ಬೆಂಗಳೂರು(ಜೂ.28): ರಾಜ್ಯದಲ್ಲಿ ಇದುವರೆಗೂ ದೃಢಪಟ್ಟಬಹುತೇಕ ಕೊರೋನಾ ಸೋಂಕಿತರಿಗೆ ಯಾವ ಮೂಲದಿಂದ ಸೋಂಕು ಬಂತೆಂದು ದೈನಂದಿನ ವರದಿಯಲ್ಲಿ ಮಾಹಿತಿ ನೀಡುತ್ತಾ ಬಂದಿದ್ದ ಆರೋಗ್ಯ ಇಲಾಖೆ ದೈನಂದಿನ ವರದಿಯ ಮಾದರಿಯಲ್ಲಿ ದಿಢೀರ್‌ ಬದಲಾವಣೆ ಮಾಡಿದೆ. ಸೋಂಕಿನ ಮೂಲದ ಬಗ್ಗೆ ಮಾಹಿತಿ ಕೊಡುವುದನ್ನು ಶನಿವಾರ ನಿಲ್ಲಿಸಿದೆ.

"

ರಾಜ್ಯದಲ್ಲಿ ಒಂದೇ ದಿನ 918 ಕೇಸ್‌ ಮಹಾಸ್ಫೋಟ!

ಶನಿವಾರ ದಾಖಲೆಯ 916 ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿದ್ದು, ಈ ಪೈಕಿ ಒಂದು ಪ್ರಕರಣದಲ್ಲೂ ಸೋಂಕಿಗೆ ಕಾರಣ ದಾಖಲಿಸಲಾಗಿಲ್ಲ. ಇದರೊಂದಿಗೆ ಇಲಾಖೆಯು ಆರಂಭದಿಂದಲೂ ಸೋಂಕಿನ ಮೂಲದ ಮಾಹಿತಿ ನೀಡುವಲ್ಲಿ ಅನುಸರಿಸಿಕೊಂಡು ಬಂದಿದ್ದ ಮಾದರಿಯನ್ನು ಕೈಬಿಟ್ಟಂತಾಗಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಮೂಲ ಪತ್ತೆಹಚ್ಚುವುದೇ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗುತ್ತಿದೆ. ಯಾವುದೇ ಪ್ರಯಾಣ ಹಿನ್ನೆಲೆ, ಸೋಂಕಿತರ ಸಂಪರ್ಕ, ಕಂಟೈನ್ಮೆಂಟ್‌ ಪ್ರದೇಶ ಹಿನ್ನೆಲೆ ಸೇರಿದಂತೆ ಸೋಂಕು ಹರಡಲು ಸಾಧ್ಯತೆ ಇರುವ ಯಾವ ಹಿನ್ನೆಲೆ ಇಲ್ಲದವರಿಗೂ ಸೋಂಕು ದೃಢಪಡುತ್ತಿರುವುದು ಹೆಚ್ಚಾಗುತ್ತಿದೆ. ಜೊತೆಗೆ ಶೀತಜ್ವರ (ಐಎಲ್‌ಐ) ಸಮಸ್ಯೆಯಿಂದ ಹಾಗೂ ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಯಿಂದ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿ ದೃಢಪಡುತ್ತಿವೆ.

ಬೆಂಗ್ಳೂರಲ್ಲಿ ಸ್ಮಶಾನಕ್ಕಾಗಿ ಹುಡುಕಾಟ!

ಕೋವಿಡ್‌ ವಾರ್‌ ರೂಂ ವಿಶ್ಲೇಷಣೆ ಪ್ರಕಾರ ರಾಜ್ಯದಲ್ಲಿ ಸಾರಿ ಮತ್ತು ಐಎಲ್‌ಐ ಸೋಂಕಿತರ ಪ್ರಮಾಣ ಶೇ.10ಕ್ಕೆ ಏರಿಕೆಯಾಗಿದೆ ಹಾಗೂ ಸೋಂಕು ಪತ್ತೆಯಾಗದವರ ಪ್ರಮಾಣ ಶೇ.9ರಷ್ಟುಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಸಮುದಾಯಕ್ಕೆ ಕೊರೋನಾ ಹರಡುತ್ತಿದೆಯಾ ಎಂಬ ಆತಂಕ ಹೆಚ್ಚಿದೆ