ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಹೆಸರು ಬಹಿರಂಗವಾಗಿದೆ. ಚಿತ್ರತಂಡ ಹೆಸರಿನ ಟೀಸರ್ ಬಿಡುಗಡೆ ಮಾಡಿದೆ. ಮ್ಯಾಕ್ಸ್ ಭಾಗ 2 ಎಂದೇ ಅಭಿಮಾನಿಗಳು ಚರ್ಚಿಸುತ್ತಿದ್ದ ಬೆನ್ನಲ್ಲೇ ಸಿನಿಮಾ ಹೆಸರು ಮಾರ್ಕ್ ಎಂದು ಬಹಿರಂಗಗೊಂಡಿದೆ.
- Home
- News
- State
- Karnataka News Live: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಹುಟ್ಟುಹಬ್ಬದ ಉಡುಗೊರೆ, 47ನೇ ಸಿನಿಮಾ ಮಾರ್ಕ್ ಟೀಸರ್ ಬಿಡುಗಡೆ
Karnataka News Live: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಹುಟ್ಟುಹಬ್ಬದ ಉಡುಗೊರೆ, 47ನೇ ಸಿನಿಮಾ ಮಾರ್ಕ್ ಟೀಸರ್ ಬಿಡುಗಡೆ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆ.1ರಿಂದ ಟೋಲ್ ದರ ಏರಿಕೆಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ರು. ದರ ಏರಿಕೆಯಾಗಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್ಗಳಲ್ಲಿ ದರ ಎರಿಕೆಯಾಗಲಿದ್ದು, ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿಯ-75ರ ಟೋಲ್ ಮೂಲಕ ಸಂಚರಿಸುವ ಹಾಗೂ ವಾಹನ ಸವಾರರಿಗೆ ಬರೆ ಬಿದ್ದಿದೆ. ದೊಡ್ಡಕರೇನಹಳ್ಳಿ ಟೋಲ್ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದೆ. 2023ರ ದರ ಏರಿಕೆ ಸಂದರ್ಭದಲ್ಲಿ ಕಾರುಗಳಿಗೆ ಒಂದು ದಿಕ್ಕಿನ ಪ್ರಯಾಣಕ್ಕೆ ಸುಮಾರು 10-20 ರು. ಏರಿಕೆಯಾಗಿತ್ತು.
Karnataka News Live 1st September 2025ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಹುಟ್ಟುಹಬ್ಬದ ಉಡುಗೊರೆ, 47ನೇ ಸಿನಿಮಾ ಮಾರ್ಕ್ ಟೀಸರ್ ಬಿಡುಗಡೆ
Karnataka News Live 1st September 2025ಗಣೇಶ ವಿಸರ್ಜನೆ ವೇಳೆ ಕುಣಿಯುತ್ತಲೇ ಕುಸಿದುಬಿದ್ದು 3 ಜನರ ಸಾವು; ಹೃದಯಬಡಿತ ನಿಲ್ಲಿಸಿದ ಡಿಜೆ ಸೌಂಡ್!
ಗಣೇಶ ವಿಸರ್ಜನಾ ಸಂದರ್ಭದಲ್ಲಿ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ಮೂವರು ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಈ ಘಟನೆಗಳು ನಡೆದಿವೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ವಿವರ ಇಲ್ಲಿದೆ ನೋಡಿ..
Karnataka News Live 1st September 2025ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ರಿಷಿಕ್ ರೆಡ್ಡಿಗೆ 2ನೇ ಸ್ಥಾನ
ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಮುಂಬೈನ ಕಿಯಾನ್ ಶಾ ಗೆಲುವು ಸಾಧಿಸಿದ್ದರೆ,ಬೆಂಗಳೂರಿನ ರಿಷಿಕ್ ರೆಡ್ಡಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
Karnataka News Live 1st September 2025ಪೋಸ್ಟ್ ಅಫೀಸ್, ಐಟಿಆರ್, ಬೆಳ್ಳಿ ಸೇರಿ ಸೆಪ್ಟೆಂಬರ್ 1 ರಿಂದ ಯಾವೆಲ್ಲಾ ನಿಯಮ ಬದಲು?
Karnataka News Live 1st September 2025ನನ್ನ ರಾಜ್ಯಕ್ಕಾಗಿ ಶ್ರಮವಹಿಸಿ ದುಡಿಯುತ್ತೇನೆ, ತಂದೆಗೆ ನೀಡಿದ ಮಾತು ನೆನಪಿಸಿ ರಾಜೀವ್ ಚಂದ್ರಶೇಖರ್
ನಮ್ಮ ಊರನ್ನ ಸರಿಮಾಡಬೇಕು ರಾಜೀವ್, ಹೀಗಾಗಿ ನೀನು ಅಲ್ಲಿಗೆ ಹೋಗಬೇಕು. ಅದು ದೊಡ್ಡ ಜವಾಬ್ದಾರಿ. ನಮ್ಮ ಊರಲ್ಲಿ ಏನೂ ಆಗ್ತಿಲ್ಲ ಎಂದು ಅಪ್ಪ ಹೇಳಿದ್ದರು. ಅಪ್ಪನಿಗೆ ಕೊಟ್ಟ ಮಾತಿನಂತೆ ನನ್ನ ರಾಜ್ಯದಲ್ಲಿ ಅಭಿವೃದ್ಧಿ ಬದಲಾವಣೆ ತರುತ್ತೇನೆ ಎಂದು ಮಾಜಿ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Karnataka News Live 1st September 2025'ಬುರುಡೆ' ಉಲ್ಟಾ ಹೊಡೆಯುತ್ತಿದ್ದಂತೆ ಒಡನಾಡಿಯ ಸ್ಟಾನ್ಲಿಯಿಂದ ಸೌಜನ್ಯ ದಾಳ - ಸೂಲಿಬೆಲೆ
ಭಾರಿ ಪ್ಲಾನ್ ಮಾಡಿದ್ದ ಬುರುಡೆ ಪ್ರಕರಣ ಉಲ್ಟಾ ಆಗಿದೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯ ಪ್ರಕರಣದಲ್ಲಿ ಹೊಸ ದಾಳ ಉರುಳಿಸಿದೆ.
Karnataka News Live 1st September 2025ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ 'ಶಾಕುಂತಲೆ' ಕರೆದುಕೊಂಡು ಬಂದ ಸರ್ಕಾರ!
ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ತಮನ್ನಾ ಆಯ್ಕೆ ವಿವಾದದ ನಂತರ, ಕನ್ನಡ ನಟಿ ಐಶಾನಿ ಶೆಟ್ಟಿ ಅವರನ್ನು ಹೊಸ ರಾಯಭಾರಿಯನ್ನಾಗಿ ಆಯ್ಕೆ ಮಾಡಿದಂತಾಗಿದೆ. ಹಬ್ಬದ ಋತುವಿನಲ್ಲಿ ಉಡುಗೊರೆಗಳಿಗಾಗಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ಐಶಾನಿ ಕಾಣಿಸಿಕೊಂಡಿದ್ದಾರೆ.
Karnataka News Live 1st September 202524ರ ಯುವಕನ ಪ್ರಾಣಕ್ಕೆ ಕುತ್ತು ತಂದ ಗಣೇಶ ವಿಸರ್ಜನೆ ಡಿಜೆ ಸೌಂಡ್, ಡ್ಯಾನ್ಸ್ ಮಾಡುತ್ತಲೇ ಸಾವು
ಗಣೇಶ ವಿಸರ್ಜನೆ ವೇಳೆಯಲ್ಲಿ ಹಾಕಿದ್ದ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ 24ರ ಹರೆಯದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
Karnataka News Live 1st September 2025ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚು ಕಾಲ ಬದುಕೋದ್ಯಾಕೆ? ಇಲ್ಲಿವೆ ನೋಡಿ ಕಾರಣ!
ಜಗತ್ತಿನಾದ್ಯಂತ ನಡೆದಿರೋ ಸಂಶೋಧನೆಗಳ ಪ್ರಕಾರ ಹೆಣ್ಣುಮಕ್ಕಳ ಸರಾಸರಿ ಆಯಸ್ಸು ಗಂಡಸರಿಗಿಂತ ಜಾಸ್ತಿ ಅಂತ ಗೊತ್ತಾಗಿದೆ. ಗಂಡಸರು ದಷ್ಟಪುಷ್ಟವಾಗಿದ್ರೂ, ಬಲಿಷ್ಠರಾಗಿದ್ರೂ, ಆಯಸ್ಸಿನ ವಿಷಯದಲ್ಲಿ ಹೆಣ್ಣುಮಕ್ಕಳೇ ಮುಂದೆ. ಇದಕ್ಕೆ ಕಾರಣಗಳೇನು ಅಂತ ನೋಡೋಣ.
Karnataka News Live 1st September 20256 ತಿಂಗಳ ಹಿಂದೆ ಉಳಿದುಕೊಂಡಿದ್ದ ಉಜಿರೆ ಹಳ್ಳಿಮನೆ ಹೊಟೆಲ್‌ನಲ್ಲಿ ಚಿನ್ನಯ್ಯನ ಮಹಜರು
ಉಜಿರೆಯ ಹಳ್ಳಿ ಮನೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದ ಚಿನ್ನಯ್ಯ. ಹೀಗಾಗಿ ಹೊಟೆಲ್‌ನಲ್ಲಿ ಎಸ್ಐಟಿ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಸಲಾಗಿದೆ. ಇದರೊಂದಿಗೆ ಹೊಟೆಲ್‌ನಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
Karnataka News Live 1st September 2025'ಯು ನೋ ಕನ್ನಡ' ಎಂದ ಸಿದ್ದರಾಮಯ್ಯಗೆ 'ನಂಗೆ ಎಲ್ಲ ಭಾಷೆಗಳೂ ಇಷ್ಟ, ಕನ್ನಡವೂ ಅರ್ಥವಾಗುತ್ತೆಂದ' ರಾಷ್ಟ್ರಪತಿ!
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ನಡುವೆ ನಡೆದ ಹಾಸ್ಯಮಯ ಭಾಷಾ ಜುಗಲ್‌ಬಂದಿ ನಡೆಯಿತು. ಸಿಎಂ ಅವರು ರಾಷ್ಟ್ರಪತಿಯವರಿಗೆ 'ಯು ನೋ ಕನ್ನಡ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿಯವರು 'ನನಗೆ ಎಲ್ಲ ಭಾಷೆಯೂ ಇಷ್ಟ, ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ' ಎಂದರು.
Karnataka News Live 1st September 2025SCO ಶೃಂಗಸಭೆಯಲ್ಲಿ 3 ರಾಷ್ಟ್ರಕ್ಕೆ ಮೋದಿ 3 ಸಿಗ್ನಲ್ - ಟ್ರಂಪ್‌ಗೆ ಸಂದೇಶ, ಚೀನಾ ನೆನಪಿಸಿ ಪಾಕ್‌ಗೆ ಎಚ್ಚರಿಕೆ
SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾಡಿದ ಒಂದು ಭಾಷಣದಲ್ಲಿ ಮೂರು ರಾಷ್ಟ್ರಕ್ಕೆ ಮೂರು ಸಿಗ್ನಲ್ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂದೇಶ ರವಾನಿಸಿದ್ದರೆ, ಚೀನಾಗೆ ಕೆಲ ಘಟನೆಗಳನ್ನು ನೆನಪು ಮಾಡಿಕೊಟ್ಟಿದ್ದಾರೆ. ಇತ್ತ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
Karnataka News Live 1st September 2025Director S S David - ಅನಾಥ ಶವವಾದ ಪೊಲೀಸ್ ಸ್ಟೋರಿ,ಅಗ್ನಿ ಐಪಿಎಸ್ ಕಥೆಗಾರ, ಮಣ್ಣು ಮಾಡಲು ಕೂಡ ಯಾರೂ ಇಲ್ಲ!
Karnataka News Live 1st September 2025BJP ನಾಯಕರ ಧರ್ಮಸ್ಥಳ ಚಲೋ - ಬುರುಡೆ ಗ್ಯಾಂಗ್ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಲಿ, ಸೌಜನ್ಯಗೂ ನ್ಯಾಯ ಸಿಗಲಿ!
ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ವಿರೋಧ ಮತ್ತು ಬುರುಡೆ ಗ್ಯಾಂಗ್ ಷಡ್ಯಂತ್ರದ ತನಿಖೆಯನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು 'ಧರ್ಮಸ್ಥಳ ಚಲೋ' ಸಮಾವೇಶದಲ್ಲಿ ಒಕ್ಕೂರಲ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ, ಸೌಜನ್ಯಾ ಕೇಸಿನ ತನಿಖೆಯನ್ನೂ ಸ್ವಾಗತ ಕೋರಿದರು.
Karnataka News Live 1st September 202514 ವರ್ಷ ಬ್ಯಾಂಕಿಂಗ್ ಅನುಭವ ಕೆಲಸ ಇಲ್ಲದೆ ಬೆಂಗಳೂರು ಸಿಗ್ನಲ್‌ನಲ್ಲಿ ಭಿಕ್ಷುಕನಾದ! ಕ್ಯಾಬ್ ಡ್ರೈವರ್ ಆಗಲು ಸಲಹೆ ಕೊಟ್ಟ ನೆಟ್ಟಿಗರು
ಬೆಂಗಳೂರಿನ ಸಿಗ್ನಲ್‌ನಲ್ಲಿ 14 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿರುವ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಮಾಜದ ವೈಫಲ್ಯವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ ಎಂಬ ಚರ್ಚೆಗೆ ಕಾರಣವಾಗಿದೆ.
Karnataka News Live 1st September 2025ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಮಗು ತೆಗೆಸಿದ ಮಹಿಳೆ ಸಾವು!
ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ಶಶಿ ಎಸ್.ಎಲ್. ಅವರನ್ನು ಭ್ರೂಣ ಲಿಂಗ ಪತ್ತೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಭ್ರೂಣ ಲಿಂಗ ಪತ್ತೆ ನಂತರ ಭ್ರೂಣ ಹತ್ಯೆ ಮಾಡಿರುವುದು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ತೆಗೆಸಿದ್ದು, ಸರ್ಕಾರಿ ವೈದ್ಯೆ ಪಾತ್ರ ಬೆಳಕಿಗೆ ಬಂದಿದೆ.
Karnataka News Live 1st September 2025ಗೆಳೆಯನ ಜೊತೆಗಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್‌ಸ್ಟೇಬಲ್ ಪತಿ, ವಿಡಿಯೋ
ಗೆಳೆಯನ ಜೊತೆ ಆಪ್ತ ಸಮಯ ಕಳೆಯುತ್ತಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
Karnataka News Live 1st September 2025ಕುದುರೆಮುಖ ಟೌನ್‌ಷಿಪ್ ಇನ್ನು ನೆನಪು ಮಾತ್ರ, ಭಾರೀ ನಿರ್ಧಾರ ಮಾಡಿದ KIOCL
ಕಾರ್ಯಗತಗೊಳಿಸುವ ಪ್ರಯತ್ನದಲ್ಲಿ, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಟೌನ್‌ಶಿಪ್ ಸೇರಿದಂತೆ 282 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ನಿರ್ಧಾರ ಮಾಡಿದೆ.
Karnataka News Live 1st September 2025ಬಾಗೇಪಲ್ಲಿಯಲ್ಲಿ ಉಚಿತ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ; ಆರೋಗ್ಯ ಸೇವೆಯ ಹೊಸ ಅಧ್ಯಾಯ!
ಬಾಗೇಪಲ್ಲಿಯಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು ಸದ್ಗುರು ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಇದು ಮುದ್ದೇನಹಳ್ಳಿಯ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ವಿಸ್ತರಣೆ ಆಗಿದ್ದು, 2 ಲಕ್ಷ ಜನರಿಗೆ ಅನುಕೂಲವಾಗಲಿದೆ.
Karnataka News Live 1st September 2025ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಘನಘೋರ; ಹವಾಮಾನ ಇಲಾಖೆಯಿಂದ ಭೂಕುಸಿತ, ಪ್ರವಾಹ ಎಚ್ಚರಿಕೆ
ಸೆಪ್ಟೆಂಬರ್ ತಿಂಗಳಲ್ಲಿ ಅತೀ ಗರಿಷ್ಠ ಮಳೆ ದಾಖಲಾಗಲಿದೆ. ಭಾರಿ ಮಳೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅವಘಡಗಳ ಸಾಧ್ಯತೆ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.