ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಪೂರ್ತಿ ಓದಿKarnataka News Live 2nd April: ನನ್ನ ಗೆಲುವಿನಲ್ಲಿ ಯಡಿಯೂರಪ್ಪ ಶ್ರಮವಿದೆ: ಸಂಸದ ಗೋವಿಂದ ಕಾರಜೋಳ

ಬೆಂಗಳೂರು (ಮಾ.11): ಗ್ಯಾರಂಟಿ ಬಿಸಿಯನ್ನು ರಾಜ್ಯ ಸರ್ಕಾರ ಈಗ ನೇರವಾಗಿ ಜನರಿಗೆ ವರ್ಗಾವಣೆ ಮಾಡಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಜನರಿಂದಲೇ ತುಂಬಿಸುವ ನಿಟ್ಟಿನಲ್ಲಿ ಹಾಲು, ವಿದ್ಯುತ್, ಬಸ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಸುತ್ತಿನಲ್ಲಿ ಡೀಸೆಲ್ ದರವನ್ನು ಏರಿಕೆ ಮಾಡಿದೆ. ಖಜಾನೆಗೆ 2 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆಯಲ್ಲಿ ಡೀಸೆಲ್ ದರವನ್ನು ಇಂದಿನಿಂದಲೇ ಜಾರಿಗೆ ಬರುವಂತೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅದರೊಂದಗೆ ಎಂದಿನಂತೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಅಗ್ಗ ಎನ್ನುವ ಹಳೇ ಹೇಳಿಕೆಯನ್ನೇ ಸಮರ್ಥನೆಗೆ ಬಳಸಿಕೊಂಡಿದೆ.
ನನ್ನ ಗೆಲುವಿನಲ್ಲಿ ಯಡಿಯೂರಪ್ಪ ಶ್ರಮವಿದೆ: ಸಂಸದ ಗೋವಿಂದ ಕಾರಜೋಳ
ಚಿಕ್ಕಮಗಳೂರು ಹಸಿರ ಕಾನನದಲ್ಲಿ ರಕ್ತದೋಕುಳಿ! ಮೂರು ಕೊಲೆ, ಒಂದು ಆತ್ಮಹತ್ಯೆಗೆ ಕಾರಣವಾದ ಹೆಂಡತಿ!
ಚಿಕ್ಕಮಗಳೂರಿನಲ್ಲಿ ರತ್ನಾಕರ್ ಎಂಬಾತ ತನ್ನ ಅತ್ತೆ, ಮಗಳು ಮತ್ತು ನಾದಿನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹೆಂಡತಿ ಬಿಟ್ಟು ಹೋದ ನೋವಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೂರ್ತಿ ಓದಿಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಬೆಲೆ ಏರಿಕೆ: ಮಾಜಿ ಶಾಸಕ ಎಲ್.ನಾಗೇಂದ್ರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಬಿಜೆಪಿ ನಗರಾಧಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಕಿಡಿಕಾರಿದರು.
ರಂಜಾನ್ ಸಹಾಯಾರ್ಥ: ₹2.5 ಲಕ್ಷ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ 250 ಮಕ್ಕಳಿಗೆ ಕುಡಿಯುವ ನೀರು ಕೊಟ್ಟ ಶಿಕ್ಷಕಿಯರು!
ಚಿಕ್ಕಮಗಳೂರಿನ ಸರ್ಕಾರಿ ಶಾಲೆಯ ಶಿಕ್ಷಕಿಯರು ರಂಜಾನ್ ಹಬ್ಬದ ಸಂದರ್ಭದಲ್ಲಿ 2.5 ಲಕ್ಷ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ವಿದ್ಯಾರ್ಥಿಗಳ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಮೂರು ವರ್ಷಗಳಿಂದ ನೀರಿನ ತೊಂದರೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಶಿಕ್ಷಕಿಯರ ಈ ಕಾರ್ಯವು ಸಹಾಯವಾಗಿದೆ. ಇದಕ್ಕೂ ಶಾಲೆ ಮಕ್ಕಳು ಅನುಭವಿಸಿ ಸಂಕಷ್ಟ ಒಮ್ಮೆ ನೋಡಿ..
ಪೂರ್ತಿ ಓದಿಡೋನಾಲ್ಡ್ ಟ್ರಂಪ್ ಸರ್ಕಾರದಿಂದ ಶೀಘ್ರದಲ್ಲೇ ಎಲಾನ್ ಮಸ್ಕ್ ಹೊರಕ್ಕೆ?
ಡೋನಾಲ್ಡ್ ಟ್ರಂಪ್ ಸರ್ಕಾರದ DOGE ಹುದ್ದೆಯಲ್ಲಿದ್ದ ಆಪ್ತ ಎಲಾನ್ ಮಸ್ಕ್‌ಗೆ ಕೊಕ್ ನೀಡಲಾಗುತ್ತಿದೆಯಾ? ಹೌದು ಎನ್ನುತ್ತಿದೆ ಸರ್ಕಾರದ ಮೂಲಗಳು. ಕಾರಣವೇನು?
ಪೂರ್ತಿ ಓದಿಇ-ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ: ಎಚ್.ಡಿ.ರೇವಣ್ಣ ಕಿಡಿ
ಪುರಸಭೆ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ.
ಪೂರ್ತಿ ಓದಿಶ್ರೀಲಂಕಾದ ಸಮುದ್ರ ಪಾಲಾದ ಸೈಕೋ ಜಯಂತನ ಚಿನ್ನುಮರಿ! ಗಂಡನಿಗೆ ಬುದ್ಧಿ ಕಲಿಸದ ಜಾಹ್ನವಿ ಸಾವು ನ್ಯಾಯವೇ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡನ ಕಿರುಕುಳ ತಾಳಲಾರದೆ ಚಿನ್ನುಮರಿ ಸಮುದ್ರಕ್ಕೆ ಹಾರಿದ್ದಾಳೆ. ಆಕೆ ಬದುಕಿದ್ದಾಳೋ, ಸತ್ತಳೋ ಎಂಬುದು ತಿಳಿದಿಲ್ಲ. ಆದರೆ ಜಯಂತ್ ಹುಚ್ಚನಂತೆ ವರ್ತಿಸುತ್ತಿದ್ದಾನೆ.
ಪೂರ್ತಿ ಓದಿರತನ್ ಟಾಟಾ ಮುದ್ದಿನ ನಾಯಿ ಖರ್ಚಿಗೆ ಲಕ್ಷ ಲಕ್ಷ ರೂ, ವಿಲ್‌ನಲ್ಲಿ ಹೃದಯಶ್ರೀಮಂತಿಗೆ ಮೆರೆದ ಉದ್ಯಮಿ
ರತನ್ ಟಾಟಾ ಬಿಟ್ಟು ಹೋದ ಸುಮಾರು 3,800 ಕೋಟಿ ರೂಪಾಯಿ ಆಸ್ತಿಯನ್ನು ಯಾರಿಗೆಲ್ಲಾ ಹಂಚಿಕೆ ಮಾಡಿದ್ದಾರೆ ಅನ್ನೋ ವಿವರ ಹಲವರು ಕಣ್ಣಾಲಿ ತೇವಗೊಳಿಸಿದೆ. ಈ ಆಸ್ತಿಯ ಪಾಲಿನಲ್ಲಿ ರತನ್ ಟಾಟಾ ಮುದ್ದಿನ ನಾಯಿ ಟಿಟೂಗೆ ಲಕ್ಷ ಲಕ್ಷ ರೂಪಾಯಿ ತೆಗೆದಿಟ್ಟಿದ್ದಾರೆ. ಇದರ ತಿಂಗಳ ಖರ್ಚಿಗೆ ಎಷ್ಟು ರೂಪಾಯಿ ಇದೆ ಗೊತ್ತಾ?
ಪೂರ್ತಿ ಓದಿಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ: ನಟ ಚೇತನ್ ಅಹಿಂಸಾ
ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ. ಪ್ರಸ್ತುತ ಪರ್ಯಾಯವಾದ ರಾಜಕೀಯ ವ್ಯವಸ್ಥೆ ಕಟ್ಟುವ ಅವಶ್ಯಕತೆ ಇದೆ. ಸಮ ಸಮಾಜಕ್ಕಾಗಿ ರಾಜಕೀಯ ಚಳವಳಿ ಆರಂಭವಾಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ನಟ ಅಹಿಂಸಾ ಚೇತನ್ ತಿಳಿಸಿದರು.
ಧಾರವಾಡ ನೀರಾವರಿ ನಿಗಮದ ಇಂದುಮತಿ ಕಾಂಬಳೆ ಇನ್ನಿಲ್ಲ! ಬಸ್‌ನಲ್ಲಿ ಪ್ರಯಾಣಿಸುವಾಗ ಹಾರ್ಟ್ ಅಟ್ಯಾಕ್
ಧಾರವಾಡದಲ್ಲಿ ನೀರಾವರಿ ನಿಗಮದ ಇಂದುಮತಿ ಕಾಂಬಳೆ ಎಂಬ ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವರು ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಪೂರ್ತಿ ಓದಿಹನಿಟ್ರ್ಯಾಪ್ ಪ್ರಕರಣ.. ಯಾವ ತನಿಖೆ ಮಾಡುತ್ತಾರೋ ಮಾಡಲಿ: ಸಚಿವ ಕೆ.ಎನ್.ರಾಜಣ್ಣ
ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಕೊಡುತ್ತಾರೋ ಮತ್ತೊಂದು ಮಾಡುತ್ತಾರೋ ಮಾಡಲಿ. ಅದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಪೂರ್ತಿ ಓದಿಆರಂಭದಲ್ಲಿ ಆರ್‌ಸಿಬಿ ಸೈಲೆಂಟ್ ಬಳಿಕ ವೈಲೆಂಟ್, ಗುಜರಾತ್‌ಗೆ 169 ರನ್ ಟಾರ್ಗೆಟ್
ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ಆರಂಭದಲ್ಲಿ ಸೈಲೆಂಟ್ ಆಗಿದ್ದು ಬಳಿಕ ಅಬ್ಬರಿಸಿದೆ. ಈ ಮೂಲಕ 169 ರನ್ ಸಿಡಿಸಿದೆ. ಇದೀಗ ಈ ಅಲ್ಪ ಟಾರ್ಗೆಟನ್ನು ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ?
ಪೂರ್ತಿ ಓದಿಶಾಸಕ ಯತ್ನಾಳ ಬಗ್ಗೆ ಹೈಕಮಾಂಡ್‌ನಿಂದ ಸಕಾಲದಲ್ಲಿ ತೀರ್ಮಾನ: ಬಿ.ಶ್ರೀರಾಮುಲು
ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಪೂರ್ತಿ ಓದಿಶಾಸಕ ಯತ್ನಾಳ್ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ: ಬಿ.ವೈ.ವಿಜಯೇಂದ್ರ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಳ ಫ್ರೀಯಾಗಿದ್ದಾರೆ. ಅವರು ಏನೇ ಆರೋಪ ಮಾಡಲಿ, ದಾಳಿ ಮಾಡಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪೂರ್ತಿ ಓದಿರೈತರ ಬಹುದಿನಗಳ ಕನಸು ನನಸು: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕಳೆದ 25 ವರ್ಷಗಳಿಂದ ಈ ಭಾಗದ ರೈತರು ನೀರಾವರಿ ಯೋಜನೆಗಳ ಬಗ್ಗೆ ಅತೀ ಆಶಯ ಹೊಂದಿದ್ದರು. ಅದರಂತೆಯೇ ಈಗ ಅವರ ಆಶಯ ಈಡೇರಿದ್ದು, ಸತ್ತಿಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರುವ ಮೂಲಕ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪೂರ್ತಿ ಓದಿಮಂಗಳೂರು ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ, 17 ಆರೋಪಿಗಳು ಖುಲಾಸೆ!
ಮಂಗಳೂರಿನ ಅತ್ತಾವರದಲ್ಲಿ 2022ರಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣದ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರೂ, ಪ್ರಮುಖ ಸಾಕ್ಷಿಗಳು ಹಾಜರಾಗದ ಕಾರಣ ಆರೋಪಿಗಳು ಖುಲಾಸೆಯಾಗಿದ್ದಾರೆ.
ಪೂರ್ತಿ ಓದಿಈ ಫೋಟೋದಲ್ಲಿರುವ ಬಿಗ್ ಬಾಸ್ ವಿನ್ನರ್ ಯಾರು? ಚಾಣಾಕ್ಷರಾಗಿದ್ದರೆ 5 ಸೆಕೆಂಡ್‌ನಲ್ಲಿ ಗೆಸ್ ಮಾಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಎಐ ಘಿಬ್ಲಿ ಇಮೇಜ್‌ನಲ್ಲಿರುವ ವ್ಯಕ್ತಿ ಕನ್ನಡ ಕಿರುತೆರೆಯ ಬಿಗ್ ಬಾಸ್ ವಿನ್ನರ್ ಯಾರೆಂದು ಗೆಸ್ ಮಾಡಿ..
ಪೂರ್ತಿ ಓದಿನಟಿ ರನ್ಯಾ ರಾವ್ ಚಿನ್ನದ ಕೇಸ್, ಬಂಧಿತ ಸಾಹಿಲ್ ಜೈನ್‌ಗೆ ನ್ಯಾಂಯಾಂಗ ಬಂಧನ
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಹಿಲ್ ಜೈನ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರನ್ಯಾ ಚಿನ್ನ ಸಾಗಣೆಗೆ ಸಹಾಯ ಮಾಡಿದ್ದ ಆರೋಪ ಸಾಹಿಲ್ ಮೇಲಿದೆ.
ಪೂರ್ತಿ ಓದಿಕಾಂಗ್ರೆಸ್ನಿಂದ ಅಲ್ಪಸಂಖ್ಯಾತರ ತುಷ್ಟೀಕರಣ: ಮಾಜಿ ಸಂಸದ ಎಸ್.ಮುನಿಸ್ವಾಮಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಮುಸ್ಲಿಮರ ತುಷ್ಟೀಕರಣ, ಹಾಲು, ವಿದ್ಯುತ್, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಪೂರ್ತಿ ಓದಿಶಾಸಕ ಯತ್ನಾಳ್ ಕಾಂಗ್ರೆಸ್‌ಗೆ ಸೂಟ್ ಆಗಲ್ಲ: ಸಚಿವ ಸತೀಶ್ ಜಾರಕಿಹೊಳಿ
ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವುದು ಶುದ್ಧ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೇ ಸೂಟ್ ಆಗುತ್ತದೆ.
ಪೂರ್ತಿ ಓದಿ