ನೀರಿನ ಮೇಲೆ ಮಲಗಿದ ಯೋಗ ಸಾಧಕ: ಜಲಯೋಗ ನೀವು ಪ್ರಯತ್ನಿಸಬೇಡಿ

ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಇಲ್ಲೊಬ್ಬ ಯೋಗ ಸಾಧಕರು ಜಲಯೋಗ ಸಿದ್ಧಿಯಿಂದ ನೀರಿನ ಮೇಲೆ ಮಲಗಿದ್ದಾರೆ. 

Karnataka Pawan Kumar Valakeri water yoga practitioner sleep on the water sat

ಕಲಬುರಗಿ (ಜೂ.21): ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಇಲ್ಲೊಬ್ಬ ಯೋಗ ಸಾಧಕರು ಜಲಯೋಗ ಸಿದ್ಧಿಯಿಂದ ನೀರಿನ ಮೇಲೆ ಮಲಗಿದ್ದಾರೆ. 

ಸಾಮಾನ್ಯವಾಗಿ ನಾವು ದಿನಕ್ಕೆ ಅರ್ಧ ಗಂಟೆ ನೆಲದ ಮೇಲೆ ಕೆಲವು ಆಸನಗಳ ಯೋಗವನ್ನು ಮಾಡಲು ನಾವು ಹಿಂದೇಟು ಹಾಕುತ್ತೇವೆ. ಆದರೆ, ಕಲಬುರಗಿಯಲ್ಲೊಬ್ಬ ವಿಶಿಷ್ಠ ಯೋಗ ಸಾಧಕರು ಬಾವಿಯಲ್ಲಿ ಸತತ ಎರಡು ಗಂಟೆಗೂ ಅಧಿಕ ಸಮಯ ಜಲಯೋಗಾಸನ ಮಾಡಿದ ಇವರು ಯೋಗ ಸಾಧನೆಗೆ ಉದಾಹರಣೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ನಂದಿಕೂರು ಗ್ರಾಮ ಪಂಚಾಯಿತಿ ಸದಸ್ಯ ಪವನ್ ಕುಮಾರ ವಳಕೇರಿಯಿಂದ ಜಲಯೋಗಾಸನ ಮಾಡಿದ ಸಾಧಕರಾಗಿದ್ದಾರೆ. ನಂದಿಕೂರು ಗ್ರಾಮದ ಮಲ್ಲೇಶಪ್ಪ ಎಂಬುವರ ತೋಟದ ಬಾವಿಯಲ್ಲಿ ಜಲಯೋಗಾಸನ ಪ್ರದರ್ಶನ ಮಾಡಿದ್ದಾರೆ.

Raichur: ಸ್ಮಶಾನ ಜಾಗಕ್ಕಾಗಿ ಚರಂಡಿ ನೀರು ಮೈಮೇಲೆ ಸುರಿ​ದು​ಕೊಂಡ ಮಹಿಳೆ

ಹಲವು ವರ್ಷಗಳ ಬಳಿಕ ಜಲಯೋಗ ಸಿದ್ಧಿ: ಕಳೆದ ಹಲವು ವರ್ಷಗಳಿಂದ ಬಾವಿಯಲ್ಲಿ ಜಲಯೋಗಸಾನ ಮಾಡ್ತಾ ಬಂದಿರೋ ಪವನ್‌ಕುಮಾರ ವಳಕೇರಿ (Pawan Kumar Valakeri water yoga) ಅವರು ಗ್ರಾಮದಲ್ಲಿಯೇ ಯೋಗಾಸಕ್ಕೆ ಸೀಮಿತವಾಗಿದ್ದರು. ಆದರೆ, ಇಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿನಿತ್ಯ ಮಾಡುತ್ತಿದ್ದ ಅವಧಿಗಿಂತ ಒಂದು ಗಂಟೆ ಹೆಚ್ಚಾಗಿಯೇ ಜಲಯೋಗ ಪ್ರದರ್ಶನ ಮಾಡಿದ್ದಾರೆ. ಎಲ್ಲರೂ ನೆಲದ ಮೇಲೆ ಯೋಗ ಮಾಡಿದ್ರೆ ಇವರು ನೀರಿ‌ನ ಮೇಲೆ ಹಲವು ಆಸನ ಮಾಡಿ ಗಮನ ಸೆಳೆಯುತ್ತಿದ್ದಾರೆ. ಆದರೆ, ಇವರು ವಿಶ್ವ ಯೋಗ ದಿನಾಚರಣೆ ಹಿನ್ನಲೆ ಎರಡು ಗಂಟೆ ಜಲ ಯೋಗಾಸನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಅಭ್ಯಾಸವಿಲ್ಲದೇ ಆಳ ನೀರಿನಲ್ಲಿ ಪ್ರಯತ್ನ ಬೇಡ: ಇನ್ನು ಜಲಯೋಗಕ್ಕೆ ಹಲವು ವರ್ಷಗಳ ಪ್ರಯತ್ನ ಬೇಕು. ಏಕಾಏಕಿ ಜಲಯೋಗ ಮಾಡಲು ಸಾಧ್ಯವೂ ಇಲ್ಲ. ನಾನೂ ಜಲಯೋಗ ಮಾಡುತ್ತೇನೆ ಎಂದು ಆಳವಿರುವ ನೀರಿಗೆ ಇಳಿದು ಯೋಗ ಮಾಡಲು ಮುಂದಾಗಬೇಡಿ, ಯಾಕೆಂದರೆ ಒಂದು ವೇಳೆ ಮುಳುಗಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮತ್ತೊಂದೆಡೆ ಒಬ್ಬರೇ ಇರುವಾಗಲೂ ಕೂಡ ಈ ಯೋಗವನ್ನು ಮಾಡುವುದು ಅಪಾಯಕಾರಿ ಎಂದು ಯೋಗ ಸಾಧಕ ಪವನ್ ಕುಮಾರ ವಳಕೇರಿ ಅವರು ಸಲಹೆಯನ್ನು ನೀಡಿದ್ದಾರೆ. ಸತತ ಪ್ರಯತ್ನದಿಂದ ಎಲ್ಲ ಸಾಧನೆಯೂ ಫಲಿಸುತ್ತದೆ. ಹೀಗಾಗಿ, ದಿನೇ ದಿನೇ ಪ್ರಯತ್ನದ ಮೂಲಕ ಯೋಗ ಸಾಧನೆ ಮಾಡಬೇಕು ಎಂದು ತಿಳಿಸಿದರು. 

9ನೇ ವಿಶ್ವ ಯೋಗ ದಿನಾಚರಣೆ: ವಿಧಾನಸೌಧ ಮುಂಭಾಗ ಯೋಗಾಸನ ಮಾಡಿ ಗಮನಸೆಳೆದ ಗಣ್ಯರು

ಬೆಂಗಳೂರಲ್ಲಿ ರಾಜ್ಯಪಾಲರ ನೇತೃತ್ವದಲ್ಲಿ ಯೋಗ ದಿನಾಚರಣೆ:  ಬೆಂಗಳೂರು (ಜೂ.21): ಆಯುಷ್ ಇಲಾಖೆ ವತಿಯಿಂದ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಧಾನಸೌಧದಲ್ಲಿ ಆಚರಿಸಲಾಯಿತು. ವಿಧಾನಸೌಧದಲ್ಲಿ ಯೋಗಾಭ್ಯಾಸವನ್ನು ಮಾಡುವ ಮೂಲಕ ಗಣ್ಯರು ಗಮನಸೆಳೆದರು. ಆಯುಷ್ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ಪೀಕರ್ ಯು.ಟಿ ಖಾದರ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಮಾಜಿ ಕ್ರಿಕೆಟಿಗ ವಿ.ಕೆ ವೆಂಕಟೇಶ್ ಪ್ರಸಾದ್, ಅಂಜು ಬಾಬಿ ಜಾರ್ಜ್, ನಟಿ ಭಾವನಾ ಭಾಗಿಯಾಗಿದ್ದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಸುದೇವ ಕುಟುಂಬಕಂ ಫೋಷವಾಕ್ಯದಡಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

Latest Videos
Follow Us:
Download App:
  • android
  • ios