ಬೆಂಗಳೂರು(ಜೂ.28): ರಾಜ್ಯದಲ್ಲಿ ಕೊರೋನಾ ಸೋಂಕು ತಗುಲಿ ಗಂಭೀರ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ದಿನೇ ದಿನೇ ತೀವ್ರವಾಗಿ ಹೆಚ್ಚುತ್ತಿದೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದವರ ಸಂಖ್ಯೆ 200ರ ಗಡಿಯತ್ತ ಸಮೀಪಿಸಿದೆ.

ಸೋಂಕಿನ ಮೂಲ ಪತ್ತೆ ನಿಲ್ಲಿಸಿದ ರಾಜ್ಯ ಸರ್ಕಾರ?: ಸಮುದಾಯಕ್ಕೆ ಹರಡಿರುವ ಆತಂಕ!

ಶನಿವಾರ ಒಟ್ಟು 18 ಮಂದಿ ಕೊರೋನಾ ಬಾಧಿತರು ಐಸಿಯುಗೆ ದಾಖಲಾಗಿದ್ದು, ರಾಜ್ಯದಲ್ಲಿ ಚಿಂತಾಜನಕ ಸ್ಥಿತಿ ತಲುಪಿರುವ ಸೋಂಕಿತರ ಸಂಖ್ಯೆ ಇದೀಗ 197ಕ್ಕೇರಿದೆ. ಈ ಪೈಕಿ ಬೆಂಗಳೂರಲ್ಲೇ 125 ಜನರಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ಮತ್ತಷ್ಟುಹೆಚ್ಚುವ ಆತಂಕ ಸೃಷ್ಟಿಯಾಗಿದೆ.

371 ಜನ ಬಿಡುಗಡೆ:

ಇದೇ ವೇಳೆ, ಸಾಕಷ್ಟುಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಶನಿವಾರ ರಾಯಚೂರಿನಲ್ಲಿ 102 ಮಂದಿ, ಬೀದರ್‌, ಬಳ್ಳಾರಿ ತಲಾ 60, ರಾಯಚೂರು 41, ಕಲಬುರಗಿ 24 ಜನ ಸೇರಿದಂತೆ 21 ಜಿಲ್ಲೆಗಳಲ್ಲಿ ಸೋಂಕಿನಿಂದ ಗುಣಮುಖರಾದ 371 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 7,287ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಒಂದೇ ದಿನ 918 ಕೇಸ್‌ ಮಹಾಸ್ಫೋಟ!

4441 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಅನ್ಯ ಕಾರಣಗಳಿಂದ ಮೃತಪಟ್ಟಸೋಂಕಿತರು ಸೇರಿ 195 ಮಂದಿ ಸೋಂಕಿತರು ಈವರೆಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.