ದಾ​ನೆ. ನ್ಯಾಯಾಲಯದ ಸೂಚನೆಯಂತೆ ತಕ್ಷಣ ಮಹಾಂತೇ​ಶ್‌ನನ್ನು ವೈದ್ಯರ ಬಳಿಗೆ ಕರೆದೊಯ್ದು ಸಂಪೂರ್ಣ ತಪಾಸಣೆಗೊಳಪಡಿಸಲಾಯ್ತು. ವೈದ್ಯರು ತೀವ್ರ ಎದೆನೋವು ಇಲ್ಲ ಎಂದು ವರದಿ ನೀಡಿದ ಹಿನ್ನೆ​ಲೆ​ಯಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಮಹಾಂತೇ​ಶ್‌​ನನ್ನು ಹಾಜರು ಪಡಿಸಲಾ​ಯಿ​ತು. ನ್ಯಾಯಾ​ಲ​ಯದ ಆದೇ​ಶ​ದಂತೆ ಏ.29ರ ವರೆಗೂ ಮಹಾಂತೇಶ್‌ನ್ನನು ಸಿಐಡಿ ವಶಕ್ಕೆ ಒಪ್ಪಿಸಿದಂತಾಗಿದೆ.

ಪಾಟೀಲ್‌ ಸೋದರರ ಮನೆಯಿಂದ ಪ್ರಮುಖ ದಾಖಲೆಗಳು ವಶಕ್ಕೆ
ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಮೂಲಕ ಅಕ್ರಮ ನಡೆಸಿದ ಆರೋಪಿಗಳಾದ ಮಹಾಂತೇಶ್‌ ಹಾಗೂ ರುದ್ರಗೌಡ ಸೋದರರ ನಿವಾಸಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಸಿಐಡಿ ಪೊಲೀಸರು, ಅಕ್ರಮಕ್ಕೆ ಸಂಬಂಧಿಸಿ ಮಹತ್ವದ ದಾಖಲೆಗಳು, ಹಾಲ್‌ಟಿಕೆಟ್‌ ಇತರೆ ಕಾಗದಪತ್ರಗಳನ್ನು ಜಪ್ತಿ ಮಾಡಿದ್ದಾರೆಂದು ತಿಳಿ​ದು​ಬಂದಿ​ದೆ.

ಒಂದೇ ತಾಲೂಕಿನ 202 ಮಂದಿ ಪಾಸ್‌: ಎಫ್‌ಡಿಎ ಪರೀಕ್ಷೆಯಲ್ಲೂ ಅಕ್ರಮ?
ಪಿಎಸ್‌ಐ ಬಳಿಕ ಎಫ್‌ಡಿಎ ಪರೀಕ್ಷೆಯಲ್ಲೂ ಅಕ್ರಮವಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ 2021ರಲ್ಲಿ ನಡೆದ ಪರೀಕ್ಷೆಯಲ್ಲಿ 1010 ಜನರ ಹೆಸರಿರುವ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಲಾಗಿದೆ. ಈ ಪೈಕಿ ಆಯ್ಕೆಯಾದ 202 ಮಂದಿ ಅಫಜಲ್ಪುರ ತಾಲೂಕಿಗೆ ಸೇರಿದವರು ಎನ್ನಲಾಗಿದ್ದು, ಅಕ್ರಮದ ಶಂಕೆಗೆ ಕಾರಣವಾಗಿದೆ.