ಕಾಂಗ್ರೆಸ್‌ ವರ್ಗಾವಣೆ ದಂಧೆಗೆ ಸಾಕ್ಷಿಯಾಯ್ತಾ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಆದೇಶ..!

ಕಾಂಗ್ರೆಸ್‌ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಆರೋಪಕ್ಕೆ ಸಾಕ್ಷಿ ಆಗುವಂತೆ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಈಗ 19 ಅಧಿಕಾರಿಗಳ ವರ್ಗಾವಣೆ ತಡೆಹಿಡಿದಿದೆ.

Karnataka Police inspectors Transfer stay order is witness to Congress transfer scam sat

ಬೆಂಗಳೂರು (ಆ.02): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸರ್ಕಾರ ವರ್ಗಾವಣೆ ದಂಧೆಯನ್ನು ಆರಂಭಿಸಿದೆ ಎಂದು ವಿಪಕ್ಷಗಳಿಂದ ಗಂಭೀರ ಟೀಕೆಗೆ ಒಳಗಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ  ರಾಜ್ಯದ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಈಗ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆಹಿಡಿದ ಆದೇಶ ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

ಹೊಸ ಸರ್ಕಾರದಲ್ಲಿ ವರ್ಗಾವಣೆಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯ ನೀಡಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ರಾನ್ಸ್ ಫರ್ ದಂಧೆ ಆರೋಪಕ್ಕೆ ಕಾಂಗ್ರೆಸ್‌ ಸರ್ಕಾರ ಪುಷ್ಟಿಯನ್ನು ನೀಡಿದೆ. ನಿನ್ನೆ ರಾಜ್ಯಾದ್ಯಂತ  211 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ವರ್ಗಾವಣೆ ಆದೇಶ ಬರ್ತಿದ್ದಂತೆ ಹಲವು ಬೆಳಗಾಗುವುದರೊಳಗೆ 11 ಇನ್ಸ್ ಪೆಕ್ಟರ್‌ಗಳು ಹಾಗೂ ಮಧ್ಯಾಹ್ನದ ವೇಳೆ ಪುನಃ 8 ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಕಾಂಗ್ರೆಸ್‌ ಸರ್ಕಾರದ ಬಜೆಟ್‌ನ ಅನುದಾನ ಬಳಕೆ ಆರಂಭ: ತುರ್ತು ಜಾರಿಯಾಗುವ 8 ಯೋಜನೆಗಳು ಇಲ್ಲಿವೆ ನೋಡಿ

ಶಾಸಕರು, ಸಚಿವರ ಅಸಮಾಧಾನಕ್ಕೆ ಮುಲಾಮು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಹಸೀಲ್ದಾರ್‌, ಬಳಿಕ ಡಿವೈಎಸ್‌ಪಿಗಳ ವರ್ಗಾವಣೆ ನಡೆಸಿದ್ದ ರಾಜ್ಯ ಸರ್ಕಾರ ಇದೀಗ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಪೊಲೀಸ್‌ ವರ್ಗಾವಣೆ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಗೃಹ ಸಚಿವರ ಜತೆ ಮುಖ್ಯಮಂತ್ರಿಗಳು ರಹಸ್ಯ ಸಭೆ ನಡೆಸಿದ ಬಳಿಕ ಮಂಗಳವಾರ ಸಾಮೂಹಿಕ ವರ್ಗಾವಣೆ ಮಾಡಲಾಗಿತ್ತು.

ವರ್ಗಾವಣೆ ಆದೇಶ ಹೊರಡಿಸಿ, ತಡೆ ನೀಡೋದ್ಯಾಕೆ?: ಸರ್ಕಾರ ಆದೇಶ ಮಾಡೋದೇಕೆ ಮತ್ತೆ ತಡೆ ಒಡ್ಡೋದ್ಯಾಕೆ? ಸ್ವಕ್ಷೇತ್ರದ ನಿರ್ವಹಣೆಗೆ ಪೈಪೋಟಿಗಿಳಿದರೇ ಸಚಿವರು ಎಂಬ ಅನುಮಾನ ಕಂಡುಬರುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಭಾಗ್ಯಗಳ ಸರ್ಕಾರದಲ್ಲಿ ವರ್ಗಾವಣೆಯಾದ ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯವನ್ನು ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಾಸಭಾ ಕ್ಷೇತ್ರದ ಹಲವು ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಲಾಗಿದೆ. ಇದಲ್ಲದೆ ಹಲವು ಕಡೆ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಬೆಳ್ಳಂ ಬೆಳಗ್ಗೆ ತಡೆ ನೀಡಿದ್ದು, ವರ್ಗಾವಣೆಯಲ್ಲೂ ಎರಡು ಬಣಗಳ ನಡುವಿನ ಗುದ್ದಾಟ ಮತ್ತು ದಂಧೆಯು ನಡೆಯುತ್ತಿದೆಯಾ ಎಂಬ ಅನುಮಾನ ಕಂಡುಬಂದಿದೆ.

Karnataka Police inspectors Transfer stay order is witness to Congress transfer scam sat

ತಹಸೀಲ್ದಾರ್‌, ಡಿವೈಎಸ್‌ಪಿ ಬಳಿಕ 211 ಇನ್ಸ್‌ಪೆಕ್ಟರ್‌ ವರ್ಗ: ಶಾಸಕರ ಬೇಸರಕ್ಕೆ ಸಿದ್ದು ಮುಲಾಮು..!

  • ವರ್ಗಾವಣೆ ಆದೇಶ ತಡೆಹಿಡಿದ ಇನ್ಸ್‌ಪೆಕ್ಟರ್‌ಗಳ ವಿವರ ಇಲ್ಲಿದೆ: 
  • ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ 
  • ಲಕ್ಷ್ಮಣ್ ಜೆ - ನಂದಿನಿ ಲೇಔಟ್ ಪೊಲೀಸ್ 
  • ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ
  • ಗೋವಿಂದರಾಜು - ಪೀಣ್ಯ ಪೊಲೀಸ್ ಠಾಣೆ
  • ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ
  • ಜಗದೀಶ್ - ಕುಮಾರ್ ಸ್ವಾಮಿ ಲೇಔಟ್
  • ವ್ರಜಮುನಿ- ಕೆ ಆರ್ ಮಾರ್ಕೆಟ್ 
  • ರವಿಕುಮಾರ್- ಪುಟ್ಟೆನಹಳ್ಳಿ 
  • ಅನಿಲ್ ಕುಮಾರ್ - ಮಲ್ಲೇಶ್ವರ ಪೊಲೀಸ್ ಠಾಣೆ
  • ಎಡ್ವಿನ್ ಪ್ರದೀಪ್ - ಜಿಗಣಿ
  • ಧನಂಜಯ್ - ಯಶವಂತಪುರ
  • ದೀಪಕ್‌.ಎಲ್- ಹೆಣ್ಣೂರು ಪೊಲೀಸ್‌ ಠಾಣೆ, ಬೆಂಗಳೂರು
  • ಮೋಹನ್‌ ಎನ್. ಹೆಡ್ಡಣ್ಣನವರ - ಕರ್ನಾಟಕ ಲೋಕಾಯುಕ್ತ
  • ಸುನಿಲ್‌. ಹೆಚ್‌.ಬಿ- ತ್ಯಾಮಗೊಂಡ್ಲು ಪೊಲೀಸ್‌ ಠಾಣೆ, ಬೆಂಗಳೂರು
  • ರವಿಕುಮಾರ್‌.ಹೆಚ್‌.ಕೆ- ಡಿಸಿಆರ್‌ಇ, ಬೆಂಗಳೂರು
  • ಪ್ರವೀಣ್‌ ಬಾಬು.ಜಿ.ಡಿ- ಸಿಐಡಿ
  • ಮಂಜುನಾಥ್‌.ಬಿ- ಸಿಇಎನ್‌ ಪೊಲೀಸ್‌ ಠಾಣೆ, ದಾವಣೆಗೆರೆ
  • ಶಿವಸ್ವಾಮಿ. ಸಿ.ಬಿ- ಹೈಗ್ರೌಂಡ್‌ ಪೊಲೀಸ್‌ ಠಾಣೆ, ಬೆಂಗಳೂರು
  • ಸಚಿನ್‌ ಕುಮಾರ್‌- ಕರ್ನಾಟಕ ಲೋಕಾಯುಕ್ತ
     

 

Latest Videos
Follow Us:
Download App:
  • android
  • ios