ಗೆಳೆಯನ ಜೊತೆ ಆಪ್ತ ಸಮಯ ಕಳೆಯುತ್ತಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಖುಷಿನಗರ (ಸೆ.01) ಪತಿ ಹಾಗೂ ಪತ್ನಿ ಇಬ್ಬರೂ ಪೊಲೀಸ್. ಆದರೆ ಕೊನೆಗೆ ಕಾನ್ಸ್‌ಸ್ಟೇಬಲ್ ಪತಿ ತನ್ನ ಪೊಲೀಸ್ ಪತ್ನಿಯನ್ನೇ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ. ಪೊಲೀಸ್ ಪತ್ನಿ ಗೆಳೆಯನ ಜೊತೆ ಆಪ್ತ ಸಮಯ ಕಳೆಯುತ್ತಿರುವ ಮಾಹಿತಿ ಕಾನ್ಸ್‌ಸ್ಟೇಬಲ್ ಪತಿಗೆ ಸಿಕ್ಕಿದೆ. ಕಳೆದ ಹಲವು ದಿನಗಳಿಂದ ಕಾನ್ಸ್‌ಸ್ಟೇಬಲ್ ಸೈಲೆಂಟ್ ಆಗಿ ಪತ್ನಿಯನ್ನು ಫಾಲೋ ಮಾಡಿದ್ದಾನೆ. ಕೊನೆಗೆ ಇಬ್ಬರು ಆಪ್ತ ಸಮಯ ಕಳೆಯುತ್ತಿರುವಾಗಲೇ ಕಾನ್ಸ್‌ಸ್ಟೇಬಲ್ ಪತಿ, ಪೊಲೀಸರ ಜೊತೆ ಎಂಟ್ರಿಕೊಟ್ಟಿದ್ದಾನೆ. ರೆಡ್ ಹ್ಯಾಂಡ್ ಆಗಿ ಪೊಲೀಸ್ ಪತ್ನಿಯನ್ನು ಹಿಡಿದಿದ್ದಾನೆ. ಪೊಲೀಸ್ ಪತ್ನಿಯ ಗೆಳೆಯನ ಹಿಡಿದು ಗೂಸಾ ನೀಡಿದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.
ಪೊಲೀಸ್ ಇಲಾಖೆ ಕೊಟ್ಟಿದ್ದ ಬಾಡಿಗೆ ಮನೆಯಲ್ಲಿ ಚಕ್ಕಂದ
ಪತಿ ಹಾಗೂ ಪತ್ನಿ ಇಬ್ಬರೂ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಪೇದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರದ್ದೂ ಬೇರೆ ಬೇರೆ ಶಿಫ್ಟ್. ಬೇರೆ ಬೇರೆ ಸಮಯದಲ್ಲಿ ಕರ್ತವ್ಯ ನಿಭಾಯಿಸುತ್ತಾರೆ. ಇವರಿಬ್ಬರಿಗೆ ಪೊಲೀಸ್ ಇಲಾಖೆ ಪೊಲೀಸ್ ಬ್ಲಾಕ್‌ನಲ್ಲಿ ಬಾಡಿಗೆ ಮನೆ ನೀಡಿತ್ತು. ಸಂಸಾರ ಸಾಗಿತ್ತು. ಇದರ ನಡುವೆ ಪೊಲೀಸ್ ಪತ್ನಿಗೆ ಇಲಾಖೆಯ ಪೊಲೀಸ್ ಅಧಿಕಾರಿ ಜೊತೆ ಆಪ್ತತೆ ಬೆಳೆದಿದೆ. ಈ ಕುರಿತು ಆರಂಭದಲ್ಲೇ ಹಲವು ಸೂಚನೆ ಸಿಕ್ಕರೂ ಕಾನ್ಸ್‌ಸ್ಟೇಬಲ್ ಪತಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದು ಗಾಳಿ ಸುದ್ದಿ ಆಗಿರುವ ಸಾಧ್ಯತೆ ಇದೆ ಎಂದು ಸುಮ್ಮನಾಗಿದ್ದ. ಆದರೆ ಕೆಲ ದಿನಗಳಲ್ಲೇ ಪತ್ನಿಯ ನಡೆಯಲ್ಲಿ ಅನುಮಾನಗಳು ಮೂಡತೊಡಗಿದೆ. ಹೀಗಾಗಿ ಕಾನ್ಸ್‌ಸ್ಟೇಬಲ್ ಪತಿ ಸದ್ದಿಲ್ಲದೆ ಪತ್ನಿಯನ್ನು ಹಿಂಬಾಲಿಸಿದ್ದ.
ಕಾನ್ಸ್‌ಸ್ಟೇಬಲ್ ಪತಿ ಮನೆಯಲ್ಲಿ ಇಲ್ಲದಾಗ ಸರಸ
ಕಾನ್ಸ್‌ಸ್ಟೇಬಲ್ ಪತಿ ಮನೆಯಲ್ಲಿ ಇಲ್ಲದಾಗ, ಪೊಲೀಸ್ ಪತ್ನಿ ನೇರವಾಗಿ ಪೊಲೀಸ್ ಅಧಿಕಾರಿಗೆ ಕರೆ ಮಾಡುತ್ತಿದ್ದರು. ಇತ್ತ ಇದೇ ಪೊಲೀಸ್ ಅಧಿಕಾರಿ ಠಾಣೆಯಲ್ಲಿ ಕಾನ್ಸ್‌ಸ್ಟೇಬಲ್ ಪತಿಗೆ ಒಂದು ನಿಮಿಷವೂ ಠಾಣೆಯಿಂದ ಹೊರಹೋಗಲು ಸಮಯವೇ ಇಲ್ಲದಂತೆ ಡ್ಯೂಟಿ ಹಾಕುತ್ತಿದ್ದರು. ಬಳಿಕ ನೇರವಾಗಿ ಇದೇ ಕಾನ್ಸ್‌ಸ್ಟೇಬಲ್ ಪತ್ನಿ ಮನೆಗೆ ಆಗಮಿಸುತ್ತಿದ್ದರು. ಕೆಲ ಹೊತ್ತ ಜೊತೆಯಲ್ಲೇ ಕಳೆದು ಎಸ್ಕೇಪ್ ಆಗುತ್ತಿದ್ದ ಅಧಿಕಾರಿ ಕುರಿತು ಕಾನ್ಸ್‌ಸ್ಟೇಬಲ್ ಪತಿಗೆ ಮಾಹಿತಿ ಸಿಕ್ಕಿತ್ತು.
ಮದುವೆಯಾದ್ರೂ ಮಹಿಳೆಯರು, ಪುರುಷರು ಅಫೇರ್ ಇಟ್ಕೋಳ್ಳೋದು ಇದೇ ಕಾರಣಕ್ಕೆ!
ಮನೆಗೆ ದಿಢೀರ್ ಎಂಟ್ರಿಕೊಟ್ಟ ಕಾನ್ಸ್‌ಸ್ಟೇಬಲ್ ಪತಿ
ಕಾನ್ಸ್‌ಸ್ಟೇಬಲ್ ಪತಿ ದಿಢೀರ್ ಆಗಿ ಮನೆಗೆ ವಾಪಸ್ಸಾಗಿದ್ದ. ಇವರಿಬ್ಬರು ಮನೆಯ ಕೋಣೆಯೊಳಗಿದ್ದರು. ಹೊರಗಿನಿಂದ ಬಾಗಿಲುಗೆ ಬೀಗ ಹಾಕಿ ಯುಪಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಇತ್ತ ಪೊಲೀಸರು ಆಗಮಿಸಿದ್ದಾರೆ. ಬಳಿಕ ಪತ್ನಿಗೂ ಗೂಸಾ ಹಾಗೂ ಆಕೆಯ ಜೊತೆಗಿದ್ದ ಪೊಲೀಸ್ ಅಧಿಕಾರಿಗೂ ಗೂಸ ನೀಡಿದ ಘಟನೆ ನಡೆದಿದೆ. ಈ ಕುರಿತು ದೂರು ಕೂಡ ದಾಖಲಾಗಿದೆ.
