ನಕ್ಸಲರು ಶೃಂಗೇರಿ ಕಾಡಲ್ಲಿಟ್ಟಿದ್ದ ಶಸ್ತ್ರಾಸ್ತ್ರ ವಶ!
ನಕ್ಸಲರಿಗೆ ಸೇರಿದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ, ತುಕ್ಕು ಹಿಡಿದಿರುವ ಗನ್‌ಗಳೂ ಪತ್ತೆಯಾಗಿದ್ದು, ನಕ್ಸಲರು ಇಂತಹ ಗನ್‌ಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದರಾ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಚಿಕ್ಕಮಗಳೂರು(ಜ.12): ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದ 6 ನಕ್ಸಲೀಯರಿಗೆ ಸೇರಿದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡು ಏನಾಯ್ತು ಎಂಬ ಪ್ರಶ್ನೆ, ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
ನಕ್ಸಲರಿಗೆ ಸೇರಿದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ, ತುಕ್ಕು ಹಿಡಿದಿರುವ ಗನ್‌ಗಳೂ ಪತ್ತೆಯಾಗಿದ್ದು, ನಕ್ಸಲರು ಇಂತಹ ಗನ್‌ಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದರಾ ಎಂಬ ಪ್ರಶ್ನೆಗಳು ಕಾಡುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಲೆಗುಳಿ ಗ್ರಾಮದ ಬಳಿ ದಟ್ಟ ಅರಣ್ಯದಲ್ಲಿದ್ದ ಮದ್ದು ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದ್ದಾರೆ. ಇಲ್ಲಿನ ಜಯಪುರ ಪೊಲೀಸ್ ಠಾಣೆಯಲ್ಲಿ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪರಿಚಿತರು ಎಂದು ನಮೂದಿಸಲಾಗಿದೆ.
ನಕ್ಸಲರನ್ನು ವಿಧಾನಸೌಧಕ್ಕೆ ಕರೆತರದಿರುವುದೇ ಪುಣ್ಯ: ಜೆಡಿಎಸ್ ನಾಯಕ ಜ್ಯೋತಿ ಪ್ರಕಾಶ ಮಿರ್ಜಿ
ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರ:
ಒಂದು ಎಕೆ 56, ಮೂರು 303 ರೈಫಲ್, ಒಂದು 12 ಬೋರ್‌ಎಸ್‌ಎಸ್‌ಬಿಎಲ್, ಒಂದು ಕಂಟ್ರಿಮೇಡ್ ಪಿಸ್ತೂಲ್ ಸೇರಿದಂತೆ ಒಟ್ಟು ಆರು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಇವುಗಳೊಂದಿಗೆ ಹನ್ನೊಂದು 7.62 ಎಂ. ಎಂ.ನ ಎಕೆ 56ರ 11 ಮದ್ದು ಗುಂಡು, 303 ರೈಫಲ್‌ನ 133 ಮದ್ದು ಗುಂಡು, 12 ಬೋರ್ ಕಾರ್ಟಿಜ್‌ನ 24, ಕಂಟ್ರಿಮೇಡ್ ಪಿಸ್ತೂಲ್‌ನ 8 ಮದ್ದು ಗುಂಡು ಸೇರಿದಂತೆ ಒಟ್ಟು 176 ಮುದ್ದುಗುಂಡು ವಶಪಡಿಸಿಕೊಳ್ಳಲಾಗಿದೆ. ಇವುಗಳೊಂದಿಗೆ ಎಕೆ 56ನ ಖಾಲಿ ಮ್ಯಾಗಜಿನ್ ಸಹ ಪತ್ತೆಯಾಗಿದೆ. ಈ ವೇಳೆ, ತುಕ್ಕು ಹಿಡಿದಿರುವ ಗನ್‌ಗಳೂ ಪತ್ತೆಯಾಗಿವೆ.
ನಕ್ಸಲರು ಶರಣಾಗಿ ಅವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡಿದರೆ ಅವರಿಗೆ ಸಹಾಯಧನದ ಜತೆಗೆ ಅವರು ವಶಕ್ಕೆ ನೀಡುವ ಶಸ್ತ್ರಾಸ್ತ್ರಗಳಿಗೆ ಇಂತಿಷ್ಟು ಹಣ ನೀಡಲು ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿ ಅವ ಕಾಶ ನೀಡಲಾಗಿದೆ. ಅದರಂತೆ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಆಯುಧಗಳಿಗೂ ಸಹಾಯಧನ ನೀಡಲಾಗುವುದು.
ಎಷ್ಟು ಪರಿಹಾರ?:
ಒಂದು ಎಕೆ 56 ಶಸ್ತ್ರಾಸ್ತ್ರಕ್ಕೆ 30 ಸಾವಿರ, 303 ಒಂದು ರೈಫಲ್‌ಗೆ 50 ಸಾವಿರ, 12 ಬೋರ್ ಎಸ್‌ಎಸ್‌ಬಿಎಲ್‌ನ ಒಂದು ಗನ್‌ಗೆ 50 ಸಾವಿರ, ಒಂದು ಪಿಸ್ತೂಲ್ ಗೆ 10 ಸಾವಿರ, ಪ್ರತಿ ಒಂದು ಮದ್ದುಗುಂಡಿಗೆ 100ನಂತೆ ಸಹಾಯಧನ ನೀಡಲಾಗುವುದು.
ನಕ್ಸಲರು ಶರಣಾಗಿದ್ದಾರೋ?, ಸರ್ಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ.ರವಿ
ಎಲ್ಲರಿಗಿಂತ ಮೊದಲೇ ತಿಳಿವುದು ಇಲ್ಲೇ!
ನಕ್ಸಲರು ಅರಣ್ಯದಲ್ಲಿ ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದು, ಇನ್ನೆರಡು ದಿನದಲ್ಲಿ ಪೊಲೀಸರ ವಶವಾಗಲಿದೆ ಎಂದು 'ಕನ್ನಡಪ್ರಭ' ಮಾತ್ರ ಜ.10ರಂದು ವರದಿ ಮಾಡಿತ್ತು.
ಬಿಜೆಪಿ ಆಳ್ವಿಕೆಯ ಛತ್ತೀಸ್‌ಗಢದಲ್ಲಿ 9 ನಕ್ಸಲರು ಶರಣು
ಸುಕ್ಖಾ: ಬಿಜೆಪಿ ಆಡಳಿತಇರುವ ಛತ್ತೀಸಗಢದಲ್ಲಿ 43 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಕ್ಸಲರು ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ. ನಕ್ಸಲರ ಶಸ್ತ್ರಾಸ್ತ್ರ ರಹಿತರಾಗಿ ಶರಣಾಗಿದ್ದಾರೆ. ಕರ್ನಾಟಕದಲ್ಲಿ ಕೂಡ ಶಸ್ತ್ರಾಸ್ತ್ರರಹಿತರಾಗಿ ಇತ್ತೀಚೆಗೆ 6 ನಕ್ಸಲರು ಸಿಎಂ ಮುಂದೆ ಶರಣಾಗಿದ್ದರು. ಶರಣಾದ ನಕಲೀಯರಿಗೆ ತಲಾ 25 ಸಾವಿರ ರು. ನೀಡಲಾಗಿದ್ದು, ಸರ್ಕಾರನೀತಿಯಂತೆ ಇನ್ನಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.