ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ: ಮುಜರಾಯಿ ಇಲಾಖೆ ನಿರ್ಧಾರ
ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಬೆಂಗಳೂರು (ಜೂ.21): ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ (Old age people Direct entry on temple) ಅವಕಾಶ ಮಾಡಿಕೊಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲಾಗುವುದು. ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಹಿರಿಯ ನಾಗರೀಕರಿಗಾಗಿ ವಿಶೇಷ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಸುಳಿವನ್ನು ರಾಜ್ಯದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ನೀರಿನ ಮೇಲೆ ಮಲಗಿದ ಯೋಗ ಸಾಧಕ: ಜಲಯೋಗ ನೀವು ಪ್ರಯತ್ನಿಸಬೇಡಿ
ಆನ್‌ಲೈನ್ ಬುಕಿಂಗ್‌ನಲ್ಲೂ ರಿಯಾಯಿತಿ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ವಯಸ್ಸಾದವರು ಸಾಮಾನ್ಯ ಕ್ಯೂನಲ್ಲಿ ನಿಂತು ಹೋಗಲು ಸಾಧ್ಯವಿಲ್ಲ. ಸಹಜವಾಗಿ ಕೆಲವರಿಗೆ 65 ವರ್ಷ ಆದ ನಂತ್ರ ತುಂಬಾ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಬೇರೆ ಕ್ಯೂ ಮಾಡಲು ತಿಳಿಸಿದ್ದೇನೆ. ಆನ್ಲೈನ್ ಬುಕ್ಕಿಂಗ್‌ನಲ್ಲೂ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕೊಡಲು ತಿಳಿಸಿದ್ದೇನೆ. ಎಲ್ಲ ದೇವಸ್ಥಾನಗಳು ಸ್ವಚ್ಚವಾಗಿರಬೇಕು. ದೇವಸ್ಥಾನಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಹಿರಿಯ ನಾಗರಿಕರ ಪರವಾಗಿ ಪತ್ರ ಬರೆದಿದ್ದ ಅರ್ಚಕರ ಒಕ್ಕೂಟ: ರಾಜ್ಯದಲ್ಲಿ ಹಿರಿಯ ನಾಗರೀಕರ ಪರನಿಂತ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟವು ಕರ್ನಾಟಕ ಸರ್ಕಾರದ ಹಿಂದೂ ದೇವಾಲಯಗಳಲ್ಲಿ ಹಿರಿಯನಾಗರಿಕರಿಗೆ ನೇರ ದರ್ಶನಕ್ಕೆ ಮನವಿ ಸಲ್ಲಿಕೆ ಮಾಡಲಾಗುತ್ತು. 65 ವರ್ಷ ಮೇಲ್ಪಟ್ಟವರಿಗೆ ದೇವಾಲಯಗಳಲ್ಲಿ ನೇರ ಸಂದರ್ಶನಕ್ಕೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಅರ್ಚಕರ ಒಕ್ಕೂಟದಿಂದ ಮುಜುರಾಯಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಮುಖರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿಗೆ ಪತ್ರ ಬರೆದು ನೇರವಾಗು ಅರ್ಚಕರ ಒಕ್ಕೂಟದಿಂದ ಅವರಿಗೆ ಮನವಿ ಮಾಡಲಾಗಿತ್ತು. ಆದ್ದರಿಂದ, ರಾಜ್ಯದ ಎ ಮತ್ತು ಬಿ ವರ್ಗದ ಸಂಸ್ಥೆಗಳಲ್ಲಿ ಹಿರಿಯನಾಗರೀಕರಿಗೆ ಕ್ಯೂ ಇಲ್ಲದೇ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಶಕ್ತಿ ಯೋಜನೆ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದ ಮಹಿಳಾ ಭಕ್ತರು!
ಟ್ರಸ್ಟ್, ಖಾಸಗಿ ಆಡಳಿತ ದೇವಾಲಯಗಳಲ್ಲಿ ಇಲ್ಲ: ಇನ್ನು ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿರಲಿದೆ. ಆದರೆ, ಖಾಸಗಿ ಆಡಳಿತ ಮಂಡಳಿಯ, ಧಾರ್ಮಿಕ-ದತ್ತಿ ಸಮಿತಿಗಳಿಂದ ನಡೆಯುವ ಹಾಗೂ ಟ್ರಸ್ಟ್‌ಗಳಿಂದ ನಡೆಯುವ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯಾವುದೇ ತೀರ್ಮಾನವನ್ನು ಮಾಡಿಲ್ಲ. ಇದರಿಂದಾಗಿ, ಧರ್ಮಸ್ಥಳ, ಉಡುಪಿ ಅಷ್ಟಮಠಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೇರ ದರ್ಶನದ ಬಗ್ಗೆ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಇನ್ನು ದೇವಸ್ಥಾನಗಳಿಗೂ ಈ ಬಗ್ಗೆ ಸರ್ಕಾರ ಸೂಚನೆ ನೀಡುವುದೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.