ಉಜಿರೆಯ ಹಳ್ಳಿ ಮನೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದ ಚಿನ್ನಯ್ಯ. ಹೀಗಾಗಿ ಹೊಟೆಲ್‌ನಲ್ಲಿ ಎಸ್ಐಟಿ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಸಲಾಗಿದೆ. ಇದರೊಂದಿಗೆ ಹೊಟೆಲ್‌ನಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಧರ್ಮಸ್ಥಳ (ಸೆ.01) ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ದೂರುದಾರನಾಗಿ ಬಂದ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನ ಅರೆಸ್ಟ್ ಮಾಡಿರುವ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ವಿಚಾರಣೆ ಜೊತೆಗೆ ಚಿನ್ನಯ್ಯನ ಕರೆದುಕೊಂಡು ಸ್ಥಳ ಮಹಜರು ನಡೆಸಲಾಗುತ್ತಿದೆ. ಬೆಂಗಳೂರು, ಮಹೇಶ್ ಶೆಟ್ಟಿ ತಿಮರೋಡಿ ಮನೆ, ಜಯಂತ್ ಟಿ ಮನೆಯಲ್ಲೂ ಸ್ಥಳ ಮಹಜರು ನಡೆಸಲಾಗಿತ್ತು. ಇದೀಗ ಉಜಿರೆಯ ಹಳ್ಳಿ ಮನೆ ಹೊಟೆಲ್‌ನಲ್ಲಿ ಚಿನ್ನಯ್ಯನ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಚಿನ್ನಯ್ಯನ ಕರೆದುಕೊಂಡು ಉಜಿರೆಯಲ್ಲಿರುವ ಹಳ್ಳಿ ಮನೆ ಹೊಟೆಲ್‌ನಲ್ಲಿ ಸ್ಥಳ ಮಹಜರು ನಡೆಸಲಾಗಿದೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು

ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿನ್ನಯ್ಯನ ಕರೆತಂದ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ವಿಚಾರಣೆ ವೇಳೆ ಚಿನ್ನಯ್ಯ 6 ತಿಂಗಳ ಹಿಂದೆ ಹಳ್ಳಿ ಮನೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದಾಗಿ ಹೇಳಿದ್ದ. ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ ಮನೆ ಹೊಟೆಲ್‌ನಲ್ಲಿ ಚಿನ್ನಯ್ಯನಿಗೆ ವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಹಳ್ಳಿ ಮನೆ ಹೊಟೆಲ್‌ನಲ್ಲಿ ಸ್ಥಳ ಮಹಜರು ಮಾಡಲಾಗಿದೆ.

ಬುರುಡೆ ಕೇಸ್; ಮಹಜರು ಬೆನ್ನಲ್ಲೇ ಎಸ್ಐಟಿ ಅಸಲಿ ಆಟ ಈಗ ಶುರು!

ಜಯಂತ್ ಟಿ ಮನೆಯಲ್ಲಿ ಬುರುಡೆ ಪ್ಲಾನ್

ಹಳ್ಳಿ ಮನೆ ಹೊಟೆಲ್ ಮುಂಭಾಗದಲ್ಲಿ ಚಿನ್ನಯ್ಯನ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಹೊಟೆಲ್ ಒಳಭಾಗಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಇತ್ತೀಚೆಗೆ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಮನೆಗೆ ತೆರಳಿ ಮಹಜರು ನಡೆಸಲಾಗಿತ್ತು. ಚಿನ್ನಯ್ಯ ಕೋರ್ಟ್‌ಗೆ ತಂದಿದ್ದ ಬುರುಡೆಯನ್ನು ಮೊದಲಿಗೆ ಇದೇ ಜಯಂತ್ ಮನೆಯಲ್ಲಿ ತಂದು ಪ್ಲಾನ್ ಮಾಡಲಾಗಿತ್ತು ಅನ್ನೋದು ತನಿಖೆ ವೇಳೆ ಬಯಲಾಗಿತ್ತು.

ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೂ ನಡೆದಿತ್ತು ದಾಳಿ

ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಸರ್ಚ್ ವಾರೆಂಟ್ ಪಡೆದು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೇಲೆ ದಾಳಿ ಮಾಡಿದ ಅದಿಕಾರಿಗಳು ಹಲವು ಸಾಕ್ಷ್ಯ ಸಂಗ್ರಹಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಉಳಿದುಕೊಂಡಿದ್ದ ಕೋಣೆ, ಚಿನ್ನಯ್ಯನ ಎರಡು ಮೊಬೈಲ್ ಫೋನ್ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಎಸ್‌ಐಟಿ ಕಲೆ ಹಾಕಿತ್ತು. ಮಹೇಶ್ ಶೆಟ್ಟಿ ತಿಮರೋಡಿ ಮನೆ ಹಾಗೂ ತೋಟದಲ್ಲೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಮಹೇಶ್ ಶೆಟ್ಟಿ ಮನೆಯಲ್ಲಿ ಮೂರು ತಲ್ವಾರ್ ಕೂಡ ವಶಕ್ಕೆ ಪಡೆಯಲಾಗಿತ್ತು.

ಧರ್ಮಸ್ಥಳ ವಿರುದ್ದ ಗಂಭೀರ ಆರೋಪ ಮಾಡಿದ ಬುರುಡೆ ಗ್ಯಾಂಗ್ ಇದೀಗ ಬಂಧನ ಭೀತಿಯಲ್ಲಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿದಂತೆ ಬುರುಡೆ ಗ್ಯಾಂಗ್ ಸದಸ್ಯರು ವಿಚಾರಣೆ ಎದುರಿಸುತ್ತಿದ್ದಾರೆ. ಎಸ್ಐಟಿ ಕೆಲವರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ.