11:24 PM (IST) Sep 09

Karnataka News Live:2025ರಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಟಾಪ್ 5 ಸಿನಿಮಾಗಳ ಲಿಸ್ಟ್ ನೋಡಿ! ಕಮಾಲ್ ಮಾಡಿದ ಉಪ್ಪಿ!

2025ರಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ತಮಿಳು ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ. ಯಾವ್ಯಾವ ಸಿನಿಮಾಗಳು ಈ ಪಟ್ಟಿಯಲ್ಲಿವೆ ಅಂತ ನೋಡೋಣ.

Read Full Story
11:19 PM (IST) Sep 09

Karnataka News Live:ನೇಪಾಳ ಪ್ರಧಾನಿ ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆ, ಹಿಂದೂ ರಾಜ್ಯ ಮರುಸ್ಥಾಪಿಸಿ ರಾಜರ ಆಡಳಿತ?

ನೇಪಾಳದ ಪರಿಸ್ಥಿತಿ ಕೈಮೀರಿದೆ. ಪ್ರಧಾನಿ ರಾಜೀನಾಮೆ ನೀಡಿದ್ದರೆ, ಹಲವು ಮಾಜಿ ಪ್ರಧಾನಿಗಳು ಮೇಲೆ ದಾಳಿಯಾಗಿದೆ. ನೇಪಾಳ ಸೇನೆ ರಂಗ ಪ್ರವೇಶ ಮಾಡಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದೆ. ಇದರ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ನೇಪಾಳದಲ್ಲಿ ಮತ್ತೆ ರಾಜ ಆಡಳಿತ ಬರುತ್ತಾ?

Read Full Story
11:00 PM (IST) Sep 09

Karnataka News Live:ಬ್ರಿಟೀಷರ ಕಾಲದಲ್ಲಿ ಸತ್ತ ಅಜ್ಜಿಯ ಸಮಾಧಿ ಹುಡುಕಿಕೊಂಡು ನಂದಿ ಬೆಟ್ಟಕ್ಕೆ ಇಂಗ್ಲೆಂಡಿಗ! ಸಾಥ್ ಕೊಟ್ಟ ನಳಿನಿ

ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬ್ರಿಟಿಷ್ ಕಾಲದ ಸಾಹಿತಿ ಜಾನ್ ಗ್ಯಾರೆಟ್ ಪತ್ನಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಇಂಗ್ಲೆಂಡಿನಿಂದ ಬಂದ ಅವರ ವಂಶಸ್ಥರು ಪತ್ತೆ ಮಾಡಿದ್ದಾರೆ. ದೇಶ, ಕುಟುಂಬ ಬಿಟ್ಟು ಭಾರತಕ್ಕೆ ಬಂದ ಪೊರ್ವಜರ ಸಮಾಧಿ ನೋಡಿ ಭಾವುಕರಾಗಿದ್ದು, ಅವರಿಗೆ ಗೌರವ ಸಲ್ಲಿಸಿದ್ದಾರೆ.

Read Full Story
10:37 PM (IST) Sep 09

Karnataka News Live:ಕೈಗೆ ಸಿಕ್ಕ ನೇಪಾಳ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಜೆನ್ ಜೆಡ್ ಪ್ರತಿಭಟನಾಕಾರರು

ನೇಪಾಳದಲ್ಲಿ ಜೆನ್ ಜೆಡ್ ಸಮುದಾಯದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಆಕ್ರೋಶವೆಲ್ಲಾ ಅಲ್ಲಿನ ರಾಜಕಾರಣಿಗಳತ್ತ ತಿರುಗಿದೆ. ಕೈಗೆ ಸಿಕ್ಕ ತಮ್ಮ ದೇಶದ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಪ್ರತಿಭಟನಾಕಾರರು ಥಳಿಸಿದ್ದಾರೆ.

Read Full Story
10:32 PM (IST) Sep 09

Karnataka News Live:3 ದಿನ 3 ಪ್ರಧಾನಿಗಳು ಔಟ್! ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ನೇಪಾಳ ಪರಧಾನಿ ರಾಜೀನಾಮೆ ಸೇರಿದಂತೆ ಕಳೆದ ಮೂರೇ ದಿನದಲ್ಲಿ ಮೂವರು ಪ್ರಧಾನಿಗಳು ಸ್ಥಾನ ಕಳದೆುಕೊಂಡಿದ್ದಾರೆ. ಹ್ಯಾಟ್ರಿಕ್ ಪ್ರಧಾನಿಗಳ ರಾಜೀನಾಮೆ ಹಿಂದಿನ ಕಾರಣವೇನು?

Read Full Story
10:32 PM (IST) Sep 09

Karnataka News Live:ಅಂಕೋಲಾ ಶಾಸಕ ಸತೀಶ್ ಸೈಲ್ ಬಂಧನ - ₹1.41 ಕೋಟಿ ನಗದು, 6.75 ಕೆ.ಜಿ. ಚಿನ್ನ ಜಪ್ತಿ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಬಂಧನ ಮಾಡಲಾಗಿದೆ. 250 ಕೋಟಿ ರೂ. ಬೆಲೆಬಾಳುವ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ನಡೆಸಿತ್ತು. ಈ ವೇಲೆ ಸತೀಶ್ ಸೈಲ್ ಮನೆಯಲ್ಲಿ 1.41 ಕೋಟಿ ರೂ. ನಗದು ಮತ್ತು 6.75 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.

Read Full Story
09:22 PM (IST) Sep 09

Karnataka News Live:ಶಾಸಕ ವೀರೇಂದ್ರ ಪಪ್ಪಿ ₹100 ಕೋಟಿ ಅಕ್ರಮ ಸಂಪತ್ತು ಜಪ್ತಿ ಮಾಡಿದ ಇಡಿ; 21 ಕೆಜಿ ಬಂಗಾರ ವಶ!

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಇಡಿ ದಾಳಿ ಚಳ್ಳಕೆರೆಯಲ್ಲಿ ದಾಳಿ ನಡೆಸಿ ₹24 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಇದೀಗ, ಒಟ್ಟು ವಶಪಡಿಸಿಕೊಂಡ ಆಸ್ತಿ ₹100 ಕೋಟಿ ದಾಟಿದೆ. ವೀರೇಂದ್ರ ಇ.ಡಿ. ಕಸ್ಟಡಿಯಲ್ಲಿದ್ದಾರೆ.

Read Full Story
08:58 PM (IST) Sep 09

Karnataka News Live:RSS ಕಟ್ಟಾಳು, ಬಿಜೆಪಿ ಕಟ್ಟಿಬೆಳಿಸಿದ ಸಿಪಿ ರಾಧಾಕೃಷ್ಣನ್ ಭಾರತದ 15ನೇ ಉಪ ರಾಷ್ಟ್ರಪತಿ

ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಭರ್ಜರಿ ಬಹುಮತಗಳೊಂದಿಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್ ಯಾರು? ಇವರ ರಾಜಕೀಯ ಜೀವನ, ಸಾಮಾಜಿಕ ಸೇವೆ ಕುರಿತು ರೋಚಕ ಮಾಹಿತಿ ಇಲ್ಲಿದೆ.

Read Full Story
08:28 PM (IST) Sep 09

Karnataka News Live:ಕಾರ್ಮಿಕ ಕಾಯ್ದೆಗೆ ತಿದ್ದುಪಡಿ, ದಿನಕ್ಕೆ 12 ಗಂಟೆ ಕೆಲಸ!

ಮಹಾರಾಷ್ಟ್ರ ಸರ್ಕಾರ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ವಾರದ ಕೆಲಸದ ಅವಧಿಯನ್ನು 60 ಗಂಟೆಗಳಿಗೆ ಹೆಚ್ಚಿಸಲಾಗಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
Read Full Story
08:06 PM (IST) Sep 09

Karnataka News Live:ಗಂಡ, ಹೆಂಡತಿ ಮಕ್ಕಳು ಸೇರಿ ಕಾಲುವೆಗೆ ಹಾರಿದ ಒಂದೇ ಕುಟುಂಬದ 6 ಜನ; ಇಬ್ಬರು ಸೇಫ್, ನಾಲ್ವರು ಸಾವು

ಬೀದರ್‌ನಲ್ಲಿ ಸಾಲಬಾಧೆ ಹಾಗೂ ಆಸ್ತಿ ವಿವಾದದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ಮೂರು ಮಕ್ಕಳು ಮೃತಪಟ್ಟರೆ, ತಾಯಿ ಮತ್ತು ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆ ಭಾಲ್ಕಿ ತಾಲೂಕಿನ ಮರೂರಿನಲ್ಲಿ ನಡೆದಿದೆ. 

Read Full Story
07:54 PM (IST) Sep 09

Karnataka News Live:ರಾಜ್ಯ ರಾಜಕಾರಣದಲ್ಲಿ ಬೆಚ್ಚಿಬೀಳಿಸೋ ಹಗರಣ; ಮಾಜಿ ಸಚಿವರ ಬಾಲಂಗೋಚಿಗಳಿಂದ ₹360 ಕೋಟಿ ಲೂಟಿ!

ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ 360 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಹಗರಣ ಬೆಳಕಿಗೆ ಬಂದಿದೆ. ಶಾಸಕರ ಆಪ್ತರು ನಕಲಿ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೋರಾಟಗಾರರ ಅನುಮಾನಾಸ್ಪದ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
Read Full Story
07:35 PM (IST) Sep 09

Karnataka News Live:ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಆಯ್ಕೆ, 532 ಮತಗಳ ಭರ್ಜರಿ ಗೆಲುವು

ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಸಂಜೆ 6 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ.ಇದೀಗ ಫಲಿತಾಂಶ ಘೋಷಣೆಯಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು ಕಂಡಿದ್ದಾರೆ.

Read Full Story
07:27 PM (IST) Sep 09

Karnataka News Live:ನೇಪಾಳ ಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ

ನೇಪಾಳದ ಪ್ರತಿಭಟನೆ ಹಾಗೂ ಹಿಂಸಾಚಾರ ಕೈಮೀರಿದೆ. ಪ್ರತಿಭಟನಕಾರರು ಸಿಕ್ಕ ಸಿಕ್ಕ ಕಡೆ ಬೆಂಕಿ ಹಚುತ್ತಿದ್ದಾರೆ. ನೇಪಾಳ ಮಾಜಿ ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಮಾಜಿ ಪ್ರಧಾನಿ ಪತ್ನಿ ಜೀವಂತ ದಹನವಾದ ದಾರುಣ ಘಟನೆ ನಡೆದಿದೆ.

Read Full Story
07:03 PM (IST) Sep 09

Karnataka News Live:ಬೆಂಗಳೂರಿನಲ್ಲಿ 3 ದಿನ ನೀರಿಲ್ಲ - ತುರ್ತು ಸಿದ್ಧತೆ ಮಾಡಿಕೊಳ್ಳಿ ಎಂದ ಜಲಮಂಡಳಿ!

ಬೆಂಗಳೂರಿನಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಒಟ್ಟು 3 ದಿನಗಳ ಕಾಲ ಪಂಪಿಂಗ್ ಸ್ಟೇಷನ್‌ಗಳ ನಿರ್ವಹಣಾ ಕಾರ್ಯಗಳಿಂದಾಗಿ ಈ ಅವಧಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಡಲು ಬೆಂಗಳೂರು ಜಲಮಂಡಳಿ ಸೂಚಿಸಿದೆ.

Read Full Story
06:53 PM (IST) Sep 09

Karnataka News Live:ಕಾಂಗ್ರೆಸ್ ಸರ್ಕಾರಕ್ಕೆ ಧಾರ್ಮಿಕ ರಾಜಕೀಯ ಸಂಕಷ್ಟ, ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಸರಣಿ ಘಟನೆಗಳೇ ಕಾರಣ!

ರಾಜ್ಯದಲ್ಲಿ ನಡೆದ ಉದಯಗಿರಿ ಗಲಭೆ, ನಾಗಮಂಗಲ ಕೋಮುಗಲಭೆ, ಮದ್ದೂರು ಗಣೇಶ ಮೆರವಣಿಗೆ ಗಲಾಟೆ ಸೇರಿದಂತೆ ಹಲವು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂಬ ಆರೋಪಕ್ಕೆ ಗುರಿಮಾಡಿವೆ. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿವೆ.

Read Full Story
05:44 PM (IST) Sep 09

Karnataka News Live:ಹಳದಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; 25ರ ಬದಲು 19 ನಿಮಿಷಕ್ಕೊಂದು ರೈಲು ಸಂಚಾರ!

ಬೆಂಗಳೂರು ಮೆಟ್ರೋದ ಹಳದಿ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆಯಾಗಿದ್ದು, ಸೆಪ್ಟೆಂಬರ್ 10 ರಿಂದ ರೈಲುಗಳ ಆವರ್ತನ 25 ನಿಮಿಷಗಳಿಂದ 19 ನಿಮಿಷಗಳಿಗೆ ಇಳಿಕೆಯಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ರೈಲು ಸಮಯವನ್ನು ಸಹ ಬದಲಾಯಿಸಲಾಗಿದೆ.
Read Full Story
05:26 PM (IST) Sep 09

Karnataka News Live:ಪಾಕಿಸ್ತಾನದಲ್ಲಿ ವಾಯುಭಾರ ಕುಸಿತ ಪರಿಣಾಮ; ಕರ್ನಾಟಕದಲ್ಲಿ 7 ದಿನ ಭಾರೀ ಮಳೆ!

ಪಾಕಿಸ್ತಾನದ ವಾಯುಭಾರ ಕುಸಿತದ ಪರೋಕ್ಷ ಪರಿಣಾಮದಿಂದ ಕರ್ನಾಟಕದಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಮುಂದುವರೆಯಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆ ಮುಂದುವರೆಯಲಿದೆ.
Read Full Story
05:26 PM (IST) Sep 09

Karnataka News Live:ಸದ್ದಿಲ್ಲದೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಬಚ್ಚನ್, ದಿಢೀರ್ ಬೆಳವಣಿಗೆ ಏನು?

ನಟಿ ಐಶ್ವರ್ಯ ರೈ ದಿಢೀರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಐಶ್ವರ್ಯ ರೈ ಅರ್ಜಿ ವಿಚಾರಣೆ ನಡೆಸಿದೆ. ಅಷ್ಟಕ್ಕೂ ಐಶ್ವರ್ಯ ರೈ ಕೋರ್ಟ್ ಮೆಟ್ಟಿಲು ಹತ್ತಿದ್ದು ಯಾಕೆ?

Read Full Story
05:19 PM (IST) Sep 09

Karnataka News Live:ಕರ್ನಾಟಕದ ರಾಜಕೀಯದಿಂದ ಅಂತರ ಕಾಯ್ದುಕೊಂಡ ಹೈಕಮಾಂಡ್‌, ರಾಜ್ಯ ನಾಯಕರ ಭೇಟಿಗೆ ಅನುಮತಿ ನಿರಾಕರಣೆ

ಕರ್ನಾಟಕದಲ್ಲಿ ನಡೆಯುತ್ತಿರುವ ಪವರ್ ಪಾಲಿಟಿಕ್ಸ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ವಹಿಸಿದೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ನಾಯಕರ ದೆಹಲಿ ಭೇಟಿಗೆ ತಡೆ ಹಾಕಲಾಗಿದೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಹೈಕಮಾಂಡ್ ಸದ್ಯಕ್ಕೆ ತೆರೆ ಎಳೆದಿದೆ.
Read Full Story
05:09 PM (IST) Sep 09

Karnataka News Live:ಪುತ್ರನಿಗೆ ಸರ್ಜರಿ ಹಿನ್ನೆಲೆ ಜಾಮೀನುಕೋರಿ ವಿನಯ್‌ ಹೈಕೋರ್ಟ್‌ಗೆ, ಬೇಲ್‌ ಕೊಟ್ಟರೆ ಸಾಕ್ಷಿಗಳ ಮೇಲೆ ಪ್ರಭಾವ ಎಂದ ಸಿಬಿಐ

ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಶಾಸಕ ವಿನಯ್ ಕುಲಕರ್ಣಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಗನ ಶಸ್ತ್ರಚಿಕಿತ್ಸೆಗೆಂದು ಮೂರು ದಿನಗಳ ಜಾಮೀನು ಕೋರಿದ್ದು, ಸಿಬಿಐ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.
Read Full Story