ಭಾರಿ ಪ್ಲಾನ್ ಮಾಡಿದ್ದ ಬುರುಡೆ ಪ್ರಕರಣ ಉಲ್ಟಾ ಆಗಿದೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯ ಪ್ರಕರಣದಲ್ಲಿ ಹೊಸ ದಾಳ ಉರುಳಿಸಿದೆ.

ಧರ್ಮಸ್ಥಳ (ಸೆ.01) ಧರ್ಮಸ್ಥಳ ವಿರುದ್ಧ ಸಮೀರ್ ಮುಲ್ಲಾ ಎಂಬಾ ಯುವಕ ಸುಳ್ಳನ್ನೇ ಹೆಣೆದ ವಿಡಿಯೋ ಮಾಡಿದ್ದ. ಈ ವಿಡಿಯೋವನ್ನು ಒಂದೂವರೆ ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ಮೊಹಮ್ಮದ್ ಘಜ್ನಿ ಕಾಲದಿಂದಲೂ ಆಗಿದೆ. ಈಗ ಸ್ವರೂಪ ಬದಲಾಗಿದೆ. ನಮ್ಮ ಧರ್ಮ ರಕ್ಷಣೆಗೆ ನಾವೇ ನಿಲ್ಲಬೇಕು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲೆಬೆಲೆ ಹೇಳಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ತಡೆಯಲು ಹಾಗೂ ಅಪಪ್ರಚಾರದ ವಿರುದ್ಧ ಧರ್ಮಕ್ಷೇತ್ರ ಉಳಿಸೋಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಕ್ರವರ್ತಿ ಸೂಲೆಬೆಲೆ, ಧರ್ಮಕ್ಷೇತ್ರದ ಉಳಿವಿಗೆ ಕರೆ ನೀಡಿದ್ದಾರೆ.

ಧರ್ಮಸ್ಥಳವನ್ನು ಗ್ರಾಮಸ್ಥರು ಕ್ಷೇತ್ರ ಎಂದು ಕರೆಯುತ್ತಾರೆ

ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಹಲವು ಗುಂಡಿ ತೋಡಿದರೂ ಒಂದು ಗುಂಡಿಯಲ್ಲಿ ಮೂಳೆ, ಮತ್ತೊಂದು ಅಸ್ಥಿಪಂಜರ ಸಿಕ್ಕಿದೆ. ಧರ್ಮಸ್ಥಳದಿಂದ ಸಾಕಷ್ಟು ಜನರಿಗೆ ನೆರವಾಗಿದೆ. ಪ್ರತಿ ದಿನ ಅನ್ನದಾನ ನಡೆಯುತ್ತಿದೆ. ರಾಜಕಾರಣಿ ಏನಾದರೂ ಕೊಟ್ಟರೆ ಅವರಪ್ಪನ ಮನೆಯಿಂದ ಕೊಡ್ತಾರಾ, ಕೊಡಲಿ ಬಿಡು ಎಂದು ಜನರು ಹೇಳುತ್ತಾರೆ. ಆದರ ದೇವಸ್ಥಾನದಲ್ಲಿ ಪ್ರಸಾದ ಎಂದು ನಾವು ಸ್ವೀಕರಿಸುತ್ತೇವೆ. ಧರ್ಮಸ್ಥಳವನ್ನು ಅಲ್ಲಿನ ಗ್ರಾಮಸ್ಥರು ಕ್ಷೇತ್ರ ಎಂದು ಕರೆಯುತ್ತಾರೆ. ಅದು ಗೌರವ ಹಾಗೂ ಭಕ್ತಿಯ ಸಂಕೇತ. ಅಷ್ಟೊಂದು ಶ್ರೇಷ್ಠ ಕ್ಷೇತ್ರ ಅದು ಎಂದು ಸೂಲಿಬೆಲೆ ಹೇಳಿದ್ದಾರೆ.

ಸೌಜನ್ಯ ಪ್ರಕರಣ ಮುಂದಿಟ್ಟು ಅಪಪ್ರಚಾರ

ಈ ನಾಡಿನ ಕೇಂದ್ರ ಬಿಂದು ನಮ್ಮ ಮಂದಿರಗಳು, ಗುಡಿಗಳು. ಒಂದೊಂದು ಕ್ಷೇತ್ರವನ್ನು ಟಾರ್ಗೆಟ್ ಮಾಡಲಾಗುತ್ತದೆ. ಸದ್ಗುರು, ರವಿಶಂಕರ್ ಗುರೂಜಿ ಮೇಲೆ ಷಡ್ಯಂತ್ರಗಳು ನಡೆಯಿತು. ಇದೀಗ ಧರ್ಮಸ್ಥಳದ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಸೌಜನ್ಯ ಕಾಣೆಯಾದಾಗ ವಿರೇಂದ್ರ ಹೆಗ್ಗಡೆಯವರ ಬಳಿ ಕುಟುಂಬಸ್ಥರು ಬಂದು ಮಾಹಿತಿ ನೀಡುತ್ತಾರೆ. ಈ ವೇಳೆ ವಿರೇಂದ್ರ ಹಗ್ಗಡೆ ಪೊಲೀಸರಿಗೆ ಈ ಕುರಿತು ತಕ್ಷಣ ಕಾರ್ಯಪ್ರವೃತ್ತವಾಗುವಂತೆ ಪೊಲೀಸರಿಗೆ ಮನವಿ ಮಾಡುತ್ತಾರೆ. ಸೌಜನ್ಯ ಮೃತದೇಹ ಪತ್ತೆಯಾದಾಗ ಘನಘೋರ ಘಚನೆ ಬೆಳಕಿಗೆ ಬರುತ್ತದೆ. ಈ ವೇಳೆ ತನಿಖೆಗೆ ಹೆಗ್ಗಡೆಯವರು ಒತ್ತಾಯಿಸುತ್ತಾರೆ. ಸೌಜನ್ಯ ಕೊಲೆ ಆರೋಪಿಗೆ ಫೆಮೋಸಿಸಿ ಆರೋಗ್ಯ ಸಮಸ್ಯೆ ಇತ್ತು.ಸೌಜನ್ಯ ಘಟನೆ ನಡೆದಾಗ ನಿಶ್ಚಲ್ ಜೈನ್ ವಿದೇಶದಲ್ಲಿದ್ದರು. ನಿಶ್ಚಲ್ ಜೈನ್ ಗೆ ಮಂಪರು ಪರೀಕ್ಷೆ ಸಹ ಮಾಡಿಸಿಕೊಂಡಿದ್ದಾರೆ. ವರದಿಯನ್ನ ಕೋರ್ಟ್ ಗೆ ಕೊಟ್ಟಿದ್ದಾರೆ.ಆದರೂ ಕೆಲವರು ಅವರನ್ನ ಅಪರಾಧಿ ಎಂದು ಕರೆಯುತ್ತಾರೆ ಎಂದು ಸೂಲಿಬೆಲೆ ಹೇಳಿದ್ದಾರೆ.

ಧರ್ಮಸ್ಥಳ ವಿರುದ್ದ ಅಪಪ್ರಚಾರದಲ್ಲಿ ಒಡನಾಡಿ ಸಂಸ್ಥೆಯ ಪಾಲು

ವಿರೇಂದ್ರ ಹೆಗೆಡೆ ಕನಸು ಕಾಣುವುದನ್ನ ಅವರ ಸಹೋದರ ನನಸು ಮಾಡುತ್ತಾರೆ. ವಿರೇಂದ್ರ ಹೆಗೆಡೆ ಏನೇ ಹೇಳಿದ್ರು ಚಾಚು ತಪ್ಪದೆ ಅವರ ಸಹೋದರ ಮಾಡುತ್ತಾರೆ. ನಾನು ಕೂಡ ಅವರ ಬಗ್ಗೆ ತಪ್ಪು ಕಲ್ಪನೆ ಇಟ್ಟಿಕೊಂಡಿದೆ. ಆತ್ಮೀಯರು ಹೇಳಿದ ಮೇಲೆ ವಿರೇಂದ್ರ ಹೆಗೆಡೆ ಸಹೋದರರ ಮೇಲೆ ಇದ್ದ ಅನುಮಾನಗಳು ನಿವಾರಣೆ ಆಯ್ತು ಎಂದು ಸೂಲಿಬೆಲೆ ಹೇಳಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಕಪಾಳಕ್ಕೆ ಹೊಡೆಯಬೇಕು. ಒಡನಾಡಿ ಸಂಸ್ಥೆ ಮೈಸೂರಿನಲ್ಲಿ ಮಾತ್ರ ಇಲ್ಲ. ಇದು ಹಲವು ದೇಶಗಳಲ್ಲಿ ಇದೆ. ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದಲ್ಲಿ ಇವರ ಪಾತ್ರ ಸಹ ಇದೆ. ಸ್ಟ್ಯಾನ್ಲಿ ಧರ್ಮಸ್ಥಳಕ್ಕೆ ಹೋಗಿ ಅಪಪ್ರಚಾರ ಮಾಡಿದ್ದಾನೆ. ಸ್ಟ್ಯಾನ್ಲಿಗು ಧರ್ಮಸ್ಥಳಕ್ಕು ಏನು ಸಂಬಂಧ. ಬುರುಡೆ ಪ್ರಕರಣವನ್ನ ಮರೆ ಮಾಚಲು ಸೌಜನ್ಯ ಪ್ರಕರಣ ಮುನ್ನಲ್ಲಗೆ ತಂದಿದ್ದಾರೆ ಎಂದು ಸೂಲಿಬೆಲೆ ಹೇಳಿದ್ದಾರೆ.

ಸೌಜನ್ಯ ಅಪಹರಿಸಿರುವ ಬಗ್ಗೆ ಮಹಿಳೆಯನ್ನ ಕರೆದುಕೊಂಡು ಬಂದಿದ್ದಾರೆ. ಒಡೆನಾಡಿ ಹಿಂದೆ ಸಂಸದ ಸಸಿಕಾಂಥ್ ಸೆಂಥಿಲ್ ಇದ್ದಾರೆ ಎಂದು ಸೂಲಿಬೆಲೆ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸುತ್ತ ಲೆಫ್ಟಿಸ್ಟ್ ತಂಡದ ಕೈವಾಡ

ಎಸ್ಡಿಪಿಐ ಸರ್ಕಾರದ ಮೇಲೆ ಒತ್ತಡ ಹೇರಿದೆ. ಒಂದು ಕಡೆ ಸ್ಟ್ಯಾನ್ಲಿ ಮತ್ತೊಂದು ಕಡೆ ಎಸ್ಡಿಪಿಐ ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸುತ್ತ ಇರುವ ಲೆಫ್ಟಿಸ್ಟ್ ಟೀಂ ಈ ಪ್ರಕರಣದ ಹಿಂದೆ ಇದೆ. ಗೃಹ ಸಚಿವರು ಗುಂಡಿ ತೋಡಿದ ಜಾಗದಲ್ಲಿ ಅಸಿಡಿಕ್ ಮಣ್ಣು ಇದೆ. ಹೀಗಾಗಿ ಪರೀಕ್ಷೆ ಮಾಡಬೇಕು ಎಂದು ಹೇಳಿದ್ದಾರೆ. ಇದು ಹಾಸ್ಯಸ್ಪದ ಹೇಳಿಕೆ ಎಂದು ಸೂಲಿಬೆಲೆ ಹೇಳಿದ್ದಾರೆ.

ಧರ್ಮಸ್ಥಳದವರು ಲೇವಾದೇವಿ ಮಾಡುತ್ತಿದ್ದಾರೆ ಎಂದು ಮಟ್ಟಣ್ಣನವರ್ ಹೇಳಿದ. ಅವರಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಸಹಾಯ ಸಾಲದಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಒಬ್ಬ ಮುಸ್ಲಿಂ ಯುವಕ ಫೋನ್ ಮಾಡಿದ ಹೇಳಿದ.ನಮ್ಮ ಧರ್ಮದ ಬಗ್ಗೆ ಅಪಪ್ರಚಾರ ಮಾಡಿದ್ರೆ ಅಡ್ಡಡ್ಡ ಸೀಳು ಬಿಡುತ್ತಿದ್ದೇವು ಎಂದು, ಆದರೆ ಯಾಕೆ ಹಿಂದೂಗಳ ಮೌನವಾಗಿದ್ದಾರೆ ಎಂದು ಕೇಳಿದ. ಧರ್ಮಸ್ಥಳ 70 ಸಾವಿರ ಜನರಿಗೆ ಸ್ಕಾಲರ್ಶಿಪ್ ನೀಡುತ್ತಿದೆ. ಧರ್ಮಸ್ಥಳ ಫೈಲ್ಸ್ ಮಾಡುವವರು ಬುರುಡೆ ಬಗ್ಗೆ ಮಾಡಿ. ಸದ್ಯ ಸಿಕ್ಕಿರುವ ಬುರುಡೆ ಬಗ್ಗೆ ದೊಡ್ಡ ತನಿಖೆ ಮಾಡಬೇಕು. ಆ ಬುರುಡೆ ದೆಹಲಿಯಲ್ಲ ಓಡಾಡಿಕೊಂಡಿದೆ. ಆ ಬುರುಡೆ ಮುಸಲ್ಮಾನ ವ್ಯಕ್ತಿದು ಅಗಿದ್ರೆ ಏನಾಗುತ್ತೆ ಯೋಚನೆ ಮಾಡಿ ಎಂದು ಸೂಲಿಬೆಲೆ ಹೇಳಿದ್ದಾರೆ.