ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಮುನಿರತ್ನ, ಕನ್ನಡ ಚಿತ್ರರಂಗ ಯಾರಿಗೂ ಸ್ವತ್ತಲ್ಲ ಎಂದಿದ್ದಾರೆ. ಮೇಕೆದಾಟು ಹೋರಾಟದಲ್ಲಿ ಕಾಂಗ್ರೆಸ್ ಬಾವುಟ ಬಳಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ ಎಂದು ಡಿಕೆಶಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು (ಮಾ.2): ನಿನ್ನೆ ಡಿಸಿಎಂ ಡಿಕೆ ಶಿವಕುಮಾರ ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಎಲ್ಲ ಗಮನಿಸ್ತಿದ್ದೀವಿ, ನೆಟ್ಟು ಬೋಲ್ಟ್ ಸರಿ ಮಾಡ್ತೀವಿ ಅಂತಾ ಹೇಳಿದ್ದಾರೆ. ನಿಮ್ಮ ಹತ್ರ ಕೆಲಸ ಮಾಡೋರಿಗೆ ಸರಿ ಮಾಡಿ, ನಿಮ್ಮ ತೋಟದಲ್ಲಿ ಕೆಲಸ ಮಾಡೋರಿಗೆ ಸರಿ ಮಾಡಿ ಕನ್ನಡ ಚಿತ್ರರಂಗವೇನು ನಿಮ್ಮ ಮನೆ ಆಸ್ತಿಯೇನು? ಎಂದು ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು.
ಕನ್ನಡ ಚಿತ್ರರಂಗದ ಕಲಾವಿದರ ವಿರುದ್ಧ ಡಿಕೆ ಶಿವಕುಮಾರ ಹೇಳಿಕೆ ವಿಚಾರ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ ಅವರು, ಕನ್ನಡ ಚಿತ್ರರಂಗವೇನು ಡಿಕೆ ಶಿವಕುಮಾರದ್ದೇ? ಅದಕ್ಕೊಂದು ಇತಿಹಾಸವಿದೆ. ಅದು ಯಾರ ಸ್ವತ್ತಲ್ಲ, ಯಾರ ಮುಲಾಜಿನಲ್ಲಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: BIFFES: ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ,ಸಂಸ್ಕೃತಿಯೇ ನಮ್ಮ ಆಸ್ತಿ: ಡಿಕೆ ಶಿವಕುಮಾರ ಮಾತು
ಪಕ್ಷದ ಬಾವು ಇಟ್ಕೊಂಡು ಯಾಕೆ ಹೋರಾಟ ಮಾಡಿದ್ರಿ? ಕನ್ನಡ ಬಾವು ಇರಲಿಲ್ಲವೇ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪೋಟೋ ಇಟ್ಕೊಂಡು ಯಾಕೆ ನೀರಿಗಾಗಿ ಹೋರಾಟ ಮಾಡಿದ್ರಿ? ಈಗ ಕನ್ನಡ ಅನ್ನೋ ಡಿಕೆ ಶಿವಕುಮಾರ ಕಾಂಗ್ರೆಸ್ ಪಕ್ಷದ ಚಿಹ್ನೆ ಇಟ್ಟುಕೊಂಡು ಯಾಕೆ ಮೇಕೆದಾಟು ಹೋರಾಟ ಮಾಡಿದ್ರಿ? ಆಗ ಕನ್ನಡಿಗರಲ್ಲಿ ಯಾರೂ ಸಿಗಲಿಲ್ಲವೇ? ಕನ್ನಡ ಬಾವುಟ ಇಟ್ಕೊಂಡು ಹೋರಾಟ ಮಾಡಬೇಕಿತ್ತು. ಕಾಂಗ್ರೆಸ್ ಬಾವುಟ ಇಟ್ಕೊಂಡು ಪಕ್ಷದ ನಾಯಕರ ಬಾವುಟ ಇಟ್ಕೊಂಡು ಹೋರಾಟ ಮಾಡಿದ್ರೆ ಅಂಥ ರಾಜಕೀಯ ಹೋರಾಟದಲ್ಲಿ ಕನ್ನಡ ಚಿತ್ರರಂಗದ ನಟರು ಯಾಕೆ ಭಾಗಿಯಾಗಬೇಕಿತ್ತು? ನೀವು ಹೊಂದಾಣಿಕೆ ಮಾಡಿಕೊಂಡು ತಮಿಳುನಾಡಿನ ಸರ್ಕಾರದ ಜೊತೆಗೆ ಮಾತಾಡಿ ರಾತ್ರೋರಾತ್ರಿ ಕಾವೇರಿ ನೀರು ಬಿಟ್ಟಿದ್ದು ಕನ್ನಡಿಗರು ಮರೆತಿಲ್ಲ. ಮೇಕೆದಾಟು ನೀರಿನ ವಿಚಾರವಾಗಿ ನೀವು ಮೋದಿಯವರಿಗೆ ಪತ್ರ ಬರೆಯಬಹುದಿತ್ತಲ್ಲ? ಮೋದಿಯವರು ನೀರು ಕೊಡೋದಿಲ್ಲ ಅಂದ್ರಾ?
ಇದನ್ನೂ ಓದಿ: ಕೊನೆಗೂ ಡಿಕೆಶಿಗೆ ಬುದ್ಧಿ ಬಂದಿದೆ, ಸಿದ್ದರಾಮಯ್ಯಗೂ ಬರಲಿ: ಹಿಂದೂತ್ವದ ಬಗ್ಗೆ ಕೆಎಸ್ ಈಶ್ವರಪ್ಪ ಹೇಳಿದ್ದೇನು?
ಮೊದಲ ನೀವು ತಿದ್ಕೊಳ್ಳಿ: ಆಮೇಲೆ ಬೇರೆಯವರ ನಟ್ಟು ಬೋಲ್ಟ್ ಸರಿಮಾಡಿ:
ನಾನು ನೀವು ಹೊಸಬರಲ್ಲ 20 ವರ್ಷಗಳ ಸ್ನೇಹಿತರು. ಡಿಕೆ ಶಿವಕುಮಾರ ಮೊದಲು ನೀವು ತಿದ್ದಿಕೊಳ್ಳಿ. ಆಮೇಲೆ ಬೇರೆಯವರಿಗೆ ನಟ್ಟು ಬೋಲ್ಟ್ ಸರಿಮಾಡಿ. ಆವತ್ತು ದೇವೇಗೌಡರು ನಮ್ಮ ಸಮಾಜದ ಯುವಕ ಬೆಳೆಯಲಿ ಅಂತ ಡಿ.ಕೆ ಶಿವಕುಮಾರನ್ನ ಮುಂದೆ ಬಿಟ್ರು. ದೇವೇಗೌಡರು ಅವತ್ತೇ ಡಿ.ಕೆ ಶಿವಕುಮಾರ್ ಅವರ ನಟ್ಟು ಬೋಲ್ಟು ಟೈಟ್ ಮಾಡಿದ್ರೆ ಇಂದು ಈ ಮಾತು ಹೇಳ್ತಿರಲಿಲ್ಲ. ನೀವು ಇಲ್ಲಿಯವರೆಗೆ ಬೆಳೆಯೊಕೆ ಸಾಧ್ಯ ಇರ್ಲಿಲ್ಲ. ರೀ ಡಿಕೆಶಿಯವರೇ, ನಿಮ್ಮ ತಮ್ಮ ಸುರೇಶ್ ನನ್ನ ರೇಪಿಸ್ಟ್ ಅಂದಿದ್ದಾನೆ. ಮುನಿರತ್ನಗೆ ರೇಪಿಸ್ಟ್ ಪಟ್ಟ ಕಟ್ಟಿದವರು ಯಾರು? ನಿಮ್ಮ ದ್ವೇಷಕ್ಕೆ ನನ್ನ ಬಲಿ ತೆಗೆದುಕೊಂಡ್ರಿ. ನಾನು ಮದುವೆಯಾಗಿ 39 ವರ್ಷ ಆಗಿದೆ. ನನ್ನ ಹೆಂಡತಿ ಹತ್ರ ನಾನು ಒಂದು ಮಾತು ಹೇಳ್ದೆ. ಇಷ್ಟೊಂದು ರೇಪ್ ಕೇಸ್ ಹಾಕಿದ್ದಾರೆ ನನ್ನ ಬಿಟ್ಟು ಹೋಗ್ತಿಯಾ? ಅಂತಾ. ನಾನು ಬಿಟ್ಟು ಹೋಗಲ್ಲ ಅಂತಾ ನನ್ನ ಹೆಂಡ್ತಿ ಹೇಳಿದ್ರು. ನಾನು ಏನು ಅನ್ನೋದು ನನ್ನ ಕುಟುಂಬಕ್ಕೆ ಗೊತ್ತಿದೆ. ನಿನ್ನ ತಮ್ಮ ನನಗೆ ರೇಪಿಸ್ಟ್ ಅಂದಮಾತ್ರಕ್ಕೆ ನಾನು ಹಾಗೆ ಆಗಲಾರೆ ಎಂದು ತಿರುಗೇಟು ನೀಡಿದರು.
