07:44 AM (IST) Oct 18

Karnataka News Live 18 October 2026 Dharwad - ಅಪರೂಪದ ಬಾಂಬೆ ಬ್ಲಡ್‌ ದಾನ ಮಾಡಿ 3 ವರ್ಷದ ಕಂದನ ಪ್ರಾಣ ಉಳಿಸಿದ ರಕ್ಷಕ!

ಧಾರವಾಡದ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕನಿಗೆ ತುರ್ತಾಗಿ ಅಪರೂಪದ 'ಬಾಂಬೆ ಬ್ಲಡ್' ಅಗತ್ಯವಿತ್ತು. ವಿಷಯ ತಿಳಿದ ಚಿಕ್ಕಮಗಳೂರಿನ ಮಹೇಶಕುಮಾರ್ ಎಂಬುವವರು 300 ಕಿಮೀ ಪ್ರಯಾಣಿಸಿ ರಕ್ತದಾನ ಮಾಡುವ ಮೂಲಕ ಮಗುವಿನ ಜೀವ ಉಳಿಸಿದ್ದಾರೆ.

Read Full Story
07:32 AM (IST) Oct 18

Karnataka News Live 18 October 2026 ಬೈಪಾಸ್ ರಸ್ತೆಯಲ್ಲಿ ಬಿಳಿ ಸೀರೆ ಮಹಿಳೆ, ದೆವ್ವದಿಂದ ದಾಳಿ - ಪೋಟೋ ವೈರಲ್‌ - CPI ಪರಿಶೀಲನೆ

ಚನ್ನಗಿರಿಯ ಬೈಪಾಸ್ ರಸ್ತೆಯಲ್ಲಿ ಬಿಳಿಸೀರೆ ಧರಿಸಿದ ದೆವ್ವವೊಂದು ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ, ಇದು ಎ.ಐ. ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಸುಳ್ಳು ಸುದ್ದಿ ಎಂದು ಸಿಪಿಐ ರವೀಶ್ ಸ್ಪಷ್ಟಪಡಿಸಿದ್ದಾರೆ.

Read Full Story
07:29 AM (IST) Oct 18

Karnataka News Live 18 October 2026 ಸಿಜೆಪಿ-ಕಾಂಗ್ರೆಸ್ ಎರಡೂ ಒಂದೇ, ಭಾರತ ವಿರೋಧಿಗಳಿಗೆ ರಾಹುಲ್ ಗಾಂಧಿ ಬೆಂಬಲ? ಶ್ರೀರಾಮುಲು ಹೇಳಿದ್ದೇನು?

ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ವಿದ್ಯಾರ್ಥಿ ಹಾಗೂ ನೀಟ್ ಹೋರಾಟದ ನೆಪದಲ್ಲಿ ಕಾಂಗ್ರೆಸ್ ದೇಶದಲ್ಲಿ ಬಾಂಗ್ಲಾ ಮಾದರಿಯ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
Read Full Story
07:20 AM (IST) Oct 18

Karnataka News Live 18 October 2026 Bengaluru - ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದ ವಿವಾದ - ಹೈಕೋರ್ಟ್‌ ಮಹತ್ವ ತೀರ್ಪು

ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಕಾನೂನು ಲೋಪಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಆಡಳಿತವನ್ನು ಮರಳಿ ಟ್ರಸ್ಟ್‌ಗೆ ಹಸ್ತಾಂತರಿಸಲು ಸೂಚಿಸಿದೆ.

Read Full Story