07:01 AM (IST) Oct 06

Karnataka News Live 6 October 2026 ನೈಸ್‌ ರಸ್ತೆಗಾಗಿ ಕೆಐಎಡಿಬಿ ನಡೆಸಿದ್ದ ಜಾಗ ಸ್ವಾಧೀನ - ಹೈಕೋರ್ಟ್‌ ಆದೇಶಕ್ಕಿಲ್ಲ ತಡೆಯಾಜ್ಞೆ

ನೈಸ್ ರಸ್ತೆ ಯೋಜನೆಗಾಗಿ ಕೆಐಎಡಿಬಿ ನಡೆಸಿದ್ದ ಭೂಸ್ವಾಧೀನ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ನಿರ್ಧಾರವನ್ನು ಸ್ವಾಗತಿಸಿರುವ ಎಚ್.ಡಿ.ಕುಮಾರಸ್ವಾಮಿ, ರೈತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.

Read Full Story
06:59 AM (IST) Oct 06

Karnataka News Live 6 October 2026 Cabinet Meeting Today - ಹಾಲಿನ ದರ ಮತ್ತೆ ಏರಿಕೆ ಆಗುತ್ತಾ? ಇಂದಿನ ಸಂಪುಟ ಸಭೆಯಲ್ಲಿ ಫೈನಲ್?

KMF milk price hike Karnataka ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್‌ ಹಾಲಿನ ದರ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಇದರ ಜೊತೆಗೆ ಬೆಂಗಳೂರಿನಲ್ಲಿ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ ಸ್ಥಾಪನೆ, ಸೋಲಾರ್‌ ಅಳವಡಿಕೆಗೆ ಶೇ.50 ಸಬ್ಸಿಡಿ ನೀಡುವ ಕುರಿತು ಚರ್ಚೆ.

Read Full Story
06:52 AM (IST) Oct 06

Karnataka News Live 6 October 2026 ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ; ರೈತರಿಂದ ಇಂದು ಬಾಗಿನ ಅರ್ಪಣೆ!

ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ನೀರಿನಿಂದ ಕಡೂರು ತಾಲೂಕಿನ ಕುಕ್ಕಸಮುದ್ರ ಕೆರೆ ಕೋಡಿಬಿದ್ದಿದೆ. ಬರಗಾಲದಿಂದ ಕಂಗೆಟ್ಟಿದ್ದ ಬಯಲುಸೀಮೆ ರೈತರಿಗೆ ಇದು ಪುನರ್ಜನ್ಮ ನೀಡಿದ್ದು, ಸಂತಸಗೊಂಡ ರೈತರು ಕೆರೆಗೆ ಬಾಗಿನ ಅರ್ಪಿಸುತ್ತಿದ್ದಾರೆ.

Read Full Story