07:17 AM (IST) Oct 14

Karnataka News Live 14 October 2026 ಬೆಂಗಳೂರು ಪೊಲೀಸರ ಮೇಲೆ ಆಂಧ್ರ ಐಎಎಸ್‌ ಅಧಿಕಾರಿ ಹಲ್ಲೆ; FIR ದಾಖಲು, ಏನಿದು ಪ್ರಕರಣ?

ಬೆಂಗಳೂರಿನ ಎಂಜಿ ರಸ್ತೆಯ ಕಾವೋರ್ ಪಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ವಿಕಾಸ್ ಮತ್ತು ಅವರ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story
07:13 AM (IST) Oct 14

Karnataka News Live 14 October 2026 ‘108’ಕ್ಕೆ ಕರೆ ಮಾಡಿದರೆ ಇಂದು ರಾತ್ರಿಯಿಂದ ಆ್ಯಂಬುಲೆನ್ಸ್ ಬರಲ್ಲ! ಕರ್ತವ್ಯ ಬಹಿಷ್ಕರಿಸಿದ ಸಿಬ್ಬಂದಿ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್‌ ನೌಕರರು ಬುಧವಾರ ರಾತ್ರಿಯಿಂದ ಕರ್ತವ್ಯ ಬಹಿಷ್ಕರಿಸಲಿದ್ದಾರೆ. ಆದರೆ ನೌಕರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವರು, ಮುಂದಿನ ಎರಡು ತಿಂಗಳು 108 ಸೇವೆಯನ್ನು ಅವಲಂಬಿಸದಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
Read Full Story
07:05 AM (IST) Oct 14

Karnataka News Live 14 October 2026 CID ವಶದಲ್ಲಿದ್ದ ‘ಆಫ್ರಿಕನ್ ಗ್ರೇ’ ಗಿಳಿ ಮರಳಿಸಲು ಬೆಂಗಳೂರಿನ ನಿವಾಸಿ ಅರ್ಜಿ ಸಲ್ಲಿಕೆ

ಸ್ನೇಹಿತನಿಂದ ಪಡೆದು ಆರೈಕೆ ಮಾಡುತ್ತಿದ್ದ ಅಂಗವಿಕಲ 'ಆಫ್ರಿಕನ್ ಗ್ರೇ ಗಿಳಿ'ಯನ್ನು ಸಿಐಡಿ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ. ಇದನ್ನು ಪ್ರಶ್ನಿಸಿ ಪಕ್ಷಿಪ್ರೇಮಿ ಮಹೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗಿಳಿಯನ್ನು ಮರಳಿಸುವ ವಿಚಾರವಾಗಿ ನ್ಯಾಯಾಲಯವು ಸರ್ಕಾರ ಮತ್ತು ಸಿಐಡಿಗೆ ನೋಟಿಸ್ ಜಾರಿ ಮಾಡಿದೆ.
Read Full Story