ಕಾಂಗ್ರೆಸ್ ಸರ್ಕಾರದ ಬಜೆಟ್‌ನ ಅನುದಾನ ಬಳಕೆ ಆರಂಭ: ತುರ್ತು ಜಾರಿಯಾಗುವ 8 ಯೋಜನೆಗಳು ಇಲ್ಲಿವೆ ನೋಡಿ
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಅನುಷ್ಠಾನ ಆಗಸ್ಟ್ 1ರಿಂದ ಆರಂಭವಾಗಿದ್ದು, ಅನುದಾನ ಬಳಕೆಗೆ ಸರ್ಕಾರ ಮುಂದಾಗಿದೆ. ಶೀಘ್ರವಾಗಿ ಈ 8 ಯೋಜನೆಗಳ ಜಾರಿಗೆ ಆದೇಶ ಹೊರಬೀಳಲಿದೆ.
ಬೆಂಗಳೂರು (ಆ.02): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆನ ಬಂದ ನಂತರ ಕಳೆದ ತಿಂಗಳು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3,27,747 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಈ ಬಜೆಟ್ ಆಗಸ್ಟ್ 1 ರಿಂದ ಅನ್ವಯವಾಗಿದ್ದು, ಅನುದಾನದ ಬಳಕೆ ಇಂದಿನಿಂದ ಆರಂಭವಾಗಿದೆ. ಶೀಘ್ರವಾಗಿ ಎಂಟು ಯೋಜನೆಗಳ ಜಾರಿಗೆ ಆದೇಶ ಹೊರಬೀಳಲಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏಪ್ರಿಲ್‌ನಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್ ಕೇವಲ ಜುಲೈ 31ರವರೆಗೆ ಮಾತ್ರ ಸೀಮಿತವಾಗಿತ್ತು. ಇನ್ನು ಚುನಾವಣೆಯ ನಂತರ ಬಹುಮತ ಪಡೆದು ಅಧಿಕಾತಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಆದ್ದರಿಂದ ಕಾಂಗರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹೊಸದಾಗಿ ಬಜೆಟ್ ಮಂಡನೆ ಮಾಡಿದರೂ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳಿಗೆ ಅನುದಾನ ಬಳಕೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಆಗಸ್ಟ್ 1ರಿಂದ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಅನ್ವಯವಾಗಲಿದ್ದು, ಇಂದಿನಿಂದ ಅನುದಾನ ಬಳಕೆ ಆರಂಭವಾಗಿದೆ.
ಮುಸ್ಲಿಂ ದರ್ಗಾದಲ್ಲಿ ಕೇಸರಿ ವಸ್ತ್ರವೇ ಗೆಲ್ಲುವುದಾಗಿ ಭವಿಷ್ಯ ನುಡಿದ ಲಾಲಸಾಬ್ ಅಜ್ಜ
ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳಿಗೆ ನೀಲನಕ್ಷೆ ತಯಾರಿಕೆ ಆರಂಭ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಹೊಸ ಬಜೆಟ್ ಇಂದಿನಿಂದ ಜಾರಿಯಾಗಲಿದ್ದು, ಅಗಸ್ಟ್ 1 ರಿಂದ ಅನ್ವಯವಾಗುವಂತೆ ಹೊಸ ಬಜೆಟ್ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬರೋಬ್ಬರಿ 3,27,747 ಕೋಟಿ ರೂ ಬಜೆಟ್ ಅನುದಾನದ ಬಳಕೆ ಅನ್ವಯವಾಗಲಿದೆ. ಬಜೆಟ್ ನಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳ ನೀಲನಕ್ಷೆಗೆ ಸೂಚನೆ ನೀಡಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವ ಸಿಎಂ ಸಿದ್ಧರಾಮಯ್ಯ ಅವರು, ಹಂತ ಹಂತವಾಗಿ ಬಜೆಟ್ ಘೋಷಣೆಗಳ ಸರ್ಕಾರಿ ಆದೇಶಕ್ಕೆ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ದೃಷ್ಟಿಕೋನದಿಂದ ಕೆಲ ಯೋಜನೆ ಶೀಘ್ರ ಜಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಘೋಷಣೆಗಳ ಜಾರಿಗೆ ಆದ್ಯತೆ ನೀಡಲಾಗಿದೆ. ಮತಬೇಟೆಯ ಲೆಕ್ಕಾಚಾರದಲ್ಲಿ ಬಜೆಟ್ ಘೋಷಣೆಗಳ ಶೀಘ್ರ ಸರ್ಕಾರಿ ಆದೇಶಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಜನರಿಗೆ ತಕ್ಷಣ ತಲುಪುವ ಯೋಜನೆಗಳ ಕುರಿತು ಸರ್ಕಾರಿ ಆದೇಶಕ್ಕೆ ನಿರ್ದೇಶನ ನೀಡಲಾಗಿದೆ. ಅದರಲ್ಲಿ ಕೆಲವು ಯೋಜನೆಗಳನ್ನು ಈಗ ಜಾರಿಗೆ ಮಾಡುವುದಕ್ಕೆ ಮುಂದಾಗಿದೆ.
ಕಾಂಗ್ರೆಸ್‌ನಲ್ಲಿ ಮತ್ತೆ ಶಾಸಕರ ಕೆಂಗಣ್ಣಿಗೆ ಗುರಿಯಾದ ಗೃಹ ಸಚಿವ ಪರಮೇಶ್ವರ್: ರಾಯರೆಡ್ಡಿ ಆಕ್ರೋಶ
- ಮೊದಲ ಹಂತದಲ್ಲಿ ಸರ್ಕಾರಿ ಆದೇಶವಾಗುವ ಬಜೆಟ್ ಘೋಷಣೆಗಳು.
- ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರೂ. ಅನುದಾನ ನೀಡುವುದು.
- ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ.
- ಹಸು, ಎತ್ತು, ಎಮ್ಮೆ ಮೃತಪಟ್ಟರೆ 10 ಸಾವಿರ ರೂ. ಪರಿಹಾರ ನೀಡುವ ಅನುಗ್ರಹ ಯೋಜನೆ ಮರುಜಾರಿ.
- ರೈತ ಉತ್ಪನ್ನಗಳ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆಗೆ 10 ಕೋಟಿ ರೂ. ಮೀಸಲಿಡುವುದು.
- ರಾಮನಗರ, ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಕ್ರಮ.
- ಕೃಷಿ ಭಾಗ್ಯ ಯೋಜನೆಗೆ ನರೇಗಾ ಅಡಿಯಲ್ಲಿ 100 ಕೋಟಿ ರೂ ನೀಡುವುದು.
- 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ 2 ಬಾರಿ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಣೆ.
- ಸ್ವಿಗ್ಗಿ, ಜೊಮೋಟೋ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ನೀಡುವುದು.