ಸೆಪ್ಟೆಂಬರ್ ತಿಂಗಳಲ್ಲಿ ಅತೀ ಗರಿಷ್ಠ ಮಳೆ ದಾಖಲಾಗಲಿದೆ. ಭಾರಿ ಮಳೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅವಘಡಗಳ ಸಾಧ್ಯತೆ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ನವದೆಹಲಿ (ಸೆ.01) ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಮಳೆ ಜೋರಾಗುತ್ತಿದೆ. ಉತ್ತರ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಉತ್ತರಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂಕುಸಿತ, ಪ್ರವಾಹಕ್ಕೆ ಜನ ತತ್ತರಿಸಿದ್ದಾರೆ. ಸಾವು ನೋವುಗಳು ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ದಕ್ಷಿಣದ ರಾಜ್ಯಗಳಲ್ಲೂ ಪ್ರವಾಹ, ಭೂಕುಸಿತ ಸಂಭವಿಸಿದೆ. ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್‌ನಲ್ಲಿ ಶೇಕಡಾ 109ರಷ್ಟು ಮಳೆಯಾಗಲಿದೆ. ಇಷ್ಟೇ ಅಲ್ಲ ಭೂಕುಸಿತ, ಪ್ರವಾಹ ಪರಿಸ್ಥಿತಿಗಳು ಎದುರಾಗಲಿದೆ ಎಂದು ಎಚ್ಚರಿಸಿದೆ.

ಮುಂಜಾಗ್ರತೆ ವಹಿಸಲು ಹವಾಮಾನ ಇಲಾಖೆ ಎಚ್ಚರಿಕೆ

ಭಾರತದ ಹಲವು ರಾಜ್ಯಗಳು ಮುನ್ನಚ್ಚೆರಿಕೆ ವಹಿಸಲು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಸೆಪ್ಟೆಂಬರ್ ತಿಂಗಳು ಸಂಪೂರ್ಣ ಹಾಗೂ ಅಕ್ಟೋಬರ್ ತಿಂಗಳ ಆರಂಭದ ವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ದೆಹಲಿ, ಹಿಮಾಲಾಯ ಪ್ರದೇಶ ಸೇರಿದಂತೆ ಆಗ್ನೇಯ ರಾಜ್ಯಗಳು, ಉತ್ತರ ಭಾರತದ ರಾಜ್ಯಗಳು ಅತೀವ ಜಾಗೃತೆ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ರಾಜ್ಯಗಳು ಸುರಕ್ಷಿತ ಎಂದಲ್ಲ, ಹಲವು ರಾಜ್ಯಗಳಲ್ಲಿ ವಿಪರೀತ ಮಳೆ, ಇತರ ರಾಜ್ಯಗಳಲ್ಲಿನ ಬಾರಿ ಮಳೆ, ಜಲಾಶಯಗಳು ಭರ್ತಿಯಾಗುವ ಕಾರಣ ಪ್ರವಾಹ, ಭೂಕುಸಿತ ಸಂಭವ ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ.

ಆಗಸ್ಟ್ ತಿಂಗಳಲ್ಲಿ ದಾಖಲೆ ಮಳೆ

ಆಗಸ್ಟ್ ತಿಂಗಳಲ್ಲಿ ದಾಳೆಯ ಮಳೆಯಾಗಿದೆ. ಬಹುತೇಕ ರಾಜ್ಯಗಳು ಭಾರಿ ಮಳೆಗೆ ತತ್ತರಿಸಿ ಹೋಗಿದೆ. ಆಗಸ್ಟ್ ತಿಂಗಳಲ್ಲಿ ನಾರ್ತ್‌ವೆಸ್ಟ್ ರಾಜ್ಯಗಳಲ್ಲಿ 265ಎಂಎಂ ಮಳೆಯಾಗಿದೆ. ಇದು ಕಳೆದ 23 ವರ್ಷಗಳಲ್ಲೇ ಅತೀ ಹೆಚ್ಚು. 1901ರಿಂದ ಇಲ್ಲೀವರಗೆ 13 ಬಾರಿ ಈ ರೀತಿ ವಿಪರೀತ ಮಳೆಯಾಗಿದೆ. ಇನ್ನು ಆಗಸ್ಟ್ ತಿಂಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ 2001ರ ಬಳಿಕ 3ನೇ ಬಾರಿಗೆ ಅತೀ ಹೆಚ್ಚು ಮಳೆಯಾಗಿದೆ.

ಜೂನ್ 1 ರಿಂದ 743.1 ಎಂಎಂ ಮಳೆ

ಜೂನ್ 1 ರಿಂದ ಇಲ್ಲೀವರೆಗೆ ಭಾರತದಲ್ಲಿ 743.1 ಎಂಎಂ ಮಳೆಯಾಗಿದೆ. ಇದು ಮಳೆಗಾರದಲ್ಲಿ ಆಗುವ ಒಟ್ಟು ಮಳೆಯ ಶೇಕಡಾ ಶೇಕಡಾ 6ರಷ್ಟು ಹೆಚ್ಚು. ಕೇವಲ ಮೂರು ತಿಂಗಳಲ್ಲಿ ಎಲ್ಲಾ ದಾಖಲೆ ಪುಡಿ ಮಾಡಿದೆ.

ನಾರ್ತ್‌ವೆಸ್ಟ್ ರಾಜ್ಯಗಳಲ್ಲಿ ಶೇಕಡಾ 26.7 ರಷ್ಟು ಹೆಚ್ಚುವರಿ ಮಳೆ

ಕೇಂದ್ರ ಭಾರತದಲ್ಲಿ ಶೇಕಡಾ 8.6ಕ್ಕೂ ಹೆಚ್ಚು ಮಳೆ

ದಶ್ರಿಣ ಭಾರತದ ರಾಜ್ಯಗಳಲ್ಲಿ ಶೇಕಡಾ 9.3ಕ್ಕಿಂತ ಹೆಚ್ಚು ಮಳೆ

ಪೂರ್ವ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಶೇಕಡಾ 18 ರಷ್ಟು ಮಳೆ ಕಡಿಮೆಯಾಗಿದೆ

ಒಂದೇ ದಿನ ದಾಖಲೆಯ ಮಳೆ

ಆಗಸ್ಟ್ 27 ರಂದು ಜಮ್ಮು ಮತ್ತು ಕಾಶ್ಮೀರದ ಉಧಮಪುರ 630 ಎಂಎಂ ಮಳೆ

ಮಹಾರಾಷ್ಟ್ರದ ರಾಯ್‌ಘಡದಲ್ಲಿ ಆಗಸ್ಟ್ 20 ರಂದು 440ಎಂಎಂ ಮಳೆ

ಮಹಾರಾಷ್ಟ್ರದ ಪರ್ವತ ಶ್ರೇಣಿ ಪ್ರದೇಶದಲ್ಲಿ 570 ಎಂಎಂ ಮಳೆಯಾಗಿದೆ