ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇದೇ ಮೊಟ್ಟ ಮೊದಲ ಬಾರಿಗೆ ದತ್ತಮಾಲೆಯನ್ನು ಧರಿಸಿ ದತ್ತ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ.

ಚಿಕ್ಕಮಗಳೂರು (ಡಿ.24): ರಾಜ್ಯದಲ್ಲಿ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಹಾಗೂ ಹಿಂದುತ್ವದ ಪರವಾಗಿ ಧ್ವನಿ ಎತ್ತಿದ್ದರೂ ಇದೇ ಮೊಟ್ಟ ಮೊದಲ ಬಾರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ದತ್ತಮಾಲೆಯನ್ನು ಧರಿಸಿ ದತ್ತ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಸ್ವಕ್ಷೇತ್ರವಾಗಿರುವ ಚಿಕ್ಕಮಗಳೂರಿನ ದತ್ತಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಇದೇ ಮೊದಲ ಬಾರಿಗೆ ದತ್ತಮಾಲೆ ಸ್ವೀಕಾರ ಮಾಡಿದ್ದೇನೆ. ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ಭೇಟಿ ನೀಡಿದ್ದೆನು. ನಾನು ಕಂಡಂತೆ, ಒಬ್ಬ ಕಂದಾಯ ಸಚಿವನಾಗಿ ನನಗೆ ಕಂಡಿದ್ದು ದತ್ತಪೀಠ ಹಿಂದೂಪೀಠವಾಗಿದೆ. ಹಿಂದೂಗಳ ಪೀಠ ದತ್ತಪೀಠವನ್ನ ಅತಿಕ್ರಮಣ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅರ್ಚಕರ ನೇಮಕ ಮಾಡಿದ್ದೇವೆ. ನಾಳೆ ನಡೆಯುವ ಹೋಮದಲ್ಲಿ ನಾನು ಭಾಗಿಯಾಗುತ್ತೇವೆ ಎಂದು ಹೇಳಿದರು.

ಬೆಂಗಳೂರು ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬಿಜೆಪಿಯ ಕೆಲ ಶಾಸಕರು ದತ್ತ ಜಯಂತಿಯಲ್ಲಿ ಭಾಗಿಯಾಗುತ್ತಾರೆ. ದತ್ತಪೀಠವೂ ಕೂಡ ಆಂಧ್ರಪ್ರದೇಶದ ತಿರುಪತಿ, ಹಿಂದೂ ಪುಣ್ಯ ಸ್ಥಳ ಕಾಶಿ ರೀತಿಯಲ್ಲಿಯೇ ಹಿಂದೂ ಧಾರ್ಮಿಕ ಸ್ಥಳವಾಗಬೇಕು. ಹಿಂದೂಗಳ ಶ್ರದ್ಧಾ ಭಕ್ತಿಯ ತಾಣ, ಪವಿತ್ರ ಕ್ಷೇತ್ರ ದತ್ತಪೀಠದ ಭಾವನೆಯನ್ನು ಕೆಲವರು ಮಟ್ಟ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ದತ್ತಪೀಠ ಬೇರೆ, ದರ್ಗಾ ಬೇರೆ ಎನ್ನುವುದಕ್ಕೆ ದಾಖಲೆಗಳಿವೆ. ದತ್ತಪೀಠಕ್ಕಾಗಿ ನಿರಂತರವಾಗಿ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ದತ್ತಪೀಠ ಹಿಂದೂ ಪೀಠವಾಗಿಯೇ ಉಳಿಯಬೇಕು. ದತ್ತಪೀಠದ ಗೌರವ-ಘನತೆ ಎತ್ತಿ ಹಿಡಿಯುವ ಕೆಲಸವನ್ನ ಈ ರಾಜ್ಯ ಸರ್ಕಾರವು ಮಾಡಬೇಕು ಎಂದು ಆಗ್ರಹಿಸಿದರು.

Scroll to load tweet…

ಇನ್ನು ಹಿಂದಿನ ರಾತ್ರಿ ನಡೆದ ಚಿಕ್ಕಮಗಳೂರಿನ ಹಿಂದುತ್ವದ ಭದ್ರಕೋಟೆ ಆಲ್ದೂರಿನ ದತ್ತಜಯಂತಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಶೋಭಾ ಕೃಮದ್ಲಾಜೆ ಅವರು ಹಿಂದೂ ಕಾರ್ಯಕರ್ತರೊಡನೆ ಡಿಜೆ ಹಾಡಿಗೆ ಹೆಜ್ಜೆಯನ್ನು ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ, ಶ್ರೀ ಸಿ.ಟಿ.ರವಿಯವರು, ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಇಂದು ಐತಿಹಾಸಿಕ ದತ್ತ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಆಯೋಜಿಸಿದ ಅನುಸೂಯ ಮಾತಾ ಸಂಕೀರ್ತನ ಯಾತ್ರೆಯನ್ನು ನೆರವೇರಿಸಲಾಯಿತು.

ಬೆಂಗಳೂರು ನೈಟ್‌ ರೌಂಡ್ಸ್‌ ಪೊಲೀಸ್‌ಗೆ ಬೈಕ್‌ ಗುದ್ದಿ ಪರಾರಿಯಾದ ಕಿರಾತಕ: ಕಾಲು ಮುರಿದುಕೊಂಡು ಬಿದ್ದ ಪಿಎಸ್‌ಐ!

ಇದೇ ವೇಳೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ,ದತ್ತಪೀಠದಲ್ಲಿ ನಿರ್ಮಿಸಲಾದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು. ಗಿರಿ ಪ್ರದೇಶದಲ್ಲಿರುವ ಶ್ರದ್ಧಾಕೇಂದ್ರ ದತ್ತಪೀಠಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.ಈ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆನ್ನುವ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಹೇಳಿಕೊಂಡರು.