09:52 PM (IST) Aug 03

Karnataka News Live 3 August 2026 ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Read Full Story
09:37 PM (IST) Aug 03

Karnataka News Live 3 August 2026 'ಕರ್ಣಾಟಬಲಂ ಅಜೇಯಂ" ಚಿತ್ರಕ್ಕಾಗಿ ಬಾದಾಮಿಯಲ್ಲಿ ಸಹಸ್ರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೇಶ್ವರ್

ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟಬಲಂ ಅಜೇಯಂ' ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಧ್ಯಾನ್ ಸಹಸ್ರಾರು ಕಲಾವಿರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು ..' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

Read Full Story
09:09 PM (IST) Aug 03

Karnataka News Live 3 August 2026 ಕೊಪ್ಪಳಕ್ಕೆ ಇಬ್ಬರು ಸಚಿವರು - ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದ ಜನಾರ್ದನ ರೆಡ್ಡಿ

G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

Read Full Story
08:31 PM (IST) Aug 03

Karnataka News Live 3 August 2026 ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ - ಹುಸ್ಕೂರು ಸ್ಟೇಷನ್‌ ಬಳಿ ಮೊದಲ 'ಟಿ-ಗಿರ್ಡರ್' ಯಶಸ್ವಿ ಅಳವಡಿಕೆ!

ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 'ಕಾರಿಡಾರ್ 4' (ಕನಕ ಲೈನ್) ವ್ಯಾಪ್ತಿಯಲ್ಲಿ, ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಮೊದಲ 'ಟಿ-ಗಿರ್ಡರ್' ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.

Read Full Story
07:35 PM (IST) Aug 03

Karnataka News Live 3 August 2026 50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು - ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ

Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.

Read Full Story
07:33 PM (IST) Aug 03

Karnataka News Live 3 August 2026 ಕರ್ನಾಟಕ ಸಚಿವ ಸಂಪುಟ ವಿಸ್ತರಣೆ - ಯಾರ ಮೇಲೆ 19 ಹೊಸ ಸಚಿವರ ಪ್ರಮಾಣ; ಮಹಿಳೆಯರಿಲ್ಲದೆ 33ಕ್ಕೆ ಹಿಗ್ಗಿದ ಸಂಪುಟ ಗಾತ್ರ!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಗಮನಾರ್ಹ ಚರ್ಚೆಗೆ ಕಾರಣವಾಗಿದೆ.

Read Full Story
07:30 PM (IST) Aug 03

Karnataka News Live 3 August 2026 ಉಗ್ರನ ಗೆಳತಿ, ರಾಜಕಾರಣಿಗಳೇ ಟಾರ್ಗೆಟ್!​ ಯಾರೀ ಹನಿಟ್ರ್ಯಾಪ್​ ಸುಂದರಿ ಅರ್ಪಿತಾ? ಬೆಚ್ಚಿಬೀಳೋ ಸ್ಟೋರಿ

ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ ಅರ್ಪಿತಾ ಸರ್ಕಾರ್​ಳನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ಬಂಧಿಸಿದೆ. ಜೈಷ್​-ಎ-ಮೊಹಮ್ಮದ್​ ಉಗ್ರನೊಂದಿಗೆ ಸಂಬಂಧ ಹೊಂದಿದ್ದ ಈಕೆ, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡುವ ಸಂಚಿನ ಭಾಗವಾಗಿದ್ದಳು ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.
Read Full Story
07:06 PM (IST) Aug 03

Karnataka News Live 3 August 2026 ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

Read Full Story
06:43 PM (IST) Aug 03

Karnataka News Live 3 August 2026 ಬೆಂಗಳೂರಿನ ಕೆಂಗೇರಿ ಬಳಿಯ 530 ಎಕರೆ ಅರಣ್ಯ ಭೂಮಿ ಕಬಳಿಸುವ ಸಂಚಿಗೆ ಚೆಕ್‌ಮೆಟ್‌ ನೀಡಿದ ತಹಶೀಲ್ದಾರ್!

ಬೆಂಗಳೂರಿನ ಕೆಂಗೇರಿ ಬಳಿಯ 30,000 ಕೋಟಿ ರೂ. ಮೌಲ್ಯದ ಬಿ.ಎಂ ಕಾವಲ್ ಅರಣ್ಯ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆಸಿದ ಬೃಹತ್ ಸಂಚನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ವಿಫಲಗೊಳಿಸಿದ್ದಾರೆ.

Read Full Story
06:10 PM (IST) Aug 03

Karnataka News Live 3 August 2026 'ಅದೃಷ್ಟವು ನಮ್ಮ ಕೈಯಲ್ಲಿಲ್ಲ' ಎನ್ನುತ್ತಲೇ ಪತಿ ಜೊತೆ ಹೊಸ ಹೆಜ್ಜೆ ಇಟ್ಟ ನಟಿ ತಾರಾ - ಫೋಟೋಗಳು ವೈರಲ್​

ಹಿರಿಯ ನಟಿ ತಾರಾ ಅನುರಾಧ ಮತ್ತು ಪತಿ ಎಚ್‌.ಸಿ ವೇಣುಗೋಪಾಲ್ ಬೆಂಗಳೂರಿನ ಜೆಪಿ ನಗರದಲ್ಲಿ ತಮ್ಮ ಹಳೆಯ ಮನೆಯ ಜಾಗದಲ್ಲಿ ನೂತನ ಕಮರ್ಷಿಯಲ್‌ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಕಟ್ಟಡದ ಚಾವಣಿ ಹಾಕುವ ಮುನ್ನ ವಿಶೇಷ ಮೌಲ್ಡಿಂಗ್ ಪೂಜೆಯನ್ನು ನೆರವೇರಿಸಿದ್ದಾರೆ.
Read Full Story
05:33 PM (IST) Aug 03

Karnataka News Live 3 August 2026 ಒಂದು ರಾತ್ರಿಯಲ್ಲೇ ಹೆಣ್ಣಿನ ಬದುಕಿನ ಅನಾವರಣ - ಚರ್ಚೆಗೆ ಗ್ರಾಸವಾದ 'ಬ್ರಹ್ಮ ಕಮಲ' ಟ್ರೇಲರ್

Brahma Kamala Trailer: ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Read Full Story
05:20 PM (IST) Aug 03

Karnataka News Live 3 August 2026 ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 'ರಾಜರಥ' ಹೆಸರಿನ ನೂತನ ಐಷಾರಾಮಿ ಎಸಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್‌ಗಳು ಬೆಳಗಾವಿ-ಥಾಣೆ ಮತ್ತು ಚಿಕ್ಕೋಡಿ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿದ್ದು, ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿವೆ.
Read Full Story
05:08 PM (IST) Aug 03

Karnataka News Live 3 August 2026 ದುನಿಯಾ ವಿಜಯ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ - ದೊಡ್ಮನೆ ಕುಡಿಯ 'ಸಿಟಿ ಲೈಟ್ಸ್' ರಿಲೀಸ್ ಡೇಟ್ ಫಿಕ್ಸ್

City Lights Kannada Movie: ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ.

Read Full Story
04:49 PM (IST) Aug 03

Karnataka News Live 3 August 2026 ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ; ಸಹೋದರ ಕುಮಾರ್ ಬಂಗಾರಪ್ಪ ಅಚ್ಚರಿಕೆ ಹೇಳಿಕೆ

ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಸಹೋದರನ ಯಶಸ್ಸಿಗೆ ಅವರು ಹಾರೈಸಿದ್ದಾರೆ. ಆ ಕುರಿತಾದ ವರದಿ ಇಲ್ಲಿದೆ..

Read Full Story
04:48 PM (IST) Aug 03

Karnataka News Live 3 August 2026 ತಮ್ಮನ್ನೇ 'ಅಯೋಗ್ಯ' ಎಂದ ಅಭಿಷೇಕ್ ಅಂಬರೀಶ್ - ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್

ನಟ ಅಭಿಷೇಕ್ ಅಂಬರೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ಲುಕ್‌ನಿಂದಲ್ಲ. 'ಅಯೋಗ್ಯ 2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇಳಲಾದ..

Read Full Story
03:56 PM (IST) Aug 03

Karnataka News Live 3 August 2026 ಸಚಿವರ ಪಟ್ಟಿಯಲ್ಲಿದ್ದರೂ ಕೊನೇ ಕ್ಷಣದಲ್ಲಿ ಮಂಕಾಳ್‌ ವೈದ್ಯಗೆ ಕೈತಪ್ಪಿದ ಮಂತ್ರಿಗಿರಿ, ಕರಾವಳಿಯಲ್ಲಿ ಸಿಡಿದೆದ್ದ ಮೀನುಗಾರರ ಸಮುದಾಯ!

ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದ್ದು, ಇದನ್ನು ಎಐಸಿಸಿ 'ಟೈಪಿಂಗ್ ಮಿಸ್ಟೇಕ್' ಎಂದು ಸಮಜಾಯಿಷಿ ನೀಡಿದೆ.

Read Full Story
03:39 PM (IST) Aug 03

Karnataka News Live 3 August 2026 ಕದ್ದ ಚಿನ್ನ, ಹಣವನ್ನ ಮನೆಗೆ ಎಸೆದ ಕಳ್ಳರು.. ಅದರಲ್ಲಿತ್ತು ಒಂದು ಭಾವನಾತ್ಮಕ ಪತ್ರ!

ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Read Full Story
03:16 PM (IST) Aug 03

Karnataka News Live 3 August 2026 Karnataka Cabinet expansion today - ಶಾಸಕ ತನ್ವೀರ್‌ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಪ್ರತಿಭಟನೆ

ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರು ಹಾಗೂ ಮಂಡ್ಯದಲ್ಲಿ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Read Full Story
03:05 PM (IST) Aug 03

Karnataka News Live 3 August 2026 ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ - ಸುವರ್ಣ ನ್ಯೂಸ್‌ಗೆ ಬೇಳೂರು ಗೋಪಾಲಕೃಷ್ಣ ಅಧಿಕೃತ ಹೇಳಿಕೆ

ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಪ್ರಭಾವಿ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
Read Full Story
03:03 PM (IST) Aug 03

Karnataka News Live 3 August 2026 108 ವರ್ಷಗಳ ಇತಿಹಾಸದಲ್ಲೇ ಎರಡನೇ ಬಾರಿ.. ಅತ್ಯಂತ ಕೆಟ್ಟ ದಾಖಲೆಗೆ ಸಾಕ್ಷಿಯಾದ ಬೆಂಗಳೂರು

ಬೆಂಗಳೂರು 108 ವರ್ಷಗಳ ಇತಿಹಾಸದಲ್ಲಿ ಎರಡನೇ ಅತಿ ಒಣ ಜುಲೈಗೆ ಸಾಕ್ಷಿಯಾಗಿದೆ, ಕೇವಲ 23 ಮಿ.ಮೀ ಮಳೆ ದಾಖಲಾಗಿದೆ. ಇದರೊಂದಿಗೆ, 112 ವರ್ಷಗಳಲ್ಲೇ ಅತಿ ಹೆಚ್ಚು ಬಿಸಿಲು ಕೂಡ ದಾಖಲಾಗಿದ್ದು, ಜುಲೈ 14 ರಂದು ಗರಿಷ್ಠ 33.6°C ತಾಪಮಾನವಿತ್ತು. ಈ ಐತಿಹಾಸಿಕ ಹವಾಮಾನ ವೈಪರೀತ್ಯವು ನಗರದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
Read Full Story