07:43 AM (IST) Oct 19

Karnataka News Live 19 October 2026 ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್ , ಆಯುಧ ಪೂಜೆ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಗಗನಕ್ಕೆ!

ಬೆಂಗಳೂರಿನಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮಳೆ ಕೊರತೆಯಿಂದಾಗಿ ಫಸಲು ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ವಸ್ತುಗಳ ದರ ಶೇ.50ರಷ್ಟು ದುಪ್ಪಟ್ಟಾಗಿದೆ. ಆದರೂ ಗ್ರಾಹಕರು ಸಂಭ್ರಮದಿಂದ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.
Read Full Story
07:15 AM (IST) Oct 19

Karnataka News Live 19 October 2026 ಚೆನ್ನೈ-ಮಂಗಳೂರು-ರಾಮೇಶ್ವರಂ ಏಕಮುಖ ವಿಶೇಷ ರೈಲು, ಈ ಹೊಸ ಮಾರ್ಗಗಳ ಬಗ್ಗೆ ನಿಮಗೆ ಗೊತ್ತೇ?

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ದಕ್ಷಿಣ ರೈಲ್ವೆಯು ಚೆನ್ನೈ-ಮಂಗಳೂರು ಮತ್ತು ಮಂಗಳೂರು-ರಾಮೇಶ್ವರಂ ನಡುವೆ ಏಕಮುಖ ವಿಶೇಷ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಅಕ್ಟೋಬರ್ 17 ಮತ್ತು 19 ರಂದು ಸಂಚರಿಸಲಿದ್ದು, ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ.
Read Full Story
06:55 AM (IST) Oct 19

Karnataka News Live 19 October 2026 ಮೈಸೂರಲ್ಲಿ 3474 ಡ್ರೋನ್‌ ಬಳಸಿ ನವಿಲಿನ ವಿನ್ಯಾಸ, ದಸರಾ ಶೋ ಗಿನ್ನೆಸ್‌ ದಾಖಲೆ

ಮೈಸೂರು ದಸರಾ ಪ್ರಯುಕ್ತ ಬನ್ನಿಮಂಟಪ ಮೈದಾನದಲ್ಲಿ ಸೆಸ್ಕ್ ವತಿಯಿಂದ ನಡೆದ ಡ್ರೋನ್ ಪ್ರದರ್ಶನವು ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ. 3473 ಡ್ರೋನ್‌ಗಳನ್ನು ಬಳಸಿ ರಚಿಸಿದ ನವಿಲಿನ ವಿನ್ಯಾಸವು ಈ ವಿಶ್ವ ದಾಖಲೆಗೆ ಪಾತ್ರವಾಗಿದೆ. ಲಂಡನ್‌ನಿಂದ ಬಂದಿದ್ದ ಗಿನ್ನೆಸ್ ತಂಡವು ಸೆಸ್ಕ್ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿತು.
Read Full Story
06:41 AM (IST) Oct 19

Karnataka News Live 19 October 2026 ಶರಾವತಿ ಕಣಿವೆ ಯೋಜನೆ - ನಿಯಾಸ್ ಸಂಸ್ಥೆ ನೀಡಿರುವ ಅಧ್ಯಯನ ವರದಿ ತಿರಸ್ಕರಿಸಲು ಆಗ್ರಹ

ಶರಾವತಿ ಕಣಿವೆಯಲ್ಲಿ ಉದ್ದೇಶಿತ 2000 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಿಯಾಸ್ ಸಂಸ್ಥೆ ನೀಡಿರುವ ವರದಿಯನ್ನು ತಿರಸ್ಕರಿಸುವಂತೆ ಪರಿಸರ ತಜ್ಞರು ಆಗ್ರಹಿಸಿದ್ದಾರೆ. ಈ ಯೋಜನೆಯಿಂದ ಅಪಾರ ಅರಣ್ಯ ನಾಶ ಮತ್ತು ಭೂಕುಸಿತದ ಅಪಾಯವಿದ್ದರೂ, ನಿಯಾಸ್ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ತಜ್ಞರ ಸಮಿತಿ ಕಳವಳ ವ್ಯಕ್ತಪಡಿಸಿದೆ.
Read Full Story
06:02 AM (IST) Oct 19

Karnataka News Live 19 October 2026 ಕಲಬುರಗಿ - ಶಂಕಿತ ಲಷ್ಕರ್‌ ಉಗ್ರ ವಶ; ಚಿನ್ನದಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮಲೀಕ್‌!

ಕಲಬುರಗಿಯ ಚಿನ್ನಾಭರಣ ಅಂಗಡಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಶಂಕಿತ ಉಗ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪವಿದೆ. ಈ ಹಿಂದೆ ಬಂಧಿತನಾಗಿದ್ದ ಮತ್ತೊಬ್ಬ ಶಂಕಿತನ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ.
Read Full Story
05:50 AM (IST) Oct 19

Karnataka News Live 19 October 2026 ಕಬ್ಬು ರೈತರ ಹೋರಾಟಕ್ಕೆ ತಾತ್ಕಾಲಿಕ ತೆರೆ - 2 ಬೇಡಿಕೆ ಈಡೇರಿಕೆ ಹೊಣೆ ಜೋಶಿ ಹೆಗಲಿಗೆ

ಟನ್‌ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ರೈತರು ಈ ನಿರ್ಧಾರ ಕೈಗೊಂಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಮತ್ತೆ ಬೃಹತ್ ಹೋರಾಟ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
Read Full Story