10:30 PM (IST) May 28

Karnataka Politics Live CM Siddaramaiah Resignation Updates ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ - ಮಾಜಿ ಸಚಿವ ಕುಮಾರ್ ಬಂಗಾರಪ್ಪ

ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಯಾರೇ ಆಗಲಿ ಆಡಳಿತದಲ್ಲಿ ಅಸಮತೋಲನವಾಗದಂತೆ, ಆರ್ಥಿಕ ಕುಸಿತ ಕಾಣದ ರೀತಿಯಲ್ಲಿ ಆಡಳಿತ ನಡೆಯಬೇಕಷ್ಟೇ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

Read Full Story
09:07 PM (IST) May 28

Karnataka Politics Live CM Siddaramaiah Resignation Updates 'ಹೆಜ್ಜೆ ಹೆಜ್ಜೆಗೂ ನಾನು...' ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಬೆನ್ನಲ್ಲೇ ಭಾವುಕ ಫೋಸ್ಟ್‌ ಹಂಚಿಕೊಂಡ ಸಿದ್ದರಾಮಯ್ಯ..!

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ, ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ಭಾವನಾತ್ಮಕ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಏಳಿಗೆಗೆ ಕಾರಣರಾದ ಜನತೆ, ಪಕ್ಷ ಹಾಗೂ ಗುರುಗಳನ್ನು ಸ್ಮರಿಸಿರುವ ಅವರು, ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story
08:43 PM (IST) May 28

Karnataka Politics Live CM Siddaramaiah Resignation Updates ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್ ಪತನ - ಲಖನ್ ಜಾರಕಿಹೊಳಿ ಭವಿಷ್ಯ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾಗಲಿದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದರು.

Read Full Story
08:24 PM (IST) May 28

Karnataka Politics Live CM Siddaramaiah Resignation Updates Breaking - ಹವಾಮಾನ ವೈಪರೀತ್ಯ - ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್

ದೆಹಲಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವನ್ನು ಜೈಪುರದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಎಟಿಸಿ ಸೂಚನೆ ಮೇರೆಗೆ ಈ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹವಾಮಾನ ತಿಳಿಯಾದ ನಂತರ ವಿಮಾನ ದೆಹಲಿಗೆ ಪ್ರಯಾಣಿಸಲಿದೆ.
Read Full Story
07:09 PM (IST) May 28

Karnataka Politics Live CM Siddaramaiah Resignation Updates ರಾಮನಗರ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಲಿರುವ ಐದನೇ ವ್ಯಕ್ತಿ ಡಿಕೆ ಶಿವಕುಮಾರ್‌!

ಡಿ.ಕೆ. ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಲಿರುವ 5ನೇ ನಾಯಕರಾಗಲಿದ್ದಾರೆ. ಈ ಹಿಂದೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಈ ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಇತಿಹಾಸವಿದೆ.
Read Full Story
06:19 PM (IST) May 28

Karnataka Politics Live CM Siddaramaiah Resignation Updates ಸಿಎಂ ಖುರ್ಚಿ ಗುದ್ದಾಟದಲ್ಲಿ 5 ಲಕ್ಷ ಮಕ್ಕಳು ಅತಂತ್ರ - ಪಾಲಿಸದ ಹೈಕೋರ್ಟ್​ ಆದೇಶ- ಪಾಲಕರ ಕಣ್ಣೀರು

1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಹೈಕೋರ್ಟ್​ ನಿರ್ದೇಶನ ನೀಡಿ ವಾರ ಕಳೆದರೂ ಸರ್ಕಾರ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರುವ 5 ಲಕ್ಷಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಈ ಆದೇಶದಿಂದ ಮಕ್ಕಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುವ ಭೀತಿ ಎದುರಾಗಿದೆ.

Read Full Story
05:53 PM (IST) May 28

Karnataka Politics Live CM Siddaramaiah Resignation Updates ಕೃಷಿಕನಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಟೆಕ್ಕಿಯ ಜೀವ ಕಸಿದ ಸಿಡಿಲು - ಕೊಡಗಿನ ಯುವಕ ಬಲಿ

ಸಾಫ್ಟ್​ವೇರ್​ ಉದ್ಯೋಗ ತೊರೆದು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಲು ಬಂದಿದ್ದ ಟೆಕ್ಕಿಯೊಬ್ಬರು ಕೊಡಗಿನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ತಮ್ಮ ಹೊಲದಲ್ಲಿ ಮಾವು ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಜೊತೆಗಿದ್ದ ಪತ್ನಿ ಮತ್ತು ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story
05:23 PM (IST) May 28

Karnataka Politics Live CM Siddaramaiah Resignation Updates ರಾಜ್ಯದಲ್ಲಿ ಹೊಸ ಸಿಎಂ ಬಂದರೂ ಸರ್ಕಾರ ಉಳಿಯಲ್ಲ - ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

Read Full Story
05:09 PM (IST) May 28

Karnataka Politics Live CM Siddaramaiah Resignation Updates ಇದ್ದರೆಷ್ಟು, ಹೋದರೆಷ್ಟು? ಹಲ್​ಚಲ್ ಸೃಷ್ಟಿಸಿದ ಎಂ.ಬಿ.ಪಾಟೀಲ್ ​ ಟ್ವೀಟ್, ಯಾರಿಗೆ ಟಾಂಟ್​ ಕೊಟ್ರು ಸಚಿವರು?

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ, ಸಚಿವ ಎಂ.ಬಿ. ಪಾಟೀಲ್ ಅವರು ಬಸವಣ್ಣನ ವಚನವನ್ನು ಟ್ವೀಟ್ ಮಾಡಿ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
Read Full Story
04:45 PM (IST) May 28

Karnataka Politics Live CM Siddaramaiah Resignation Updates ರಾಜಕೀಯದ ಪುಣ್ಯಕೋಟಿ ಸಿದ್ದರಾಮಯ್ಯ - ಹೈಕಮಾಂಡ್‌ಗೆ ಕೊಟ್ಟ ಮಾತು ಉಳಿಸಿಕೊಂಡು ಸಿಎಂ ಗದ್ದುಗೆ ತ್ಯಜಿಸಿದ ಸಿದ್ದು

ಹೈಕಮಾಂಡ್‌ಗೆ ನೀಡಿದ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಒಪ್ಪಿ ರಾಜೀನಾಮೆ ನೀಡಿದ್ದಾರೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಅಧಿಕಾರ ಜಗಳದ ನಡುವೆ, ಸಿದ್ದರಾಮಯ್ಯರ ಈ ನಡೆ ಕಾಂಗ್ರೆಸ್‌ಗೆ ಹೊಸ ಮಾದರಿಯಾಗಿದ್ದು, ಅವರು 'ವಚನ ಪಾಲಕ'ನಾಗಿ ಹೊರಹೊಮ್ಮಿದ್ದಾರೆ.
Read Full Story
04:29 PM (IST) May 28

Karnataka Politics Live CM Siddaramaiah Resignation Updates ರಾಜ್ಯಸಭೆಗೆ ಹೋಗೋದಿಲ್ಲ, ಜನ 5 ವರ್ಷಕ್ಕೆ ಆಯ್ಕೆ ಮಾಡಿರೋದ್ರಿಂದ ರಾಜ್ಯ ರಾಜಕಾರಣದಲ್ಲೇ ಇರ್ತೇನೆ ಎಂದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ನೀಡಿದ್ದ ರಾಜ್ಯಸಭೆ ಆಫರ್ ಅನ್ನು ತಿರಸ್ಕರಿಸಿ, ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 

Read Full Story
03:58 PM (IST) May 28

Karnataka Politics Live CM Siddaramaiah Resignation Updates 'ಮುಂದಿನ 8 ವರ್ಷ ಡಿಕೆಶಿಯನ್ನ ಅಲ್ಲಾಡಿಸಲು ಆಗಲ್ಲ.' ಸಿದ್ದು ರಾಜಯೋಗ ಮುಗಿದಿದೆ - ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ

ಡಿಕೆ ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ, ಡಿಕೆಶಿ ಸೋಮವಾರದೊಳಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, 8 ವರ್ಷಗಳ ಕಾಲ ಅವರ ಅಧಿಕಾರ ಅಬಾಧಿತವಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Read Full Story
03:24 PM (IST) May 28

Karnataka Politics Live CM Siddaramaiah Resignation Updates Breaking - ಹೈಕಮಾಂಡ್‌ ಹೇಳಿದ್ರೆ ಕೊಡ್ತೀನಿ ಅಂದಿದ್ದೆ, ಮೊನ್ನೆ ಹೇಳಿದ್ರು ಕೊಟ್ಟೆ - ರಾಜೀನಾಮೆ ಬಳಿಕ ಸಿದ್ದು ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಯಂತೆ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಭವನದಲ್ಲಿ ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಹೈಕಮಾಂಡ್ ಆದೇಶಕ್ಕೆ ಬದ್ಧನಾಗಿರುವುದಾಗಿ ಸ್ಪಷ್ಟಪಡಿಸಿದರು.
Read Full Story
03:15 PM (IST) May 28

Karnataka Politics Live CM Siddaramaiah Resignation Updates ಖಾಸಗಿ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಅಧಿಕೃತ ರಾಜೀನಾಮೆ ನೀಡಿದ ಸಿದ್ದರಾಮಯ್ಯ, ಜೊತೆಯಾದ ಡಿಕೆ ಶಿವಕುಮಾರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ಅವರು, ರಾಜಭವನದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರ ತೀವ್ರ ಆಕ್ರೋಶ ಹಾಗೂ ಭಾವನಾತ್ಮಕ ಪ್ರತಿಭಟನೆಯನ್ನು ಎದುರಿಸಿದರು.
Read Full Story
03:05 PM (IST) May 28

Karnataka Politics Live CM Siddaramaiah Resignation Updates ಬೆಂಗಳೂರು ಟು ತುಮಕೂರಿಗೆ ಮೆಟ್ರೊ - ಒಂದು ಗಂಟೆಯ ಪ್ರಯಾಣ; ಎಲ್ಲೆಲ್ಲಿ ಸ್ಟಾಪ್​? ಡಿಟೇಲ್ಸ್​ ಇಲ್ಲಿದೆ

ಬೆಂಗಳೂರು ಮತ್ತು ತುಮಕೂರು ನಡುವೆ ನಮ್ಮ ಮೆಟ್ರೋ ವಿಸ್ತರಣೆಗೆ ಯೋಜನೆ ಸಿದ್ಧವಾಗಿದ್ದು, ಇದು ರಾಜ್ಯದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಆಗಲಿದೆ. ಹಸಿರು ಮಾರ್ಗದ ವಿಸ್ತರಣೆಯಾಗಿ ಮಾದಾವರದಿಂದ ಸಿರಾ ಗೇಟ್‌ವರೆಗೆ 60 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣ ನಿರ್ಮಿಸಲು BMRCL ಯೋಜನಾ ವರದಿ ಸಲ್ಲಿಸಿದೆ.

Read Full Story
02:06 PM (IST) May 28

Karnataka Politics Live CM Siddaramaiah Resignation Updates Siddaramaiah - ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಕಾಂಗ್ರೆಸ್ ತಕ್ಕ ಪಾಠ ಕಲಿಸುತ್ತೇವೆ; ಅಹಿಂದ ಮುಖಂಡರ ಎಚ್ಚರಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಚರ್ಚೆಗಳ ಹಿನ್ನೆಲೆಯಲ್ಲಿ, ಅಹಿಂದ ಒಕ್ಕೂಟವು ಕಾಂಗ್ರೆಸ್ ಹೈಕಮಾಂಡ್‌ಗೆ ತೀವ್ರ ಎಚ್ಚರಿಕೆ ನೀಡಿದೆ. ಸಿದ್ದರಾಮಯ್ಯರನ್ನು ಇನ್ನೂ ಎರಡು ವರ್ಷ ಮುಂದುವರಿಸಬೇಕು, ಇಲ್ಲದಿದ್ದರೆ ಹಿಂದೆ ಹಿಂದಿನ ಘಟನೆ ಪಕ್ಷಕ್ಕೆ ಮರುಕಳಿಸಲಿದೆ ಎಂದು ಎಚ್ಚರಿಕೆ ನೀಡಿದರು.

Read Full Story
01:57 PM (IST) May 28

Karnataka Politics Live CM Siddaramaiah Resignation Updates ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ಸಲ್ಲಿಸಲಿದ್ದು, ಈ ಬೆಳವಣಿಗೆಯನ್ನು ಅವರು ಈ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸಿದ ಘಟನೆಗೆ ಹೋಲಿಸಲಾಗುತ್ತಿದೆ. ರಾಯರನ್ನು ಅವಮಾನಿಸಿದವರಿಗೆ ಅಧಿಕಾರ ಯೋಗ ಕೊನೆಯಾಗುತ್ತದೆ ಎಂದು ನಟ ಜಗ್ಗೇಶ್ ಅಂದು ನುಡಿದಿದ್ದ ಭವಿಷ್ಯ ವೈರಲ್ ಆಗಿದೆ.

Read Full Story
01:43 PM (IST) May 28

Karnataka Politics Live CM Siddaramaiah Resignation Updates ಮುಂದಿನ ಸಿಎಂ ಡಿಕೆಶಿಗೆ ಎಲ್ಲರೂ ಸಹಕರಿಸಿ! ವಿದಾಯದ ಕೂಟದಲ್ಲಿ ಸಿದ್ದರಾಮಯ್ಯ ಭಾವುಕ, ಬಹಿರಂಗವಾಯ್ತು 'ರಹಸ್ಯ ಒಪ್ಪಂದ'!

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಾಹಾರ ಕೂಟದಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿ, ಡಿ.ಕೆ. ಶಿವಕುಮಾರ್ ಅವರನ್ನು ನೂತನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದರು. ಈ ಭಾವುಕ ಸಭೆಯಲ್ಲಿ, ತಮ್ಮ ಅಧಿಕಾರಾವಧಿಯ ಕೆಲಸಗಳನ್ನು ಸ್ಮರಿಸಿ, ಪಕ್ಷದ ಸಿದ್ಧಾಂತವನ್ನು ಪಾಲಿಸುವಂತೆ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು.

Read Full Story
01:18 PM (IST) May 28

Karnataka Politics Live CM Siddaramaiah Resignation Updates CM Siddaramaiah Resignation - ಸಿದ್ದರಾಮಯ್ಯರನ್ನ ಕಾಂಗ್ರೆಸ್ ನಡೆಸಿಕೊಂಡ ರೀತಿ ಸರಿಯಿಲ್ಲ - ಪ್ರಲ್ಹಾದ್ ಜೋಶಿ ಸ್ಫೋಟಕ ಹೇಳಿಕೆ!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಹೇಳಿದ್ದಾರೆ. ಹಿಂದೆ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರಿಗೆ ಮಾಡಿದ ಅವಮಾನವನ್ನೇ, ಇಂದು ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Read Full Story
12:30 PM (IST) May 28

Karnataka Politics Live CM Siddaramaiah Resignation Updates ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಪಕ್ಷಕ್ಕೆ ಅಪಾಯ, ಡಿಕೆಶಿಗೆ ಅವಕಾಶ ಕೊಡದಿದ್ರೂ ತಪ್ಪಿದ್ದಲ್ಲ ತೊಂದ್ರೆ, ಕಾಂಗ್ರೆಸ್‌ನ ಮುಂದಿನ ನಡೆ ಏನು?

ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಂದುವರಿಸಬೇಕೇ ಅಥವಾ ಡಿಕೆ ಶಿವಕುಮಾರ್‌ಗೆ ಅವಕಾಶ ನೀಡಬೇಕೇ ಎಂಬ ಜಿಜ್ಞಾಸೆ ಪಕ್ಷದೊಳಗೆ ತೀವ್ರ

Read Full Story