ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ ಅನ್ನೋ ಸುದ್ದಿ ಎಲ್ಲೆಡೆ ಹರಿಡಾದ ಬೆನ್ನಲ್ಲೇ ಇದೀಗ ಕೈಲಾಸ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ನಿತ್ಯಾನಂದ ಸಕ್ರಿಯವಾಗಿದ್ದಾರೆ, ಆರೋಗ್ಯವಾಗಿದ್ದಾರೆ. ಆದರೆ ಈ ರೀತಿ ಅವಮಾನಿಸವು ಕೆಲಸವನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದೆ. ಆದರೆ ಈ ಸ್ಪಷ್ಟನೆ ಇದೀಗ ಮತ್ತಷ್ಟು ಅನುಮಾನ ಹೆಚ್ಚಿಸಿದೆ.
- Home
- News
- State
- Karnataka News Live 1st April 2025 : ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ
Karnataka News Live 1st April 2025 : ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.2ರಂದು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಲು ಅನುವಾಗುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ವಿಧಾನಪರಿಷತ್ ಸ್ಥಾನಾಕಾಂಕ್ಷಿಗಳ ಲಾಬಿ ಮೇರೆ ಮೀರಿದೆ. ಲಭ್ಯವಿರುವ ನಾಲ್ಕು ಸ್ಥಾನಗಳಿಗೆ 40ಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸಿದ್ದಾರೆ. ವಿವಿಧ ಕ್ಷೇತ್ರದ ಸಾಧಕರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಲು ನಾಲ್ಕು ಸ್ಥಾನ ಲಭ್ಯವಿದೆ. ಸಿ.ಪಿ.ಯೋಗಶ್ವರ್ (ಒಕ್ಕಲಿಗ), ಪ್ರಕಾಶ್ ರಾಠೋಡ್ (ಎಸ್ಸಿ), ಕೆ.ಎಂ.ತಿಪ್ಪೇಸ್ವಾಮಿ (ಹಿಂದುಳಿದ) ಹಾಗೂ ಯು.ಬಿ. ವೆಂಕಟೇಶ್ (ಬ್ರಾಹ್ಮಣ) ಅವರ ಅವಧಿ ಪೂರ್ಣಗೊಂಡ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿವು. ಕಾಂಗ್ರೆಸ್ ನಾಯಕತ್ವ ಈ ಸ್ನಾನಗಳನ್ನು ಬಹುತೇಕ ಯಾವ ಸಮುದಾಯದಿಂದ ತೆರವಾಗಿದೆಯೋ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದಾಗಿ ಒಕ್ಕಲಿಗ, ಎಸ್ಸಿ (ಬಲಗೈ), ಹಿಂದುಳಿದ ವರ್ಗ ಹಾಗೂ ಬ್ರಾಹ್ಮಣಸಮುದಾಯಕ್ಕೆ ಈ ಸ್ಥಾನ ಲಭ್ಯವಾಗಬೇಕು. ಆದರೆ, ಬ್ರಾಹ್ಮಣ ಸಮುದಾಯದ ಬದಲಾಗಿ ಅಲ್ಪಸಂಖ್ಯಾತ ಸಮುದಾಯ ವಿಶೇಷವಾಗಿ, ಕ್ರಿಶ್ಚಿಯನ್ ಸಮುದಾಯಕ್ಕೆ ಆ ಸ್ಥಾನ ನೀಡಬಹುದೇ ಎಂಬ ಚಿಂತನೆಯೂ ಇದೆ ಎನ್ನಲಾಗಿದೆ.
ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ
Lakshmi Nivasa Serial: ಸಮುದ್ರಕ್ಕೆ ಹಾರಿದ ಜಾನು ಪಾತ್ರ ಮುಗೀತಾ? ಪಾತ್ರಧಾರಿ ಬದಲಾಗ್ತಿದ್ದಾರಾ?
Lakshmi Nivasa Serial Episode: ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಸಮುದ್ರಕ್ಕೆ ಹಾರಿದ್ದಾಳೆ. ಹಾಗಾದರೆ ಈ ಪಾತ್ರದ ಕಥೆ ಏನು? ಪಾತ್ರ ಬದಲಾಗತ್ತಾ? ಏನು ಕಥೆ?
ಪೂರ್ತಿ ಓದಿಎಲಾನ್ ಮಸ್ಕ್ ಸ್ಪೆಸ್ ಎಕ್ಸ್ ಹೂಡಿಕೆದಾರನಿಂದ 5,160 ಕೋಟಿಗೆ ಹಲ್ದಿರಾಮ್ ಪಾಲು ಖರೀದಿ
ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರನಿಂದ ಇದೀಗ ಭಾರತದ ಜನಪ್ರಿಯ ಬ್ರ್ಯಾಂಡ್ ಹಲ್ದಿರಾಮ್‌ನ ಶೇಕಡಾ 6ರಷ್ಟು ಪಾಲು ಖರೀದಿಸಿದೆ.
ಅಂಬಾನಿಯ 15 ಸಾವಿರ ಕೋಟಿಯ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಎಷ್ಟಿತ್ತು?
ಮುಕೇಶ್ ಅಂಬಾನಿ ನೀತಾ ಅಂಬಾನಿಯ ವಿಶ್ವದ ಅತೀ ದುಬಾರಿ ಮನೆ ಆ್ಯಂಟಿಲಿಯಾ ಹಲವು ಕೌತುಗಳ ಆಗರ. ಇದೀಗ ಇದೇ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಮಾಹಿತಿ ಬಹಿರಂಗವಾಗಿದೆ. ಇದು 2010ರ ಎಲೆಕ್ಟ್ರಿಸಿಟಿ ಬಿಲ್. ಈ ಮೊತ್ತ ಒಬ್ಬ ಸರಾಸರಿ ವ್ಯಕ್ತಿ 30 ವರ್ಷದ ದುಡಿಗೆ ಸಮ.
ಪೂರ್ತಿ ಓದಿಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ
ಡೆಡ್‌ಲೈನ್, ಟಾರ್ಗೆಟ್, ಸ್ಯಾಲರಿ ಹೈಕ್, ಬೆಸ್ಟ್ ಎಂಪ್ಲಾಯ್, ಕಮಿಟ್‌ಮೆಂಟ್, ಹೀಗೆ ಕೆಲಸದಲ್ಲೇ ತಲ್ಲೀನರಾಗುವ ವೃತ್ತಿಪರರಿಗೆ ಬೆಂಗಳೂರು ಮೂಲದ ಕಂಪನಿಯ ಸಿಇಒ ಇದೀಗ ಆಸ್ಪತ್ರೆಯ ಐಸಿಯುವಿನಿಂದ ಮಹತ್ವದ ಸಂದೇಶ ನೀಡಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಬೇರೊಬ್ಬರ ಹಣ ಬಂದರೆ ಖರ್ಚು ಮಾಡಬಹುದೇ? ಹಣ ಡ್ರಾ ಮಾಡಿದರೆ ಏನಾಗುತ್ತೆ?
ನಿಮ್ಮ ಖಾತೆಗೆ ತಪ್ಪಾಗಿ ಲಕ್ಷಾಂತರ ಹಣ ಬಂದರೆ ಏನು ಮಾಡಬೇಕು? ಅದನ್ನು ಖರ್ಚು ಮಾಡಿದರೆ ಏನಾಗುತ್ತದೆ? ಈ ಬಗ್ಗೆ ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ತಿಳಿಯಿರಿ.
ಪೂರ್ತಿ ಓದಿರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್; ಇಂದಿನಿಂದಲೇ ಡೀಸೆಲ್ ಬೆಲೆ ಹೆಚ್ಚಳ
ಕರ್ನಾಟಕ ಜನತೆ ಇದೀಗ ಅಕ್ಷರಶಃ ನಲುಗಿ ಹೋಗಿದ್ದಾರೆ. ಪ್ರತಿ ದಿನ ಒಂದಲ್ಲಾ ಒಂದು ಬೆಲೆ ಏರಿಕೆಯಾಗುತ್ತಿದೆ. ಹಾಲು, ವಿದ್ಯುತ್ ಸೇರಿದಂತೆ ಹಲವು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ.
ಪೂರ್ತಿ ಓದಿಇದು ಭರ್ಜರಿ ಸುದ್ದಿ, EPFO Auto Claim Settlement ಮಿತಿ 5 ಲಕ್ಷಕ್ಕೆ ಏರಿಕೆ!
ಸರ್ಕಾರವು ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆಟೋ-ಸೆಟಲ್ಮೆಂಟ್ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದ ಇಪಿಎಫ್‌ಒದ 7.5 ಕೋಟಿಗೂ ಹೆಚ್ಚು ಸದಸ್ಯರಿಗೆ ಅನುಕೂಲವಾಗಲಿದೆ. ಈ ನಿರ್ಧಾರವನ್ನು ಕೇಂದ್ರ ಟ್ರಸ್ಟಿಗಳ ಮಂಡಳಿಗೆ ಸಲ್ಲಿಕೆ ಮಾಡಲಾಗುತ್ತದೆ.
ಪೂರ್ತಿ ಓದಿಕದ್ದು ಮುಚ್ಚಿ ವ್ಯಾಟ್ಸಾಪ್ ಖಾತೆ ನೋಡಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ
ಕದ್ದು ಮುಚ್ಚಿ ಪತಿಯ ವ್ಯಾಟ್ಸಾಪ್ ಖಾತೆ ತೆರೆದು ನೋಡಿದ್ದಾಳೆ. ಮೆಸೇಜ್, ಫೋಟೋ, ವಿಡಿಯೋ ನೋಡಿ ಪತ್ನಿ ಆಘಾತಗೊಂಡಿದ್ದಾಳೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಪತಿಯನ್ನು ಜೈಲಿಗಟ್ಟುವಲ್ಲೂ ಯಶಸ್ವಿಯಾಗಿದ್ದಾಳೆ. ಅಷ್ಟಕ್ಕೂ ಪತಿ ವ್ಯಾಟ್ಸಾಪ್ನಲ್ಲಿ ಏನಿತ್ತು?
12 ಲಕ್ಷ ಸರ್ಕಾರಿ ನೌಕರರಿಗೆ 2% ಡಿಎ ಹೆಚ್ಚಳ, ಆದ್ರೂ ನೌಕರರು ಖುಷಿಯಾಗಿಲ್ಲ!
ರಾಜಸ್ಥಾನದ ಭಜನ್ ಲಾಲ್ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. 2% ಡಿಎ ಹೆಚ್ಚಳ ಮಾಡಿದ್ದು, ಈಗ ಡಿಎ 55%ಕ್ಕೆ ಏರಿಕೆಯಾಗಿದೆ. ಆದರೆ, ನೌಕರರು ಮಾತ್ರ ಖುಷಿಯಾಗಿಲ್ಲ.
ಪೂರ್ತಿ ಓದಿಕನ್ನಡಿಗರಿಗೆ ಕುಡಿಯಲು ನೀರಿಲ್ಲ, ಕೃಷ್ಣ-ಭೀಮಾ ನದಿಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿದ್ದರಾಮಯ್ಯ!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೃಷ್ಣಾ ನದಿಗೆ 2 ಟಿಎಂಸಿ ಹಾಗೂ ಭೀಮಾ ನದಿಗೆ 1 ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.
ಪೂರ್ತಿ ಓದಿಇತಿಹಾಸದ ಪುಟಗಳಲ್ಲಿ ಮರೆಯಾದ ವಿಷ್ಯಗಳ ಬಗ್ಗೆ ತಿಳಿಯಲು ಕರ್ನಾಟಕದ ಐತಿಹಾಸಿಕ ಗ್ರಂಥಾಲಯಗಳ ಪಟ್ಟಿ ಇಲ್ಲಿದೆ
ಕರ್ನಾಟಕವು ಹಲವಾರು ಐತಿಹಾಸಿಕ ಮತ್ತು ಪ್ರಮುಖ ಗ್ರಂಥಾಲಯಗಳನ್ನು ಹೊಂದಿದೆ. ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಿಂದ ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯದವರೆಗೆ, ಈ ಗ್ರಂಥಾಲಯಗಳು ಜ್ಞಾನ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಪೂರ್ತಿ ಓದಿಕೆಂಪೇಗೌಡ ವಿಮಾನ ನಿಲ್ದಾಣ ಜಾಲತಾಣದಲ್ಲಿ ಕನ್ನಡ ಭಾಷಾ ಆಯ್ಕೆ! ಟಿಕೆಟ್ ಬುಕಿಂಗ್, ವೇಳಾಪಟ್ಟಿ ಕನ್ನಡದಲ್ಲೇ ಲಭ್ಯ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸಿದೆ. ಇದು ಸ್ಥಳೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ.
ಪೂರ್ತಿ ಓದಿಕೈಗಟುಕುವ ದರದ ಮಾರುತಿ ಸುಜುಕಿ ಸಿಯಾಜ್ ಕಾರು ಉತ್ಪಾದನೆ ಸ್ಥಗಿತ, ಭಾವುಕ ವಿದಾಯ
ಕಳೆದ ಒಂದು ದಶಕದಿಂದ ಕೈಗೆಟುಕುವ ದರದಲ್ಲಿ ಲಭ್ಯವಿದ್ದ ಪ್ರೀಮಿಯಂ ಸೆಡಾನ್ ಕಾರಾದ ಮಾರುತಿ ಸುಜುಕಿ ಸಿಯಾಜ್ ಉತ್ಪಾದನೆ ಸ್ಥಗಿತಗೊಳಿಸಿದೆ. ಸಿಯಾಜ್ ಭಾವುಕ ವಿದಾಯ ಹೇಳಿದೆ.
ಪೂರ್ತಿ ಓದಿರತನ್ ಟಾಟಾ ಬಿಟ್ಟು ಹೋದ 3800 ಕೋಟಿ ರೂ ಆಸ್ತಿ ಹಂಚಿಕೆ ಬಹಿರಂಗ, ಯಾರಿಗೆ ಎಷ್ಟೆಷ್ಟು?
ರತನ್ ಟಾಟಾ ನಿಧನದ ಬಳಿಕ ಅವರ ಆಸ್ತಿ ಕುರಿತು ತೀವ್ರ ಕುತೂಹಲ ಮನೆ ಮಾಡಿತ್ತು. ಆಸ್ತಿ ಹಂಚಿಕೆಗೆ ರತನ್ ಟಾಟಾ ವಿಲ್ ಬರೆದಿಟ್ಟಿದ್ದರು. ಈ ವಿಲ್ ಪ್ರಕಾರ ಯಾರಿಗೆ ಎಷ್ಟೆಷ್ಟು ಕೋಟಿ ರೂ ಆಸ್ತಿ ಹಂಚಿಕೆ ಮಾಡಲಾಗಿದೆ? ಯಾರಿಗೆ ಎಷ್ಟು ಸಿಕ್ಕಿದೆ. ಎಲ್ಲಾ ಮಾಹಿತಿ ಬಹಿರಂಗವಾಗಿದೆ.
ಪೂರ್ತಿ ಓದಿರಂಜಾನ್ ಸಂಭ್ರಮ: ಮನೆಮುಂದೆ ಆಡುತ್ತಿದ್ದ 2 ವರ್ಷದ ಮಗು ಮೇಲೆ ಕಾರು ಹರಿಸಿದ 15 ವರ್ಷದ ಬಾಲಕ!
ರಂಜಾನ್ ಆಚರಣೆಯ ವೇಳೆ 15 ವರ್ಷದ ಬಾಲಕ ಚಲಾಯಿಸಿದ ಕಾರು ಹರಿದು 2 ವರ್ಷದ ಮಗು ಸಾವನ್ನಪ್ಪಿದೆ. ಮನೆಯ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ.
ಪೂರ್ತಿ ಓದಿ40 ಲಕ್ಷ ಸಾಲ ಮಾಡಿ ಅಮೆರಿಕಾಗೆ ಹೋದ, ಕೆಲಸ ಸಿಗದೆ ವಾಪಸ್ಸು, ಈಗ ಸಾಲದ ಮೇಲೆ ಸಾಲ!
ಅಮೆರಿಕದಲ್ಲಿ ಉದ್ಯೋಗ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ ಯುವಕನ ಕಥೆ ಇದು. 40 ಲಕ್ಷ ಸಾಲ ಮಾಡಿ ಅಮೆರಿಕದಲ್ಲಿ ಮಾಸ್ಟರ್ಸ್ ಮಾಡಿದರೂ, ಉದ್ಯೋಗವಿಲ್ಲದೆ ಊರಿಗೆ ಮರಳುವಂತಾಗಿದೆ.
ಪೂರ್ತಿ ಓದಿಜಪಾನ್ ವರದಿ ಬೆನಲ್ಲೇ ಶುರುವಾಗಿದೆ ಮೆಘಾಕ್ವೇಕ್ ಆತಂಕ, 3 ಲಕ್ಷ ಜನರ ಬಲಿಪಡೆಯಲಿದೆ ಎಂದ ವರದಿ
ಇದೀಗ ಎಲ್ಲೆಡೆ ಮೆಘಾಕ್ವೇಕ್ ಆತಂಕ ಹೆಚ್ಚಾಗುತ್ತಿದೆ. ಜಪಾನ್ ಸರ್ಕಾರ ಮುಂದಿಟ್ಟ ಅಧಿಕೃತ ವರದಿ ಪ್ರಕಾರ ಈ ಮೆಘಾಕ್ವೇಕ್ ಬರೋಬ್ಬರಿ 3 ಲಕ್ಷ ಮಂದಿಯನ್ನು ಬಲಿಪಡೆಯಲಿದೆ ಎಂದಿದೆ. ಏನಿದು ಮೆಘಾಕ್ವೇಕ್?
ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಕಿಂಗ್ ಕೊಹ್ಲಿ! ಫ್ಯಾನ್ಸ್‌ಗಿದು ಗುಡ್ ನ್ಯೂಸ್!
ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಅವರು 2027ರವರೆಗೂ ಏಕದಿನ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.
ಪೂರ್ತಿ ಓದಿBSNL ಗ್ರಾಹಕರಿಗೆ ಕಡಿಮೆ ಬೆಲೆಯ IPL ರೀಚಾರ್ಜ್ ಪ್ಲಾನ್! ಅನ್‌ಲಿಮಿಟೆಡ್ ಆಫರ್ ಮಿಸ್ ಮಾಡ್ಕೋಬೇಡಿ!
ಬಿಎಸ್ಎನ್ಎಲ್ IPL ಸೀಸನ್‌ನಲ್ಲಿ ಗ್ರಾಹಕರಿಗೆ ತಂದಿದೆ ಭರ್ಜರಿ ರೀಚಾರ್ಜ್ ಪ್ಲಾನ್ ತಂದಿದೆ. 4ಜಿ ಸೇವೆ ಮತ್ತು ಟವರ್ ಹಾಕಿ ನೆಟ್‌ವರ್ಕ್ ಸರಿಪಡಿಸೋಕೆ ಮುಂದಾಗಿರುವ ಬಿಎಸ್‌ಎನ್‌ಎಲ್ ಇದೀಗ ಐಪಿಎಲ್ ಪ್ರೇಮಿಗಳಿಗೆ 251 ರೂಪಾಯಿ ಪ್ಲಾನ್ ಮೂಲಕ ಭರ್ಜರಿ ಕೊಡುಗೆ ನೀಡಿದೆ.
ಪೂರ್ತಿ ಓದಿ